Advertisement

Hike:ಬಿಲ್‌ ದುಬಾರಿ ಗ್ಯಾರಂಟಿ- ಹೊರೆಯಾದ ವಿದ್ಯುತ್‌,ಇಂಧನ, ಖರೀದಿ ಹೊಂದಾಣಿಕೆ ವೆಚ್ಚ ಶುಲ್ಕ

02:33 AM Sep 07, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆ ಆಗುತ್ತದೋ ಇಲ್ಲವೋ ಗ್ಯಾರಂಟಿ ಇಲ್ಲ. ಆದರೂ ಗ್ರಾಹಕರಿಗೆ ಅದರ “ಶಾಕ್‌’ ಗ್ಯಾರಂಟಿ!

Advertisement

ಒಂದೆಡೆ ಮಳೆ ಕೊರತೆ ಮತ್ತೂಂದೆಡೆ ಬೇಡಿಕೆ ಯಲ್ಲಿ ಅನಿರೀಕ್ಷಿತ ಹೆಚ್ಚಳವಾಗಿದೆ. ಇದನ್ನು ಹೇಗೆ ನಿರ್ವಹಿಸಿದ್ದಾರೆ ಎಂದರೆ ಇಂಧನ ಇಲಾಖೆಯ ಮಾಹಿತಿ ಪ್ರಕಾರವೇ, ಅನಿಯಮಿತ ಲೋಡ್‌ಶೆಡ್ಡಿಂಗ್‌. ಈ ಮೂಲಕ ಬಳಕೆ ಪ್ರಮಾಣದಲ್ಲಿ ಸುಮಾರು 20 ದಶಲಕ್ಷ ಯೂನಿಟ್‌ ತಗ್ಗಿಸುವಲ್ಲಿ ಕಂಪೆನಿಗಳು ಯಶಸ್ವಿಯಾಗಿವೆ. ಆದರೆ ಹೀಗೆ ಬಳಕೆ ಕಡಿಮೆ ಯಾಗಿದ್ದರೂ “ಬಳಕೆ ಶುಲ್ಕ’ ಮಾತ್ರ ಏರಿಕೆಯಾಗಿದೆ.

ಇದಕ್ಕೆ ಮತ್ತೂಂದು ಕಾರಣ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ (ಎಫ್ಪಿಪಿಸಿಎ)ದ ಶುಲ್ಕ ವಿಧಿಸುವ ಅಧಿಕಾರವನ್ನು ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳಿಗೇ ನೀಡಿರುವುದು.

ವಿಚಿತ್ರವೆಂದರೆ ಗೃಹಜ್ಯೋತಿ ಯೋಜನೆಯಿಂದ ಹೊರಗುಳಿದು ನಿಯಮಿತವಾಗಿ ಬಿಲ್‌ ಪಾವತಿಸು ತ್ತಿರುವ 200 ಯೂನಿಟ್‌ಗಿಂತ ಹೆಚ್ಚು ಬಳಸು
ವವರಿಗೇ ಹೆಚ್ಚು ಶಾಕ್‌.

“ಒಬ್ಬಿಬ್ಬರ ಬಿಲ್‌ ನೋಡಿ ನಿರ್ಧರಿಸಲಾಗಲ್ಲ’
“ಮುಖ್ಯವಾಗಿ ಬೆಂಗಳೂರಿನಲ್ಲಿ ವಿದ್ಯುತ್‌ ಕಡಿತ ಆಗಿಯೇ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆಗಿದ್ದರೂ ಅದು ಕೃಷಿ ಪಂಪ್‌ಸೆಟ್‌ಗಳಿಗೆ ಹೊರತು, ಗೃಹಬಳಕೆ ದಾರರಿಗೆ ಇದರ ಬಿಸಿ ತಟ್ಟಿಲ್ಲ. ಹಾಗಾಗಿ ಕಡಿಮೆ ಬಳಸಿ ಹೆಚ್ಚು ಬಿಲ್‌ ಬಂದಿದೆ ಎಂಬ ಗ್ರಹಿಕೆ ತಪ್ಪು. ಲಕ್ಷಾಂತರ ಗ್ರಾಹಕರಿರುವಾಗ ಎಲ್ಲರಿಗೂ ಹೆಚ್ಚಳವಾಗಿದೆ ಎಂದು ಹೇಳಲು ಹೇಗೆ ಸಾಧ್ಯ?ಒಬ್ಬಿಬ್ಬರ ಬಿಲ್‌ ನೋಡಿ ನಿರ್ಧರಿಸುವುದು ಸರಿ ಅಲ್ಲ’ ಎನ್ನುತ್ತಾರೆ ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್‌.

