Advertisement
ಆ.2 ರಂದು ನಸುಕಿನ ಜಾವ ಏಕಾಏಕಿ ಗುಡ್ಡ ಕುಸಿದಿದೆ. ಕಳೆದ ಕೆಲ ದಿನಗಳ ಹಿಂದೆಯೂ ಇಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಖಾಸಗಿ ಜಮೀನು ಇದಾಗಿದೆ. ಅತಿ ಎತ್ತರ ಹೊಂದಿರುವ ಗುಡ್ಡವಾಗಿದ್ದು ಶುಕ್ರವಾರ ಕುಸಿತಗೊಂಡ ಸ್ಥಳದ ಆಸುಪಾಸಿನಲ್ಲಿ ಮತ್ತೆ ಕುಸಿಯುವ ಸಾಧ್ಯತೆ ಕಂಡು ಬಂದಿದೆ. ಕೆಲ ಮರಗಳು ಬುಡ ಸಹಿತ ರಸ್ತೆಗೆ ಉರುಳುವ ಆತಂಕ ಉಂಟಾಗಿದೆ.
ಮಣ್ಣು ತೆರವು
ಮೂರು ಜೆಸಿಬಿಗಳ ಮೂಲಕ ಬೆಳಗ್ಗಿನಿಂದ ಕಾರ್ಯಚರಣೆ ನಡೆಸಲಾಯಿತು. ಅಪರಾಹ್ನ 3 ಗಂಟೆ ಹೊತ್ತಿಗೆ ಮಣ್ಣು ತೆರವು ಪೂರ್ಣಗೊಂಡಿದ್ದು ರಸ್ತೆಯನ್ನೇ ಟ್ಯಾಂಕರ್ ಮೂಲಕ ನೀರು ಹರಿಸಿ ಕೆಸರನ್ನು ತೆರವು ಮಾಡಲಾಗಿದೆ. ಅನಂತರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಎರಡು ಭಾಗಗಳಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪೇಟೆ ಮೂಲಕ ಸಂಚಾರ
ಹೆದ್ದಾರಿ ಬಂದ್ ಆದ ಕಾರಣ ಪರ್ಯಾಯವಾಗಿ ನಗರದ ರಸ್ತೆಗಳ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮಂಗಳೂರು ಭಾಗದಿಂದ ಬಂದ ವಾಹನಗಳು ಬೊಳುವಾರು, ಜೈನರಭವನದ ರಸ್ತೆ ಮೂಲಕ ಪತ್ರಾವೋ ಸರ್ಕಲ್‌ನಲ್ಲಿ ಹೆದ್ದಾರಿಯನ್ನು ಸೇರಿತು. ಸುಳ್ಯ ಭಾಗದಿಂದ ಬಂದ ವಾಹನಗಳು ಕೂಡ ಅದೇ ರಸ್ತೆಯ ಮೂಲಕ ತೆರಳಿತ್ತು.