Advertisement

ಹಿಜಾಬ್‌ ವಿವಾದ: ಹೈಕೋರ್ಟ್‌ ಆದೇಶ ಪಾಲಿಸಲು ಸೂಚನೆ

02:59 PM Feb 15, 2022 | Team Udayavani |

ಸುರಪುರ: ಇಲ್ಲಿಯ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಿಜಾಬ್‌ಗ ಸಂಬಂಧಿಸಿದಂತೆ ತಾಲೂಕಿನ ಮೆಟ್ರಿಕ್‌ ಮತ್ತು ಮೆಟ್ರಿಕ್‌ ನಂತರದ ಶಾಲಾ-ಕಾಲೇಜುಗಳ ಪ್ರಾಂಶುಪಾಲರ ಮತ್ತು ಮುಖ್ಯಸ್ಥರ ಸಭೆ ಜರುಗಿತು.

Advertisement

ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಲಯದ ಅಂತಿಮ ಆದೇಶ ಹೊರಬರುವವರೆಗೆ ವಿದ್ಯಾರ್ಥಿಗಳು ಹಿಜಾಬ್‌, ಕೇಸರಿ ಶಾಲು ಸೇರಿ ಯಾವುದೇ ಧರ್ಮದ ಸಂಕೇತಗಳನ್ನು ಧರಿಸಿ ಶಾಲಾ-ಕಾಲೇಜಿಗೆ ಬರುವಂತಿಲ್ಲ ಎಂದು ಹೈಕೋರ್ಟ್‌ ಮಧ್ಯಂತರ ಆದೇಶದಲ್ಲಿ ನೀಡಿರುವುದರಿಂದ ಕಾಲೇಜುಗಳಲ್ಲಿ ಮುಖ್ಯಸ್ಥರು ಕಡ್ಡಾಯವಾಗಿ ಹೈಕೋರ್ಟ್‌ ಆದೇಶ ಪಾಲಿಸಬೇಕು ಎಂದರು.

ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ತಿಳಿ ಹೇಳಬೇಕು. ಒಪ್ಪದಿದ್ದರೆ ತಕ್ಷಣ ತಾಲೂಕಾಡಳಿತ ಮತ್ತು ಪೊಲೀಸ್‌ ಇಲಾಖೆ ಗಮನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ಅದಕ್ಕೆ ನೀವೇ ಜವಾಬ್ದಾರರು. ಇದಕ್ಕೆ ಪೋಷಕರು ಕೂಡ ನ್ಯಾಲಯದ ಆದೇಶ ಪಾಲಿಸಬೇಕು. ಒಟಾರೆಯಾಗಿ ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಹೋಗಲು ಎಲ್ಲರು ಕೈಜೋಡಿಸಬೇಕು ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಡಿವೈಎಸ್‌ಪಿ ಡಾ| ದೇವರಾಜ್‌ ಮಾತನಾಡಿ, ಕಾನೂನು ಸುವ್ಯಸ್ಥೆಗೆ ಯಾರೊಬ್ಬರು ದಕ್ಕೆ ತರುವ ಪ್ರಯತ್ನ ಮಾಡಬಾರದು. ತಾಲೂಕಿನಲ್ಲಿ ಶಾಂತಿ ಕಾಪಾಡಬೇಕು. ಮಕ್ಕಳಿಗೆ ತಿಳಿಸಿ ಹೇಳುವ ಶಕ್ತಿ ಶಿಕ್ಷಕ ಮತ್ತು ಉಪನ್ಯಾಸಕರಿಗಿದೆ. ಕಾರಣ ಹೈಕೋರ್ಟ್‌ ಆದೇಶ ಪಾಲಿಸುವಂತೆ ತಿಳಿಸಬೇಕು. ಸಮಸ್ಯೆ ಕಂಡುಬಂದರೆ ಶಾಲಾ ಮುಖ್ಯಸ್ಥರು ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಪ್ರಾಚಾರ್ಯರು ಮಾತನಾಡಿ, ಸಲಹೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next