Advertisement

ಖೇಲ್‌ರತ್ನಕ್ಕೆ ಹಿಮಾ ದಾಸ್‌ಹೆಸರು ಶಿಫಾರಸು

03:05 AM Jun 16, 2020 | Sriram |

ಹೊಸದಿಲ್ಲಿ: ಖ್ಯಾತ ಸ್ಪ್ರಿಂಟರ್‌ ಹಿಮಾ ದಾಸ್‌ ಹೆಸರನ್ನು ಅಸ್ಸಾಂ ಸರಕಾರ ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ರಾಜ್ಯದ ಕ್ರೀಡಾ ಕಾರ್ಯದರ್ಶಿ ದುಲಾಲ್‌ಚಂದ್ರ ದಾಸ್‌ ಇದಕ್ಕೆ ಸಂಬಂಧಿಸಿದ ಶಿಫಾರಸು ಪತ್ರವನ್ನು ಜೂ. 5ರಂದೇ ಕೇಂದ್ರಕ್ಕೆ ಕಳಿಸಿದ್ದಾಗಿ ತಿಳಿದು ಬಂದಿದೆ.

Advertisement

20ರ ಹರೆಯದ ಹಿಮಾ ದಾಸ್‌ ಅಸ್ಸಾಂನ ಧಿಂಗ್‌ ಗ್ರಾಮದವರಾಗಿದ್ದು, ಈ ವರ್ಷ ಖೇಲ್‌ರತ್ನಕ್ಕೆ ಶಿಫಾರಸು ಮಾಡಲ್ಪಟ್ಟ ಅತೀ ಕಿರಿಯ ಕ್ರೀಡಾಪಟುವಾಗಿದ್ದಾರೆ. ಅವರು ಈಗಾಗಲೇ 2018ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next