Advertisement

ಹಿಜಾಬ್ -ಕೇಸರಿ ಶಾಲು: ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದ ಸಚಿವ ಕೋಟ

11:59 AM Feb 05, 2022 | Team Udayavani |

ಬೆಂಗಳೂರು : ಶಿಕ್ಷಣ ಸಂಸ್ಥೆಯಲ್ಲಿ ಹಿಜಬ್ ಹೆಸರಲ್ಲಿ ಧರ್ಮಾಂಧತೆ ಮಾಡುವುದನ್ನು ವಿರೋಧ ಮಾಡುತ್ತೇವೆ,ಇಂಥ ಸಂದರ್ಭದಲ್ಲಿ ಪರಿಸ್ಥಿತಿ ಯನ್ನು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ತಿಳಿಗೊಳಿಸಬೇಕಿತ್ತು, ಆದರೆ ಮತಗಳ ಮೇಲೆ ಕಣ್ಣಿಟ್ಟು ರಾಜಕೀಯ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಸ್ಪಷ್ಟತೆ ಇದೆ, ಯಾವ ಗೊಂದಲವೂ ಇಲ್ಲ.ಸರ್ಕಾರವನ್ನು ಚುಚ್ಚುವ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ಮನಸ್ಸಲ್ಲೂ ಹಿಜಾಬ್ ಧರಿಸಿ ಶಾಲೆಗೆ ಬರುವುದು ತಪ್ಪು ಎಂಬ ಭಾವನೆ ಇರಬಹುದು. ಇಡೀ ದೇಶಕ್ಕೆ ಕಿರುಕುಳ ಮಾಡಬೇಕು, ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಅನ್ನೋ ಕಾರಣಕ್ಕೆ ಇಂಥ ಬೆಳವಣಿಗೆಗಳು ನಡೆದಿವೆ. ಕಾಶ್ಮೀರದಲ್ಲಿ ಇಂಥ ಚರ್ಚೆ ಆಗಬೇಕು, ದೇಶದ ಭದ್ರತೆಗೆ ತೊಂದರೆ ಆಗಬೇಕು ಎನ್ನುವ ಹುನ್ನಾರ ಇದರಲ್ಲಿ ಇದೆ ಎಂದರು.

ಒಂದೂವರೆ ವರ್ಷದಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆ ಇರಲಿಲಲ್ಲ. ಇದು ಹೊರಗಿನ ಮತಾಂಧ ಶಕ್ತಿಗಳು ಮಾಡುತ್ತಿರುವುದು. ಶಾಲಾ ಸಮವಸ್ತ್ರ ಧರಿಸಿ ಬರಬೇಕು ಅನ್ನುವ ನಿಯಮ ಇದೆ. ಸಮಾಜ ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೆ ಸಹಿಸುವುದಿಲ್ಲ. ರಾಷ್ಟ್ರ ಬಾವುಟವನ್ನು ಅಡ್ಡ ಹಾಕಿ ಗದ್ದಲ ಎಬ್ಬಿಸಲಾಗಿತ್ತು, ಇದರ ಹಿಂದೆ ಯಾರಿದ್ದಾರೆ ಎನ್ನೋದನ್ನು ಪತ್ತೆ ಹಚ್ಚಿ ಅಂಥ ಗುಂಪುಗಳನ್ನು ಶಿಕ್ಷೆಗೆ ಗುರಪಡಿಸಬೇಕು ಎಂದರು.

ಕೇಸರಿ ಧರಿಸಿರುವುದು ಸರಿಯಾ ತಪ್ಪಾ ಎಂಬ ಪ್ರಶ್ನೆಗೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಗಳು ಅಲ್ಲಿ ನಡೆದಿವೆ. ಕೇಸರಿ ಆಗಲಿ ಹಿಜಾಬ್ ಆಗಲಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ ಇರಬಾರದು. ಅದು ಸರಿಯಾ ಇದು ಸರಿಯಾ ಅನ್ನೋದಲ್ಲ ಪ್ರಶ್ನೆ, ಒಂದು ತಪ್ಪಾದರೆ ಇನ್ನೊಂದೂ ತಪ್ಪಲ್ವೆ ಎಂದರು.

ಓಬವ್ವ ಆತ್ಮರಕ್ಷಣೆ ಕಲೆ

Advertisement

ಮೆಟ್ರಿಕ್ ನಂತರದ ವಿದ್ಯಾರ್ಥಿನಿಗಳಿಗೋಸ್ಕರ ಓಬವ್ವ ಆತ್ಮರಕ್ಷಣೆ ಕಲೆ ಪ್ರಕಟಿಸಿದ್ದೇವೆ. ಮೆಟ್ರಿಕ್ ನಂತರದ ಹಿಂದುಳಿದ ವರ್ಗದಲ್ಲಿ ೬೨೯ ಹಾಸ್ಟೆಲ್ ಗಳಿವೆ, ಸಮಾಜ ಕಲ್ಯಾಣ ೨೫೭ ಹಾಸ್ಟೆಲ್, ೮೧೮ ಕ್ರಿಶ್ಚಿಯನ್ ಸಮುದಾಯದ ಹಾಸ್ಟೆಲ್ ಗಳಿವೆ. ಒಟ್ಟೂ ೧.೮೨ ಲಕ್ಷ ವಿದ್ಯಾರ್ಥಿನಿಯರು ಓಬವ್ವ ಕಾರ್ಯಕ್ರಮದ ಅಡಿ ಬರರುತ್ತಾರೆ. ನಾಳೆ ಬೆಳಗ್ಗೆ ಸಿಎಂ ಅಧಿಕೃತವಾಗಿ ಉದ್ಘಾಟನೆ ಮಾಡಿ ಚಾಲನೆ ನೀಡಲಿದ್ದಾರೆ
ಜಿಲ್ಲಾ ಮಟ್ಟದಲ್ಲೂ ಕೂಡ ಉದ್ಘಾಟನೆ ಆಗತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next