ಕಾಪು: ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಮೂರು ದಿನಗಳ ಬಳಿಕ ಸೋಮವಾರ ಹೈಸ್ಕೂಲ್ ಮತ್ತು ಮೇಲ್ಪಟ್ಟ ಶಾಲೆಗಳ ಪುನರಾರಂಭಕ್ಕೆ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಆದೇಶದಂತೆ ಶುಕ್ರವಾರ ಕಾಪು ಪೇಟೆಯಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿ, ಹೈಕೋರ್ಟ್ ಮುಂದಿನ ಆದೇಶದವರೆಗೆ ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಮೌಖಿಕ ಸೂಚನೆ ನೀಡಿದ್ದು, ಸೋಮವಾರ ಈ ಪ್ರಕರಣದ ವಿಚಾರಣೆ ಮುಂದುವರಿಸಲಿದೆ.
ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಎಚ್ಚರಿಕೆ ನೀಡುವ ಉದ್ದೇಶದೊಂದಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದೊಂದಿಗೆ ಪೊಲೀಸ್ ಇಲಾಖೆ ವಿವಿಧೆಡೆ ರೂಟ್ ಮಾರ್ಚ್ ನಡೆಸಿದೆ.
ಇದನ್ನೂ ಓದಿ:ಹಿಜಾಬ್ ವಿವಾದ: ಹೈಕೋರ್ಟ್ ಸೂಚನೆ ಪ್ರಶ್ನಿಸಿ ಮತ್ತೆ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿಗಳು
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಅವರ ನೇತೃತ್ವದಲ್ಲಿ ಕಾಪು, ಪಡುಬಿದ್ರಿ, ಶಿರ್ವ ಪೊಲೀಸ್ ಠಾಣಾಧಿಕಾರಿಗಳು, ಕ್ರೈಂ ಎಸ್ಸೈ, ಎಎಸ್ಐ ಹಾಗೂ ಪುರುಷ ಮತ್ತು ಮಹಿಳಾ ಸಿಬಂದಿಗಳು ರೂಟ್ ಮಾರ್ಚ್ ನಲ್ಲಿ ಪಾಲ್ಗೊಂಡಿದ್ದರು.