Advertisement

“ಇನ್ನು ಅನುಮೋದಿತಕ್ಕಿಂತ ಹೆಚ್ಚು ಲೋಡ್‌ ಬಳಸಿದಾಗ ಹೆಚ್ಚುವರಿ ಲೋಡ್‌ ದಂಡ ಬರುತ್ತದೆ. ಇದು ಪುನರಾವರ್ತನೆಯಾದಾಗ, ಗ್ರಾಹಕರಿಗೆ ನೋಟಿಸ್‌ ನೀಡಿ, ಹೆಚ್ಚುವರಿ ಭದ್ರತ ಠೇವಣಿ (ಎಎಸ್‌ಡಿ)ಗೆ ಸೂಚಿಸಲಾಗುತ್ತದೆ. ಇದು ವರ್ಷಕ್ಕೊಮ್ಮೆ ಮಾತ್ರ ಪಡೆಯಲಾಗುತ್ತದೆ. ಈ ರೀತಿ ಪ್ರಕರಣಗಳು ಲಕ್ಷದಲ್ಲಿ ಸಾವಿರ ಗ್ರಾಹಕರಿಗೆ ಬಂದರೆ ಹೆಚ್ಚು. ಇನ್ನು ಇಂಧನ ಹೊಂದಾಣಿಕೆ ಶುಲ್ಕ ಕಳೆದ ತಿಂಗಳು ಪ್ರತಿ ಯೂನಿಟ್‌ಗೆ 2.05 ರೂ. ಇತ್ತು. ಈ ತಿಂಗಳು 1.15ಕ್ಕೆ ಇಳಿಕೆಯಾಗಿದ್ದು ಬಿಲ್‌ ಕಡಿಮೆಯೇ ಆಗುತ್ತದೆ’ ಎಂದೂ ಹೇಳುತ್ತಾರೆ.

“ಆಗಸ್ಟ್‌ನಲ್ಲಿ ರೀಡಿಂಗ್‌ ಮಾಡಿದ್ದರಲ್ಲಿ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ಶುಲ್ಕ, ಹೆಚ್ಚುವರಿ ಲೋಡ್‌ ದಂಡ ಹಾಗೂ ಎಎಸ್‌ಡಿ ಯನ್ನು ಬಿಲ್‌ನಲ್ಲಿ ಉಲ್ಲೇಖೀಸಲಾಗಿದೆ. ಹೆಚ್ಚುವರಿ ಲೋಡ್‌ ಕಾರಣಕ್ಕೆ ಎಎಸ್‌ಡಿ ಪಡೆಯ ಲಾಗುತ್ತದೆ. ಹೀಗಿರುವಾಗ ಗೊಂದಲಕ್ಕೆ ಇದು ಕಾರಣವಾಗುವುದಿಲ್ಲವೇ?’ ಎಂಬುದು ತುಮ ಕೂರಿನ ನಿವಾಸಿ ರಾಜಪ್ಪ ನವರ ಪ್ರಶ್ನೆ.
ಬೆಸ್ಕಾಂ ಅಧಿಕಾರಿಗಳ ಮಾಹಿತಿ ಪ್ರಕಾರ, ಎಎಸ್‌ಡಿ ಅನ್ನು ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ) ಕಚೇರಿಗಳಿಗೆ ಹೋಗಿಯೇ ಪಾವತಿಸಬೇಕಂತೆ.

