Advertisement
ಈ ಬಗ್ಗೆ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಮಂಗಳವಾರ ಮಾತನಾಡಿದ್ದು, “ಶಾಲೆಗಳಲ್ಲಿ ಡ್ರೆಸ್ ಕೋಡ್ ಮಾಡಲಾಗುವುದು. ಹಿಜಾಬ್ ಸಮವಸ್ತ್ರದ ಭಾಗವಲ್ಲದ್ದರಿಂದ ಅದನ್ನು ನಿಷೇಧಿಸಲಾಗುವುದು’ ಎಂದಿದ್ದಾರೆ.
Related Articles
ಪುದುಚೇರಿಯ ಅರಿಯಾಂಕುಪ್ಪಮ್‌ನ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ತರಗತಿಗೆ ಬರಲು ತಡೆದಿದ್ದಾರೆ ಎನ್ನುವ ದೂರು ಶಿಕ್ಷಣ ಇಲಾಖೆಗೆ ಬಂದಿದೆ. ಆ ಹಿನ್ನೆಲೆ ಶಾಲಾ ಶಿಕ್ಷಣ ನಿರ್ದೇಶನಾಲಯವು ತನಿಖೆ ನಡೆಸಲು ಶಾಲೆಯ ಮುಖ್ಯಸ್ಥರಿಗೆ ಆದೇಶಿಸಿದೆ. ಆ ವರದಿಯನ್ನಾಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.
Advertisement
ಸಮವಸ್ತ್ರ ಧರಿಸುವ ಕುರಿತು ಆಯಾ ಶಾಲೆ-ಕಾಲೇಜುಗಳು ಮಾರ್ಗಸೂಚಿ ಹೊರಡಿಸಿರುತ್ತವೆ. ಅವುಗಳನ್ನು ಎಲ್ಲರೂ ಪಾಲಿಸಬೇಕು. ಅದರಲ್ಲಿ ಗೊಂದಲವೇನಿದೆ? ವಸ್ತ್ರಸಂಹಿತೆ ಪಾಲಿಸುತ್ತೇವೆ ಎಂದು ವಿದ್ಯಾರ್ಥಿಗಳು ಮತ್ತು ಹೆತ್ತವರು ಲಿಖಿತ ದಾಖಲೆಗೂ ಸಹಿ ಹಾಕಿದ್ದಾರೆ.– ಪ್ರಹ್ಲಾದ್ ಜೋಷಿ, ಕೇಂದ್ರ ಸಂಸದೀಯ ವ್ಯವ ಹಾರಗಳ ಸಚಿವ