ವಿಜಯಪುರ : ಹಿಜಾಬ್ ಕುರಿತಾಗಿ ಮಂಗಳವಾರ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸುತ್ತಿರವ ಹಿನ್ನಲೆ ವಿಜಯಪುರ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯ 225 ಪಿಯು ಕಾಲೇಜು ಹಾಗೂ 80 ಡಿಗ್ರಿ ಕಾಲೇಜುಗಳ ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಾ.19 ರ ವರೆಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿದ್ದಾಗಿ ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.
ಮತ್ತೊಂದೆಡೆ ಎಸ್ಪಿ ಆನಂದ ಕುಮಾರ್ ಅವತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಭಾರತ ಕೇಂದ್ರಿತ ಆರ್ಥಿಕ ಸಿದ್ಧ ಮಾದರಿಗೆ ಆಗ್ರಹ; ಎಬಿಪಿಎಸ್ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರ
ಎಎಸ್ಪಿ ನೇತೃತ್ವದಲ್ಲಿ ಜಿಲ್ಲೆಯ 5 ಡಿವೈಎಸ್ಪಿ, 14 ಸಿಪಿಐ, 42 ಪಿಎಸ್ಐ, 700 ಎಚ್.ಸಿ.- ಕಾನ್ಸಸ್ಟೇಬಲ್ಸ್ , 11 ಡಿಎಆರ್ ತುಕಡಿ ಹಾಗೂ 3 ಐ.ಅರ್.ಬಿ. ತುಕಡಿ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ ಹಾಗೂ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಲ ನಿಯೋಜನೆ ಮಾಡಲಾಗಿದೆ.