Advertisement

ವಿಶ್ವ ಆ್ಯತ್ಲೆಟಿಕ್ಸ್‌ ರಿಲೇ : ಹಿಮಾ ದಾಸ್‌, ದ್ಯುತಿ ಚಂದ್‌ ಪ್ರಯಾಣಕ್ಕೆ ಚ್ಯುತಿ

10:11 PM Apr 28, 2021 | Team Udayavani |

ನವ ದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದ ಒಲಿಂಪಿಕ್ಸ್‌ ಅರ್ಹತೆಯ ಹಾದಿಯಲ್ಲಿದ್ದ ಹಿಮಾ ದಾಸ್‌, ದ್ಯುತಿ ಚಂದ್‌ ಮೊದಲಾದ ಸ್ಪ್ರಿಂಟರ್‌ಗಳ ಕನಸಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.

Advertisement

ಪೋಲೆಂಡ್‌ನ‌ಲ್ಲಿ ಮೇ 1 ಹಾಗೂ 2ರಂದು ವಿಶ್ವ ಅಥ್ಲೆಟಿಕ್ಸ್‌ ರಿಲೇ ನಡೆಯಲಿದ್ದು, ಕೋವಿಡ್‌-19 ಹೆಚ್ಚುತ್ತಿರುವ ಕಾರಣ ಭಾರತದಿಂದ ಆಮ್‌ಸ್ಟರ್‌ಡಮ್‌ಗೆ ವಿಮಾನ ಸಂಪರ್ಕ ಸ್ಥಗಿತಗೊಂಡಿದೆ. ಇದರಿಂದ ಸ್ಟಾರ್‌ ಅಥ್ಲೀಟ್‌ಗಳಾದ ಹಿಮಾ ದಾಸ್‌ ಮತ್ತು ದ್ಯುತಿ ಚಂದ್‌ ಅವರು ಒಲಿಂಪಿಕ್ಸ್‌ ಅರ್ಹತೆ ಕಲ್ಪಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.

ಮಹಿಳೆಯರ 4/100 ಮೀ. ಹಾಗೂ ಪುರುಷರ ವಿಭಾಗದ 4/400 ಮೀ. ತಂಡಗಳು ಆಮ್‌ಸ್ಟರ್‌ಡಮ್‌ಗೆ ಗುರುವಾರ ಬೆಳಗಿನ ಜಾವ ತೆರಳಬೇಕಿತ್ತು. ಆದರೆ ಡಚ್‌ ಸರಕಾರ ಭಾರತದಿಂದ ಬರುವ ವಿಮಾನಗಳನ್ನು ಸೋಮವಾರದ ಸಂಜೆಯಿಂದಲೇ ಸ್ಥಗಿತಗೊಳಿಸಿದೆ.

ಇದನ್ನೂ ಓದಿ :ವೈದ್ಯಾಧಿಕಾರಿಗಳ ನೇಮಕಾತಿ ಕನಿಷ್ಟ ವಯೋಮಿತಿ ಹೆಚ್ಚಳ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್‌

ಪರ್ಯಾಯ ವ್ಯವಸ್ಥೆ?
ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌ ಪೋಲೆಂಡ್‌ಗೆ ತೆರಳುವುದಕ್ಕೆ ಯುರೋಪ್‌ನ ಮೂಲಕ ಪರ್ಯಾಯ ವಿಮಾನ ವ್ಯವಸ್ಥೆ ಮಾಡುವುದಕ್ಕೆ ಪ್ರಯತ್ನಿಸುತ್ತಿದೆ. ಆದರೆ ನಮ್ಮ ತಂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳಿವೆ. ಹಲವಾರು ಯುರೋಪಿಯನ್‌ ರಾಷ್ಟ್ರಗಳು ಭಾರತದ ವಿಮಾನಗಳನ್ನು ನಿರ್ಬಂಧಿಸಿವೆ ಎಂದು ಹಿರಿಯ ಎಎಫ್ಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next