Advertisement
ಮಧ್ಯಂತರ ಆದೇಶವನ್ನು ವಿಭಾಗೀಯ ಪೀಠವೇ ನೀಡಲಿ , ಹಿಜಾಬ್ ವಿವಾದ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ. ವಿಸ್ಕ್ರತ ಪೀಠ ರಚನೆನ್ನು ನ್ಯಾಯಮೂರ್ತಿಯೇ ನಿರ್ಧರಿಸಲಿ ಎಂದು ಹೇಳಿ ಸಂಪೂರ್ಣ ಕಡತವನ್ನು ಮುಖ್ಯ ನ್ಯಾಯಮೂರ್ತಿಗೆ ಹಸ್ತಾಂತರಿಸಿ ದಾಖಲೆಗಳನ್ನು ಸಲ್ಲಿಸುವಂತೆ ರಿಜಿಸ್ಟ್ರಾರ್ ಗೆ ಸೂಚನೆ ನೀಡಿದೆ.
Related Articles
Advertisement
ಹಿಜಾಬ್ ಧರಿಸಿದವರಿಗೆ ಪ್ರವೇಶ ನಿರ್ಬಂಧ ಮತ್ತು ವಸ್ತ್ರ ಸಂಹಿತೆ ಜಾರಿಗೊಳಿಸಿರುವ ಸರಕಾರದ ಆದೇಶ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಲಿದೆ.
ಅರ್ಜಿದಾರ ವಿದ್ಯಾರ್ಥಿನಿ ಪರ ಸಂಜಯ್ ಹೆಗಡೆ ಮತ್ತು ಇತರ ವಕೀಲರು ವಾದ ಮಂಡಿಸಿದರು. ಕಾಲೇಜಿನ ಪರ ವಕೀಲ ಸಜ್ಜನ್ ಪೂವಯ್ಯ,ಸರಕಾರದ ಪರ ವಕೀಲ ಎಜಿ ನಾವದಗಿ ವಾದ ಮಂಡನೆ ಮಾಡಿದರು.
ಹಿಜಾಬ್ ಪ್ರಕರಣ ಸಂಬಂಧ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸ ಬಾರದು, ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದು ಕೊಳ್ಳಬೇಕು ಎಂದು ಮಂಗಳವಾರ ಸೂಚಿಸಿತ್ತು.
ಜನರ ವಿವೇಕದ ಮೇಲೆ ನ್ಯಾಯಾಲಯಕ್ಕೆ ಸಂಪೂರ್ಣ ನಂಬಿಕೆ ಇದೆ. ಅದನ್ನು ಜನರು ಕಾರ್ಯರೂಪಕ್ಕೆ ತರುತ್ತಾರೆ ಎಂದು ನ್ಯಾಯಾಲಯ ವಿಶ್ವಾಸ ಹೊಂದಿದೆ ಎಂದು ಹೇಳಿತು. ಇಂತಹ ಸಂಗತಿಗಳಿಂದ ನ್ಯಾಯಾಲಯ ವನ್ನು ಯಾರೂ ಪ್ರಭಾ ವಿಸುವಂತಿಲ್ಲ. ನ್ಯಾಯಾಲಯ ಮತ್ತು ನ್ಯಾಯಾ ಧೀಶರು ಇಂತಹದಕ್ಕೆಲ್ಲ ಮಣಿಯುವುದಿಲ್ಲ. ಆದರೆ ಇಂತಹ ಪ್ರತಿ ಭಟನೆಗಳು ಮತ್ತು ಗಲಭೆಗಳನ್ನು ಟಿ.ವಿ. ಗಳಲ್ಲಿ ನೋಡಿದರೆ ಅದು ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸು ಘಾಸಿಯಾಗುತ್ತದೆ. ಬೌದ್ಧಿಕ ಶಕ್ತಿ ಬಳಸಿ, ಹೃದಯದಿಂದ ತೀರ್ಪು ನೀಡಬೇಕಾದಾಗ ಇಂಥ ಘಟನೆಗಳು ಮನಸ್ಸನ್ನು ಘಾಸಿಗೊಳಿಸುತ್ತವೆ. ಹಾಗಾಗಿ ಶಾಂತಿಯಿಂದ ತೀರ್ಪು ನೀಡಲು ಬಿಡಿ ಎಂದು ನಾ| ಕೃಷ್ಣ ದೀಕ್ಷಿತ್ ಮಂಗಳವಾರ ಹೇಳಿದ್ದರು.