Advertisement

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ

03:11 PM Jun 29, 2019 | Suhan S |

ರಾಣಿಬೆನ್ನೂರ: ವಿವಿಧ ಗ್ರಾಮದ ನಿವೇಶನ ರಹಿತರಿಗೆ ತುರ್ತಾಗಿ ನಿವೇಶನ ವಿತರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯ ಎಂದು ಆರೇಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಆರೇಮಲ್ಲಾಪುರದ ಶ್ರೀಮಠದಿಂದ ನೂರಾರು ರೈತರೊಂದಿಗೆ ಪಾದಯಾತ್ರೆ ಮೂಲಕ ನಗರಕ್ಕೆ ಆಗಮಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸತತ 5 ವರ್ಷ ಬರಗಾಲದಿಂದ ತತ್ತರಿಸುವ ತಾಲೂಕಿನ ರೈತರಿಗೆ 2017-18 ಮತ್ತು 2018-19 ನೇ ಸಾಲಿನ ಬೆಳೆವಿಮೆ ಮತ್ತು ಬೆಳೆ ಪರಿಹಾರ ಬಿಡುಗಡೆಗೊಳಿಸಬೇಕು. ಕಳೆದ ಅನೇಕ ವರ್ಷಗಳಿಂದ ಈ ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೆ ಫಸಲು ಕೈಗೆ ಬಾರದೆ ರೈತರು ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.

ಬೆಳೆವಿಮೆ, ಬೆಳೆಪರಿಹಾರ ನೀಡುವ ಮೂಲಕ ಸರ್ಕಾರ ರೈತರನ್ನು ಉಳಿಸಲು ಮುಂದಾಗಬೇಕು. ತಾಲೂಕಿನಲ್ಲಿ ವಲಸೆ ಹೋಗುವವರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದೆ. ಅಂತಹ ಜನರನ್ನು ಗುರುತಿಸಿ ಅವರಿಗೆ ಉದ್ಯೋಗ ಕಲ್ಪಿಸಿ ಬದುಕಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ವಲಸೆ ಹೋಗುವವರ ಕುಟುಂಬದ ಮಕ್ಕಳು ಶಿಕ್ಷಣದಿಂದಲೂ ವಂಚಿತವಾಗುತ್ತವೆ. ಅವರು ಪೋಷಕ ಮತ್ತು ಪಾಲಕರಿಗೆ ಉದ್ಯೋಗ ಖಾತ್ರಿಯಲ್ಲಿ ಹೆಚ್ಚಿನ ಉದ್ಯೋಗ ಕಲ್ಪಿಸಬೇಕೆಂದು ಶ್ರೀಗಳು ಒತ್ತಾಯಿಸಿದರು.

ಗ್ರಾಮದಲ್ಲಿರುವ 154ನೇ ಸರ್ವೇ ನಂಬರ್‌ನಲ್ಲಿ ಈಗಾಗಲೇ 17 ಎಕರೆ ಸೈಟ್ ನಿರ್ಮಾಣ ಮಾಡಲಾಗಿದೆ. 10 ಎಕರೆ ಜಾಗೆಯಲ್ಲಿ ನಿವೇಶನ ರಹಿತರಿಗೆ ಮಂಜೂರಾಗಿ 2 ವರ್ಷಗಳಾದರೂ ಸಹ ಈ ವರೆಗೂ ಏನೂ ಕಾರ್ಯಗತವಾಗಿಲ್ಲ. 25 ಎಕರೆ ಬೇರೆ ಇರುವ ಜಾಗೆಯಲ್ಲಿ 19 ಎಕರೆ ಹುಲ್ಲುಗಾವಲು ಇದ್ದು, ಇದರಲ್ಲೂ ಸಹ ನಿವೇಶನ ಮಾಡಬಹುದಾಗಿದೆ. ಈ ಬಗ್ಗೆ ತಾಲೂಕು ಮತ್ತು ಜಿಲ್ಲಾಡಳಿತ ತುರ್ತಾಗಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದರು.

ಬೆಳೆಪರಿಹಾರ ಮತ್ತು ಬೆಳೆವಿಮೆ ಸೇರಿದಂತೆ ತಾಲೂಕಿನ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವಲ್ಲಿ ಅಧಿಕಾರಿಗಳು ಮೀನಮೇಷ ಹಾಗೂ ರಾಜಕೀಯ ಮಾಡಬಾರದು. ಸಂಕಷ್ಟದಲ್ಲಿರುವ ಸಾಮಾನ್ಯರನ್ನು ಕಾಪಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಜವಾಬ್ದಾರಿ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.

Advertisement

ಬಂಜಾರ ಸಮಾಜದ ಸೇವಾಲಾಲ್ ಸರ್ದಾರ್‌ ಮಹಾರಾಜರು, ಶಿವಣ್ಣ ಸಣ್ಣಬೊಮ್ಮಾಜಿ, ನಿಂಗಪ್ಪ ಹಲವಾಗಲ, ಗಾಳೆಪ್ಪ ಮರಿಯಮ್ಮನವರ, ಮಂಜುನಾಥ ವಡ್ಡರ, ಭಾಗ್ಯಲಕ್ಷಿ ್ಮೕ ಶಿವಳ್ಳಿ, ರೇಣುಕಮ್ಮ ಹಲವಾಗಲ, ಕರಬಸವ್ವ ಹಳ್ಳಳ್ಳಿ, ಲಲಿತವ್ವ ಚಳಗೇರಿ, ಗೌರಮ್ಮ ನಿಟ್ಟೂರು, ಮಂಜುಳಾ ಮಣಕೂರ, ತಿರುಕಮ್ಮ, ಪ್ರೇಮಕ್ಕ, ಮಂಜವ್ವ, ಲಕ್ಷ ್ಮವ್ವ, ಕಿರಣ ಗೂಳೇದ, ಅಶೋಕ ಸೂರ್ವೆ, ರಾಮಚಂದ್ರಪ್ಪ ಬೇವಿನಮರದ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next