ಶಕ್ತಿ ಯೋಜನೆ ಅಡಿ ಒಂದು ಊರಿಗೆ ಟಿಕೆಟ್‌ ಕೇಳಿದರೆ, ಮುಂದಿನ ಊರಿಗೆ ಕೊಡುವಂತೆ ಇಲ್ಲಿ ಎಸ್ಕಾಂಗಳು “ಗೃಹಜ್ಯೋತಿ’ ಅಡಿ ಬರುವ ಗ್ರಾಹಕರಿಗೆ ನಾನಾ ರೂಪದಲ್ಲಿ ಹೆಚ್ಚುವರಿ ಬಿಲ್‌ ನೀಡುತ್ತಿವೆಯೇ ಎಂಬ ಅನುಮಾನ ಗ್ರಾಹಕರನ್ನು ಕಾಡುತ್ತಿದೆ.

“ಹಲವು ಬಾರಿ ವಿದ್ಯುತ್‌ ಕಡಿತಗೊಂಡಿದೆ. ಆದಾಗ್ಯೂ ಬಿಲ್‌ ಕಳೆದ ತಿಂಗಳಿಗಿಂತ ಹೆಚ್ಚು ಬಂದಿದೆ. ಅದರಲ್ಲಿ ಇಂಧನ ಹೊಂದಾಣಿಕೆ ಶುಲ್ಕದ ಹಳೆಯ ಬಾಕಿ, ಅದಕ್ಕೆ ತೆರಿಗೆ ಬೇರೆ ವಿಧಿಸಲಾಗಿದೆ. ಆದರೆ ಹಿಂದಿನ ತಿಂಗಳು ಇದೇ ಹೊಂದಾಣಿಕೆ ಶುಲ್ಕದ ನೆಪದಲ್ಲಿ ಪ್ರತಿ ಯೂನಿಟ್‌ಗೆ 2.05 ರೂ. ಹಾಗೂ ತೆರಿಗೆ ಹಾಕಲಾಗಿತ್ತು. ಜತೆಗೆ ಹೆಚ್ಚುವರಿ ಭದ್ರತ ಠೇವಣಿ ಬಾಕಿ ಕೂಡ ಉಲ್ಲೇಖೀಸಲಾಗಿದೆ. ಅದನ್ನು ಆನ್‌ಲೈನ್‌ನಲ್ಲೇ ಪಾವತಿಸಲು ಅವಕಾಶ ಇದೆಯೇ? ಕೆಲವರು ಅದನ್ನೂ ಸೇರಿಸಿ ಪಾವತಿಸಬಹುದು. ಆಗ ಕತೆ ಏನು -ಗ್ರಾಹಕರು, ಬೆಸ್ಕಾಂ

ಪ್ರಿಪೇಯ್ಡ ಸ್ಮಾರ್ಟ್‌ ಮೀಟರ್‌ ವಿದ್ಯುತ್‌ ಬಿಲ್‌ನ ಗೊಂದಲಗಳನ್ನು ಸರಿಪಡಿಸುತ್ತದೆಯೇ? ಕೇಂದ್ರ ಸರಕಾರವೂ ಪ್ರೀಪೇಯ್ಡ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲು ಸೂಚಿಸಿದೆ. ಈ ಮೀಟರ್‌ಗಳ ಅಳವಡಿಕೆಯಿಂದ ವಿದ್ಯುತ್‌ ಮಿತ ಬಳಕೆ ಜತೆಗೆ ಭದ್ರತ ಠೇವಣಿ, ಹೆಚ್ಚುವರಿ ಭದ್ರತ ಠೇವಣಿ, ಹೆಚ್ಚುವರಿ ಲೋಡ್‌ ಕಿರಿಕಿರಿಯೇ ಇರದು. ಮುಂಚಿತವಾಗಿ ಹಣ ಪಾವತಿಸಿ, ಅದಕ್ಕೆ ತಕ್ಕಂತೆ ಬಳಕೆ ಮಾಡಿದರೆ ಆಯಿತು. ಆದರೆ ಈ ವ್ಯವಸ್ಥೆ ಜಾರಿಗೊಳಿಸುವ ಮುನ್ನ ಎಸ್ಕಾಂಗಳು ಗ್ರಾಹಕರಿಗೆ ಒಂದು ತಿಂಗಳ ಠೇವಣಿಯನ್ನು ವಾಪಸು ನೀಡಬೇಕು.
ನಾಲ್ಕೈದು ಸಾವಿರ ಕೋಟಿ ರೂ. ಆಗುತ್ತದೆ.

 ವಿಜಯಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next