Advertisement

ಹಿಜಾಬ್ ವಿವಾದ; ಅಲ್ಲಾಹನನ್ನು ನಂಬಿ, ಮುಲ್ಲಾಗಳನ್ನಲ್ಲ: ಅನಿಲ್ ಮೆಣಸಿನಕಾಯಿ

06:21 PM Apr 02, 2022 | Team Udayavani |

ಗದಗ: ನಾಡಿನಲ್ಲಿ ಇತ್ತೀಚೆಗೆ ಹಿಜಾಬ್ ಮತ್ತು ಹಲಾಲ್ ಬಗ್ಗೆ ಗಂಬೀರ ಚಿಂತನೆ ನಡೆದಿದ್ದು, ಈ ವಿಚಾರದಲ್ಲಿ ಮುಸ್ಲಿಮರು ಅಲ್ಲಾಹುನನ್ನು ನಂಬಬೇಕೆ ಹೊರತು ಮುಲ್ಲಾಗಳನ್ನಲ್ಲ ಎಂದು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬುರ್ಕಾ, ಹಿಜಾಬ್ ಧರಿಸುವ ಹಿಂದಿನ ವೈಜ್ಞಾನಿಕ ಅಂಶಗಳನ್ನು ಅರಿತುಕೊಳ್ಳಬೇಕು.‌ ಮಿಡ್ಲ್ ಈಸ್ಟ್ ಗಳಲ್ಲಿ ಬಿಸಲಿನ ತಾಪ ಹೆಚ್ಚಿರುತ್ತದೆ. ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅಲ್ಲಿನ ಮಹಿಳೆಯರು ಹಸಿರು, ನೀಲಿ ಹಾಗೂ ಶ್ವೇತ ಬಣ್ಣದ ಬುರ್ಕಾ, ಹಿಜಾಬ್ ಧರಿಸುತ್ತಾರೆ. ಅಲ್ಲದೇ ಒಂಟೆ ಮಾಂಸ‌ ಅವರ ಆಹಾರ ಪದ್ಧತಿಯಾಗಿದ್ದರಿಂದ ದೇಹದಲ್ಲಿ ಹೆಚ್ಚುವರಿಯಾಗಿ ವಿಟಮಿನ್ ‘ಡಿ’ ಉತ್ಪತ್ತಿಯಾಗುವುದರಿಂದ ಚರ್ಮ ಕ್ಯಾನ್ಸರ್, ಎಲುಬು ಕ್ಯಾನ್ಸರ್ ಉಂಟಾಗುವುದನ್ನು ತಡೆಗಟ್ಟಲು ಬುರ್ಕಾ, ಹಿಜಾಬ್ ಧರಿಸುತ್ತಾರೆ. ಅಲ್ಲಿನ ಮುಸ್ಲಿಮರು ದಾಡಿ ಬಿಡುವುದರ ಹಿಂದೆಯೂ ಅಂತಹದ್ದೇ ವೈಜ್ಞಾನಿಕ ಕಾರಣಗಳಿವೆ .ಆದರೆ, ಭಾರತೀಯ ವಾತಾವರಣಕ್ಕೆ ಅಂತಹ ವಸ್ತ್ರ ಧರಿಸುವ ಅಗತ್ಯವಿಲ್ಲ‌ ಎಂದು ಅಭಿಪ್ರಾಯಪಟ್ಟರು.

ಹಿಜಾಬ್ ಕುರಿತು ಈಗಾಗಲೇ ಹೈಕೋರ್ಟ್ ಕೂಡಾ ಸ್ಪಷ್ಟಪಡಿಸಿದೆ. ಅದನ್ನು ವಿರೋಧಿಸುವ ನಡೆ ಸರಿಯಲ್ಲ. ಇದರಿಂದ ಸಂವಿಧಾನ ಶಿಲ್ಪಿ ಡಾ.ಬಿ‌.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಆದರೆ, ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಕೆಲ ಅಲ್ಪಸಂಖ್ಯಾತ ನಾಯಕರೂ ಕಾಂಗ್ರೆಸ್ ಪಕ್ಷದ ಚೇಲಾಗಳಂತೆ ವರ್ತಿಸುತ್ತಿದ್ದಾರೆ. ಅಂತವರ ಮಾತಿಗೆ ಕಿವಿಗೊಡಬಾರದು ಎಂದು ಮನವಿ‌ ಮಾಡಿದರು.

ಅಲ್ಲದೇ ನಗರದ ಹೃದಯ ಭಾಗದಲ್ಲಿ ಜವಳಗಲ್ಲಿಯ 16 ಎಕರೆ ಪ್ರದೇಶ ಸಂಪೂರ್ಣ ಶ್ರೀ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ್ದು. ಆದರೆ, ಅನೇಕ‌ ಮುಸ್ಲಿಂ ಕುಟುಂಬಗಳು ದಶಕಗಳಿಂದ ಅನಧಿಕೃತವಾಗು ವಾಸಿಸುತ್ತಿವೆ. ಅವರಿಗೆ ರೆಹಮತ್‌ ನಗರದಲ್ಲಿ ಸ್ಲಂ ಬೋರ್ಡ್ ನಿಂದ ಮನೆಗಳು ಮಂಜೂರಾಗಿದ್ದರೂ, ಅವುಗಳನ್ನು ಬಾಡಿಗೆಗೆ ನೀಡಿ, ಇಲ್ಲೇ ಉಳಿದಿದ್ದಾರೆ. ತಕ್ಷಣ ಅವರನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಆಗ್ರಹಿಸಿದ ಅವರು, ಕೆಲವರು ವೀರನಾರಾಯಣ ದೇವಸ್ಥಾನದ ಜಾಗೆಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಅವುಗಳನ್ನು ವಾಪಸ್ ಪಡೆಯುತ್ತೇವೆ. ಒಂದೇ ಒಂದು ಇಂಚು ಕೂಡಾ ಬಿಟ್ಟುಕೊಡುವುದಿಲ್ಲ ಎಂದರು.

Advertisement

ಜೊತೆಗೆ ಜವಳಗಲ್ಲಿಯ ರಾಜಕಾಲುವೆ ಮೇಲೆ ಮಾಂಸದ ಅಂಗಡಿಗಳು, ಮಳಿಗೆಗಳು ತಲೆ ಎತ್ತಿವೆ. ಅದರಿಂದ‌ ಸುತ್ತಲಿನ ಪ್ರದೇಶ ಗಬ್ಬು ನಾರುತ್ತಿದೆ. ಅವುಗಳನ್ನು ಬೆಟಗೇರಿಯಲ್ಲಿ ನಗರಸಭೆ ನಿಗದಿಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ನಗರಸಭೆಗೆ ಒತ್ತಾಯಿಸಿದರು.

ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ ಸ್ಲಂ ನಿವಾಸಿಗಳ ಹಕ್ಕು ಪತ್ರಗಳ ಹೆಸರಲ್ಲೇ ದಶಕಗಳಿಂದ ರಾಜಕಾರಣ ಮಾಡುತ್ತಿದ್ದಾರೆ. ಆದರೂ, ಬಹುತೇಕರಿಗೆ ಹಕ್ಕು ಪತ್ರ ನೀಡಿಲ್ಲ. ಈ ಬಾರಿ ಬಿಜೆಪಿ ಸರಕಾರದಿಂದ ಅರ್ಹರಿಗೆ ಹಕ್ಕು ಪತ್ರ ಕಲ್ಪಿಸಲಾಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ್ ಅಬ್ಬಿಗೇರಿ, ದಿಂಡೂರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next