Advertisement
ಕೊರೊನಾದಿಂದ ಶಾಲೆಗಳು ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಮೊದಲ ಜೊತೆ ಸಮವಸ್ತ್ರವನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಿ ಡಿಸೆಂಬರ್‌ವರೆಗೂ ನೀಡಲಾಗಿದೆ. ಮೊದಲ ಜೊತೆ ಸಮವಸ್ತ್ರವನ್ನು ವಿಳಂಬವಾಗಿ ವಿತರಿಸಿರುವ ಕಾರಣ ಎರಡನೇ ಜೊತೆ ಸಮವಸ್ತ್ರವನ್ನು ವಿತರಿಸುವ ಆಲೋಚನೆಯಲ್ಲಿ ಸರ್ಕಾರ ಇರಲಿಲ್ಲ. ಆದರೆ, ಇದೀಗ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯುಸಿ ಕಾಲೇಜುಗಳಲ್ಲಿ ಸಮವಸ್ತ್ರವನ್ನು ನಿಗದಿ ಮಾಡಿರುವುದರಿಂದ ಸರ್ಕಾರಿ ಶಾಲೆಗಳ ಸಮವಸ್ತ್ರ ವಿತರಣೆಗೆ ಮುಂದಾಗಿದೆ.
ಎರಡನೇ ಜೊತೆ ಸಮವಸ್ತ್ರ ವಿತರಣೆ ಸಂಬಂಧ ಕೇಂದ್ರದ ಪಾಲಿನ ಅನುದಾನ ರಾಜ್ಯಕ್ಕೆ ದೊರೆತಿರುವುದರಿಂದ ಫೆ.19ರಂದು ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಇದಾದ ನಂತರ ಸಮವಸ್ತ್ರ ವಿತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಎಂ. ಪ್ರಸನ್ನಕುಮಾರ್ ತಿಳಿಸಿದ್ದಾರೆ.