Advertisement

ಹಿಮಾಚಲ ಸಿಎಂಗೆ ಸೇರಿದ ಫಾರ್ಮ್ಹೌಸ್‌ ಮುಟ್ಟುಗೋಲು

03:45 AM Apr 04, 2017 | Harsha Rao |

ನವದೆಹಲಿ: ಅಕ್ರಮ ಆಸ್ತಿ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಕುಟುಂಬಕ್ಕೆ ಸೇರಿದ, 27 ಕೋಟಿ ರೂ. ಮೌಲ್ಯದ ಫಾರ್ಮ್ಹೌಸ್‌ ಅನ್ನು ಮುಟ್ಟುಗೋಲು ಹಾಕಿಕೊಂಡಿದೆ. ದಕ್ಷಿಣ ದೆಹಲಿಯ ಮೆಹೌಲಿಯಲ್ಲಿರುವ ಈ ಫಾರ್ಮ್ಹೌಸ್‌ನ ಸರ್ಕಾರಿ ಮೌಲ್ಯ 6.6 ಕೋಟಿ ರೂ. ಇದ್ದು, ಮಾರುಕಟ್ಟೆ ಮೌಲ್ಯ 27 ಕೋಟಿ ರೂ.ಗಳಾಗಿದೆ. 10 ಕೋಟಿ ರೂ. ಅಕ್ರಮ ಹಣ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿರುವ ಸಿಬಿಐ, ಇತ್ತೀಚೆಗಷ್ಟೇ ವೀರಭದ್ರಸಿಂಗ್‌ ಹಾಗೂ ಅವರ ಪತ್ನಿ ಸೇರಿ ಹಲವರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿತ್ತು. ಈ ಕ್ರಮದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಕೂಡ ಕಠಿಣ ಕ್ರಮಕ್ಕೆ ಮುಂದಾಗಿದೆ. ಹಿಮಾಚಲಪ್ರದೇಶ ಸಿಎಂ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್‌ ಶೀಟ್‌ ಕುರಿತ ವಿಚಾರಣೆಯನ್ನು ವಿಶೇಷ ನ್ಯಾಯಲಯವು ಬರುವ ವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next