Advertisement

ಪಾದಯಾತ್ರೆ ಬೆಂಬಲಿಸಿ ಜೀಪ್‌ ಜಾಥಾ

12:03 PM Oct 01, 2019 | Suhan S |

ಚಿತ್ತಾಪುರ: ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಪ್ರಯುಕ್ತ ಅ.2ರಂದು ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್‌ ಅಭಿಯಾನ ಹಾಗೂ ಜನಸಂಪರ್ಕ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಅ.2ರಂದು ನಡೆಯುವ ಗ್ರಾಮ ಸ್ವರಾಜ್‌ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನರ ಮನೆ ಬಾಗಿಲಿಗೆ ಮುಟ್ಟಿಸುವ ಮಹಾದಾಸೆಯಿಂದ ಹಮ್ಮಿಕೊಂಡಿರುವ ಗ್ರಾಮ ಸ್ವರಾಜ್‌ ಅಭಿಯಾನ ಹಾಗೂ ಜನಸಂಪರ್ಕ ಕಾರ್ಯಕ್ರಮದಲ್ಲಿ ಯಾವುದೇ ಅಡೆತಡೆ ಆಗದಂತೆ ನೋಡಿಕೊಂಡು ಯಶಸ್ವಿ

ಕಾರ್ಯಕ್ರಮವನ್ನಾಗಿ ಮಾಡಲು ಅ ಧಿಕಾರಿಗಳು ಶ್ರಮಿಸಬೇಕು. ಸಾರ್ವಜನಿಕರ ಕುಂದು ಕೊರತೆ ಹಾಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಇಚ್ಛಾಶಕ್ತಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಅಧಿಕಾರಿಗಳು, ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ಗೈರಾಗಬಾರದು ಎಂದರು.

ಬೆಳಗ್ಗೆ 8:00ಗಂಟೆಗೆ ತಹಶೀಲ್‌ ಕಚೇರಿ ಆವರಣದಲ್ಲಿ ನಿರ್ಮಿಸಿದ ಕೌಂಟರ್‌ಗಳಲ್ಲಿ ಸಂಬಂಧ ಪಟ್ಟ ಇಲಾಖಾವಾರು ಅಧಿಕಾರಿಗಳು ಹಾಜರಿರಬೇಕು. ಅದು ಬಿಟ್ಟು ನಾನು 9:00ಗಂಟೆಗೆ ಬರ್ತೀನಿ ಅಂದ್ರೆ ನಡೆಯಲ್ಲ. ಸಾಯಂಕಾಲ 5 ಗಂಟೆವರೆಗೆ ಕ್ಷೇತ್ರದ ಜನರು ಅನೇಕ ಸಮಸ್ಯೆಗಳನ್ನು ಇಟ್ಟಿಕೊಂಡು ಅರ್ಜಿಗಳನ್ನು ಸಲ್ಲಿಸುತ್ತಾರೆ. ಅವುಗಳೆಲ್ಲವನ್ನು ನೋಡಿಕೊಂಡು ಯಾವ ಕೆಲಸ ಸ್ಥಳದಲ್ಲಿಯೇ ಆಗುತ್ತದೆ. ಯಾವ ಕೆಲಸ ಆಗಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಜನರಿಗೆ ನೀಡಬೇಕು. ಬೇಕಾ ಬಿಟ್ಟಿ ಆಗಲಾರದ ಕೆಲಸಗಳಿಗೆ ನಾಳೆ ಬನ್ನಿ ನೋಡೋಣ ಎಂದು ಹೇಳಿ ಸತಾಯಿಸಬಾರದು ಎಂದರು.

ಪುರಸಭೆ ಪೌರಕಾರ್ಮಿಕರು ಸ್ಥಳದಲ್ಲಿಯೇ ಇರಬೇಕು. ಬರುವ ಜನರಿಗಾಗಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗಾಗಿ ಸ್ವತ್ಛತೆಗೆ ಮೊದಲ ಆದ್ಯತೆ ಕೊಡಬೇಕು. ವಾಲೇಂಟರ್ ಇರ್ತಾರೆ. ಅವರಿಗೊ ಕೂಡ ಯಾವ ಕೌಂಟರ್‌ನಲ್ಲಿ ಯಾವ ಕೆಲಸ ಆಗುತ್ತದೆ ಅನ್ನುವ ಮಾಹಿತಿ ಮೊದಲೇ ತಿಳಿ ಹೇಳಬೇಕು. ಅದರಂತೆ ವಾಲೇಂಟರ್ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗ್ತಾರೆ. ಸಮಸ್ಯೆ ಎಂದು ಬರುವ ಜನರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನೋಡಿಕೊಂಡು ಕೆಲಸ ಮಾಡಿಕೊಡಬೇಕು. ಅವರ ಜತೆಯಲ್ಲಿ ಅಸಭ್ಯವಾಗಿ ವರ್ತಿಸುವುದಾಗಲಿ ಅಥವಾ ಸಿಟ್ಟು ಮಾಡಿಕೊಳ್ಳುವುದಾಗಲಿ ಯಾವೊಬ್ಬ ಅಧಿಕಾರಿಗಳು ಮಾಡಬಾರದು ಎಂದು ಹೇಳಿದರು.

Advertisement

ಸೇಡಂ ಎಸಿ ರಮೇಶ ಕೋಲಾರ್‌, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್‌, ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ಕಾಳಗಿ ತಹಶೀಲ್ದಾರ್‌ ನೀಲಪ್ರಭ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಪೂಜಾರಿ, ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ನಟರಾಜ ಲಾಡೆ, ರವೀಂದ್ರ ದಾಮಾ, ಅಭಿಮನ್ಯು, ಡಾ| ಬಸಲಿಂಗಪ್ಪ ಡಿಗ್ಗಿ, ಶ್ರೀಧರ, ಮನೋಜಕುಮಾರ ಗುರಿಕಾರ್‌, ಶಂಕ್ರಮ್ಮ ಡವಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next