Advertisement

ಬಿಜೈ ಬಟ್ಟಗುಡ್ಡ ಬಳಿ ಗುಡ್ಡ ಕುಸಿತ

01:17 AM Jun 03, 2020 | Sriram |

ಮಂಗಳೂರು, ಜೂ.2: ಕಳೆದ ವರ್ಷ ನಗರದಲ್ಲಿ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಸಂಭವಿಸಿದ್ದ ಬಿಜೈ ಬಟ್ಟಗುಡ್ಡ ಈಗ ಮತ್ತೂಮ್ಮೆ ಸಾರ್ವಜನಿ ಕರ ಆತಂಕಕ್ಕೆ ಕಾರಣವಾಗಿದೆ.

Advertisement

ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗು ತ್ತಿದ್ದು, ಒಂದೇ ಮಳೆಗೆ ಈ ಪ್ರದೇಶದ ಗುಡ್ಡ ಕುಸಿಯಲಾರಂಭಿಸಿದೆ. ಬಟ್ಟಗುಡ್ಡ ಬಳಿ ಗುಡ್ಡ ಕುಸಿಯುವ ಭೀತಿ ಇದ್ದು, ಇನ್ನೂ ಶಾಶ್ವತ ಪರಿಹಾರವಾಗಿಲ್ಲ ಎಂದು “ಉದಯವಾಣಿ ಸುದಿನ’ದಲ್ಲಿ ವರದಿ ಪ್ರಕಟಗೊಂಡಿತ್ತು.

ಕಳೆದ ವರ್ಷ ಮಳೆಗೆ ಭೂಕುಸಿತ ಉಂಟಾಗಿ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಮಳೆಗಾಲ ಮುಗಿದು ವರ್ಷ ಕಳೆದರೂ ಗುಡ್ಡ ಕುಸಿತ ಭಾಗದಲ್ಲಿ ಗೋಣಿ ಚೀಲ ಇಟ್ಟು ತಾತ್ಕಾಲಿಕ ಪರಿಹಾರವನ್ನು ಕಲ್ಪಿಸಲಾಗಿತ್ತೇ ವಿನಾ ಯಾವುದೇ ರೀತಿಯ ಶಾಶ್ವತ ಪರಿಹಾರವಾಗಿಲ್ಲ. ಕಳೆದ ಎರಡು ದಿನಗಳಿಂದ ಆರಂಭ ವಾದ ಮಳೆಗೆ ಮತ್ತೆ ಗುಡ್ಡ ಕುಸಿತ ಆರಂಭವಾಗಿದ್ದು, ಸ್ಥಳೀಯಾಡಳಿತ ತತ್‌ಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next