ಬೆಂಗಳೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ತೀರ್ಪಿನ ಬಗ್ಗೆ ಟೀಕೆ ಮಾಡಿದ್ದಲ್ಲದೆ, ತೀರ್ಪು ವಿರೋಧಿಸಿ ಮಾ.17ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಸಂಘ-ಸಂಸ್ಥೆಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಎನ್.ಪಿ. ಅಮೃತೇಶ್ ಅವರು ರಾಜ್ಯ ಅಡ್ವೊಕೇಟ್ ಜನರಲ್‌ಗೆ ಮನವಿ ಸಲ್ಲಿಸಿದ್ದಾರೆ.
ಯಾರ ವಿರುದ್ಧ ದೂರು?
ಹಿಜಾಬ್ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರಾದ ರೇಶಮ್, ಆಯೇಶಾ ಹಾಜೀರಾ ಅಲ್ಮಾಸ್, ಅಲಿಯಾ ಅಸಾದಿ, ಶಫಾ , ಮುಸ್ಕಾನ್ ಜೈನಾಬ್, ಐಶತ್ ಶಿಫಾ, ತೈರಿನ್ ಬೇಗಮ್, ಶಹೀನಾ, ಶಿಫಾ ಮಿನಾಜ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ಕೋರಲಾಗಿದೆ.
ಇದನ್ನೂ ಓದಿ:ರಷ್ಯಾ-ಉಕ್ರೇನ್ ಯುದ್ದದಿಂದ ಬೆಲೆ ಏರಿಕೆ ಸಮಸ್ಯೆ ಆಗಿಲ್ಲ: ಕತ್ತಿ
ಜತೆಗೆ, ಕೋರ್ಟ್ ತೀರ್ಪಿನ್ನು ಟೀಕಿಸಿದ್ದ ಹಾಗೂ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಸ್ಟೂಡೆಂಟ್ ಕ್ರಿಶ್ಚಿಯನ್ ಮೂವ್‌ಮೆಂಟ್ ಆಫ್ ಇಂಡಿಯಾ, ದಲಿತ ವಿದ್ಯಾರ್ಥಿ ಪರಿಷತ್, ಕಲೆಕ್ಟೀವ್, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್, ಜಮಾತ್-ಐ-ಉಲಮಾ ಹಿಂದ್ ಕರ್ನಾಟಕ, ಜಮಾತ್-ಎ-ಇಸ್ಲಾಮಿ ಹಿಂದ್, ಲ್‌ವುಲತ್-ಎ-ಅಹ್ಲೆ ಹದೀಸ್, ಜಮಾತ್-ಎ-ಅಹ್ಲೆ ಸುನ್ನತ್ ಕರ್ನಾಟಕ, ಕರ್ನಾಟಕ ಮುತ್ತಾಹಿದ ಮುಸ್ಲಿಂ ಮಹಜ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಫಾರ್ವಡ್ ಟ್ರಸ್ಟ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳು ಹಾಗೂ ಇಮಾರತ್-ಎ-ಷರಿಯಾದ ಮೌಲಾನಾ ಸಗೀರ್ ಅಹ್ಮದ್ ರಶದಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅನುಮತಿ ಕೋರಲಾಗಿದೆ.