Advertisement

ಕುಮಟಾದಲ್ಲಿ  ಗುಡ್ಡ ಕುಸಿತ : 3 ಮಕ್ಕಳ ದಾರುಣ ಸಾವು, ಹಲವರಿಗೆ ಗಾಯ 

03:26 PM Jun 11, 2017 | |

ಕುಮಟಾ : ಇಲ್ಲಿನ ದಿವಗಿ ಗ್ರಾಮದ ತಂಡರ್ಕುಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ  ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ 3 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಭಾನುವಾರ ಸಂಭವಿಸಿದೆ. 

Advertisement

ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಕಡಿಯಲಾಗಿದ್ದು , ಭಾರೀ ಮಳೆಯಿಂದಾಗಿ ಮೀನುಗಾರರ ಮನೆಯ ಮೇಲೆ ಕುಸಿದು ಬಿದ್ದಿದೆ. ಪರಿಣಾಮವಾಗಿ ಅವಶೇಷಗಳಡಿ ಸಿಲುಕಿ ಮಕ್ಕಳಾದ ಭವ್ಯಾಅಂಬಿಗ(13), ಯತೀನ್‌(7)ಮತ್ತು 1.5 ವರ್ಷದ ಮಗು  ಧನುಷ್‌ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಮಹಿಳೆಯರು ಸೇರಿದಂತೆ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ರಕ್ಷಣಾ ಕಾರ್ಯಕ್ಕೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿ ಮತ್ತು ಸ್ಥಳೀಯರು ನೆರವಾದರು. 

ಕರಾವಳಿಯಲ್ಲಿ ಕಳೆದ 2 ದಿನಗಳಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದ್ದು ನೆರೆ ಭೀತಿ ಎದುರಾಗಿದೆ.ರಾ.ಹೆ.66 ರಲ್ಲಿ ಹಲವೆಡೆ ಗುಡ್ಡ ಕುಸಿತ ಪ್ರಕರಣ ಗಳು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next