Advertisement

ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ

01:03 PM Oct 22, 2020 | Suhan S |

ದೇವನಹಳ್ಳಿ: ಉತ್ತರ ಕರ್ನಾಟಕ , ಮಹಾರಾಷ್ಟ್ರದಲ್ಲಿ ಉಂಟಾದ ಪ್ರವಾಹದಿಂದ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದ್ದು, ಇದರಿಂದ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ.

Advertisement

ಕಳೆದ 10-15ದಿನಗಳಿಂದ ಈರುಳ್ಳಿ ಬೆಲೆ ಕೆ.ಜಿ.ಗೆ 40 ರಿಂದ 50ರೂ. ಗೆ ಮಾರಾಟವಾಗುತ್ತಿತ್ತು. ಇದೀಗ ಈರುಳ್ಳಿ ಬೆಳೆ100ರೂ.ಗಡಿ ದಾಟಿದೆ. ಇದರಿಂದ ಈರುಳ್ಳಿ ಖರೀದಿಸುವು ದಾದರೂ ಹೇಗೆ ಎಂಬುವುದು ಗ್ರಾಹಕರ ಚಿಂತೆಯಾಗಿದೆ. ಹೊರರಾಜ್ಯಮತ್ತುವಿವಿಧಜಿಲ್ಲೆಗಳಾದ ಕೊಪ್ಪಳ, ಗದಗ, ಧಾರವಾಡ, ರಾಯಚೂರು, ವಿಜಯಪುರ ಹಾಗೂ ಇತರೆ ಉತ್ತರಕರ್ನಾಟಕಜಿಲ್ಲೆಗಳಿಂದಈರುಳ್ಳಿ ಸರಬರಾಜು ಆಗಬೇಕಿತ್ತು. ಆದರೆ, ಮಳೆ ಪ್ರವಾಹದಿಂದಾಗಿ ಈ ಭಾಗದಲ್ಲಿ ಬೆಳೆದಿರುವ ಈರುಳ್ಳಿ ಶೇ.70ರಷ್ಟು ಹಾನಿಯಾಗಿದ್ದು, ಸಣ್ಣ, ಕಳಪೆ ಮಟ್ಟದ ಈರುಳ್ಳಿಗೂ ಬೆಲೆ ಬಂದಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗಬಹುದೆಂಬುವುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.ಗ್ರಾಹಕರು ಈರುಳ್ಳಿ ಖರೀದಿಸಲು  ಹಿಂದೇಟು ಹಾಕುತ್ತಿದ್ದು, ಸಣ್ಣ ಪ್ರಮಾ ಣದಈರುಳ್ಳಿಕೆ.ಜಿಗೆ70ರೂ.ಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ 85 ರೂ.ಹಾಗೂ ಚಿಲ್ಲರೆ ದರ 120 ರವರೆಗೆ ದಾಟಿದೆ. ಹೋಟೆಲ್‌ಗ‌ಳಲ್ಲಿ ಈರುಳ್ಳಿ ದೋಸೆಯನ್ನು ಸ್ಥಗಿತಗೊಳಿಸಲಾಗಿದ್ದು, ಆಯುಧ ಪೂಜೆ, ವಿಜಯದಶಮಿ ವೇಳೆ ದರ ಇನ್ನೂ ಹೆಚ್ಚಾಗಬಹುದು, ಎಲ್ಲಿಯೂ ಈರುಳ್ಳಿ ಸಿಗುತ್ತಿಲ್ಲ. ಮುಂದಿನ ವಾರದಲ್ಲಿ ಈರುಳ್ಳಿ ಬೆಲೆ 120 ರೂ. ನಿಂದ 150 ರೂ. ದಾಟಿದರೂ ಆಶ್ಚರ್ಯ ಪಡುವಂತಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ.

ಈರುಳ್ಳಿ ಆಮದು ಕಡಿಮೆಯಾಗಿದೆ. ಎಲ್ಲಿಯೂ ಈರುಳ್ಳಿ ಸಿಗುತ್ತಿಲ್ಲ.ಇರುವ ಸ್ಟಾಕ್‌ನಲ್ಲಿಯೇಈರುಳ್ಳಿ ಮಾರಾಟಮಾಡುತ್ತಿ ದ್ದೇವೆ.ಇದೀಗಕೆ.ಜಿ.ಗೆ 100 ರೂ.ಇದೆ.ಇನ್ನು ಬೆಲೆ ಏರಿಕೆಯಾಗುವ ಸಂಭವವಿದೆ. ಬಾಬು, ಈರುಳ್ಳಿ ಮಾರಾಟಗಾರ

ಈರುಳ್ಳಿ ಬೆಲೆ ಹೆಚ್ಚಾಗಿದ್ದರೂ,ಕೊಂಡುಕೊಳ್ಳಲೇಬೇಕಾಗಿದೆ. ಈರುಳ್ಳಿ ಬೆಲೆ ಏರಿಕೆಯಿಂದಕಣ್ಣಲ್ಲಿ ನೀರು ಬರುವಂತಾಗಿದೆ. ಅಡುಗೆಗೆ 4-5ಈರುಳ್ಳಿ ಮಾತ್ರ ಬಳಸುತ್ತಿದ್ದೇವೆ. ಮಾಹಾದೇವಿ, ಗೃಹಿಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next