Advertisement

ಅಧಿಕಾರಕ್ಕಾಗಿ ಪಾದಯಾತ್ರೆ ಕಾಂಗ್ರೆಸ್‌ ಸಂಸ್ಕೃತಿ

08:59 PM Jan 16, 2022 | Team Udayavani |

ಜಮಖಂಡಿ: ಮೇಕೆದಾಟು ಪಾದಯಾತ್ರೆಯಲ್ಲಿ ಬಬಲೇಶ್ವರ ಶಾಸಕ ಎಂ.ಬಿ. ನ್ಯಾಮಗೌಡ ಅವರು ನೀರಾವರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಕೆಳಮಟ್ಟದ ಶಬ್ದಗಳ ಬಳಕೆ ಮಾಡಿರುವುದು ಖಂಡನೀಯ. ಕಾಂಗ್ರೆಸ್‌ ಪಕ್ಷದ ಸಿದ್ಧಾಂತ, ಸಂಸ್ಕೃತಿಗೆ ನಾಚಿಕೆಯಾಗಬೇಕು ಎಂದು ರೈತ ಮತ್ತು ಬಿಜೆಪಿಯ ಮುಖಂಡ ಬಿ.ಎಸ್‌.ಸಿಂಧೂರ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಅಂದಿನ ಬಿಜೆಪಿ ಸರಕಾರ ಸಾವಳಗಿ ಹೋಬಳಿಯ 7 ಮತ್ತು ವಿಜಯಪುರ ಜಿಲ್ಲೆಯ 13 ಕರೆಗಳಿಗೆ ನೀರು ತುಂಬಿಸುವ ಯೋಜನೆ ಆರಂಭಿಸಿದ ಯೋಜನೆಗೆ ಬಗ್ಗೆ ವರ್ಣಿಸಿದ ಮಾತುಗಳನ್ನು ಶಾಸಕ ಎಂ.ಬಿ.ಪಾಟೀಲ ಮರೆತಿದ್ದಾರೆ. ಕಾಂಗ್ರೆಸ್‌ 1964ರಿಂದ 1983ರ ವರೆಗೆ ನಿರಂತವಾಗಿ ಅಧಿ ಕಾರದಲ್ಲಿದ್ದು, ಆಲಮಟ್ಟಿ ಜಲಾಶಯವನ್ನು ಏಕೆ ಪೂರ್ಣಗೊಳಿಸಲಿಲ್ಲ. ಅವಕಾಶಗಳಿಗೆ ಬೆನ್ನು ಹತ್ತುವ ಕಾಂಗ್ರೆಸ್‌ ಶಾಸಕರು ಅಧಿ ಕಾರ ಲಭಿಸಿದಾಗ ಮರೆತು ಬಿಡುತ್ತಾರೆ ಎಂದು ಲೇವಡಿ ಮಾಡಿದರು.

2012ರಲ್ಲಿ ಕೃಷ್ಣೆಯ ಹೆಸರಿನಲ್ಲಿ ಬಳ್ಳಾರಿಯಿಂದ ಕೂಲಸಂಗಮದವರೆಗೆ ಪಾದಯಾತ್ರೆ ಮೂಲಕ ರಾಜ್ಯದಲ್ಲಿ ಅಧಿ ಕಾರ ಪಡೆದು 6 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆ ಪೂರ್ಣಗೊಳಿಸಲಿಲ್ಲ. ಕೇವಲ 6 ಸಾವಿರ ಕೋಟಿ ಬಜೆಟ್‌ ಮಂಡಿಸಿದ್ದು, ಪ್ರತಿವರ್ಷ 10 ಸಾವಿರ ಕೋಟಿಯಂತೆ 5 ವರ್ಷಕ್ಕೆ 50 ಸಾವಿರ ಕೋಟಿ ನೀರಾವರಿಗೆ ವೆಚ್ಚ ಮಾಡಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ ಪಕ್ಷದವರು ಅದು ರಾಜ್ಯದ ನೀರಾವರಿ ಯೋಜನೆಗಳಿಗೆ ಹೊರತು ಕೃಷ್ಣಾ ಮೇಲ್ದಂಡೆ 3ನೇ ಹಂತ ಕಾಮಗಾರಿಗೆ ಅಲ್ಲ ಎಂದರು. 2022ರಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷದವರು ರಾಜ್ಯದ ಜನತೆಗೆ ಮೋಸ ಮಾಡಲು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಆರಂಭಿಸಿದ್ದು, ಅಧಿ  ಕಾರ ಪಡೆಯುವ ದಾಹದಿಂದ ಹೊರತು ಯೋಜನೆ ಪೂರ್ಣಗೊಳಿಸಲು ಅಲ್ಲ ಎಂದು ರಾಜ್ಯದ ಜನರು ಅರಿತುಗೊಂಡಿದ್ದಾರೆ.

ಅಧಿ ಕಾರಕ್ಕಾಗಿ ಪಾದಯಾತ್ರೆ ನಡೆಸುವ ಸಂಸ್ಕೃತಿಯನ್ನು ಕಾಂಗ್ರೆಸ್‌ ಕೈ ಬಿಡಬೇಕು. ರಾಜ್ಯದ ಜನತೆಯ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹತ್ತಾರು ಯೋಜನೆ ಜಾರಿಗೆ ತರುತ್ತಿದ್ದಾರೆ. ಅದನ್ನು ಸಹಿಸಿಕೊಳ್ಳದೇ ಕಾಂಗ್ರೆಸ್‌ ಪಕ್ಷದವರು ವಿನಾಕಾರಣ ಹಿಂಸೆ ಮಾತುಗಳನ್ನು ಆಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಧೂಳಿಪಟವಾಗಿದೆ ಎಂದರು.

ನೀರಾವರಿ ಸಚಿವ ಗೋವಿಂದ ಕಾರಜೋಳ ಅವರಿಗೆ ನಾಲ್ಕು ದಿನದಲ್ಲಿ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಕ್ಷಮೆಯಾಚಿಸದಿದ್ದಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಸುಗಮ ಆಡಳಿತ ಅಡ್ಡಭಾಷೆ ಬಳಕೆ ಮಾಡದೇ ಸಹಕಾರ ನೀಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ತೊದಲಬಾಗಿ ಗ್ರಾಪಂ ಅಧ್ಯಕ್ಷ ಸಿದ್ರಾಯ ಸಾಯಗೊಂಡ, ಶೂರ್ಪಾಲಿ ಗ್ರಾಪಂ ಅಧ್ಯಕ್ಷ ಮುತ್ತಪ್ಪ ಕುಂಬಾರ, ಕುಂಬಾರಹಳ್ಳದ ಪರಮಾನಂದ ಪೂಜಾರಿ, ಮೈಗೂರಿನ ಮಹಾವೀರ ನ್ಯಾಮಗೌಡ, ವಿಠuಲ ಶಿಂಧೆ, ದಾದೇಲಿ ಭೂತಾಳಿ, ರಾಯಬಾ ಜಾಧವ ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next