ಬೆಳಗಾವಿ: ಹಿಜಾಬ್ ಧರಿಸಲು ಅನುಮತಿ ನೀಡದ್ದಕ್ಕೆ ಕೆಲ ಯುವಕರು ಇಲ್ಲಿಯ ಸದಾಶಿವನಗರದ ಲಕ್ಷ್ಮಿ ಕಾಂಪ್ಲೆಕ್ಸ್ ಬಳಿಯ ವಿಜಯ ಪ್ಯಾರಾಮೆಡಿಕಲ್ ಆಪ್ ಸೈನ್ಸ್ ಕಾಲೇಜು ಬಳಿ ಹೈಡ್ರಾಮಾ ನಡೆಸಿದ ವೇಳೆ 6 ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ನಡೆದಿದೆ.
ಕಾಲೇಜಿನ ತರಗತಿಯೊಳಗೆ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಕಾಲೇಜು ಸಿಬ್ಬಂದಿ ಹೇಳುತ್ತಿದ್ದಂತೆ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದರು. ಕೆಲ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಕೆಲ ಯುವಕರು ಸ್ಥಳಕ್ಕೆ ಬಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದದ್ದು, ನಂತರ ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೂಗಿ ಗೊಂದಲಕ್ಕೆ ಕಾರಣರಾದರ ಆರು ಜನ ಯುವಕರನ್ನು ಪೊಲೀಸರು ವಶಪಡಿಸಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ:ತಾರ್ಕಿಕ ಅಂತ್ಯದವರೆಗೆ ಅಹೋರಾತ್ರಿ ಧರಣಿ: ಸಿದ್ಧರಾಮಯ್ಯ ಆಕ್ರೋಶ
ಡಿಸಿಪಿ ರವೀಂದ್ರ ಗಡಾದಿ ಸ್ಥಳಕ್ಕೆ ಬಂದು ವಿದ್ಯಾರ್ಥಿನಿಯರು ಹಾಗೂ ಯುವಕರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಹೈಕೋರ್ಟ್ ನ ಮಧ್ಯಂತರ ತೀರ್ಪು ಹಿನ್ನೆಲೆಯಲ್ಲಿ ಸದ್ಯ ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ. ಹೀಗಾಗಿ ಈ ನಿಯಮ ಪಾಲಿಸಬೇಕೆಂದು ತಿಳಿ ಹೇಳಿದರು.