Advertisement

ಗಡಿ ವ್ಯಾಪ್ತಿಯ ಹೆದ್ದಾರಿ ಕಾಮಗಾರಿಗೆ ಪರಿಸರ ಇಲಾಖೆ ಅನುಮತಿ ಬೇಡ

09:21 PM Jul 19, 2022 | Team Udayavani |

ನವದೆಹಲಿ: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಇತರ ಗಡಿ ಪ್ರದೇಶಗಳ 100 ಕಿಮೀ ವ್ಯಾಪ್ತಿಯಲ್ಲಿ ಹೆದ್ದಾರಿಗಳ ನಿರ್ಮಾಣ ಕಾಮಗಾರಿಗಳಿಗೆ ಇನ್ನು ಪರಿಸರ ಸಚಿವಾಲಯದ ಅನುಮತಿ ಬೇಡ. ಈ ಬಗ್ಗೆ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

Advertisement

ರಕ್ಷಣಾತ್ಮಕವಾಗಿ ಮತ್ತು ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವ ಪಡೆದ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಇಂಥ ನಿರ್ಣಯ ಕ್ಷಿಪ್ರವಾಗಿ ರಸ್ತೆ ಮತ್ತು ಹೆದ್ದಾರಿ ಕಾಮಗಾರಿಗಳ ನಿರ್ಮಾಣಕ್ಕೆ ಹೆಚ್ಚಿನ ಅನುಕೂಲವಾಗಿ ಪರಿಣಮಿಸಲಿದೆ.

ಇದರ ಜತೆಗೆ ಗಡಿ ನಿಯಂತ್ರಣ ರೇಖೆಯ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ವಿಮಾನ ನಿಲ್ದಾಣಗಳ ಟರ್ಮಿನಲ್‌ ಕಾಮಗಾರಿಗಳಿಗೆ ಕೂಡ ಈ ವಿನಾಯಿತಿ ಅನ್ವಯವಾಗಲಿದೆ.

ನೈಸರ್ಗಿಕ ಅನಿಲ, ಡೀಸೆಲ್‌, ಕಲ್ಲಿದ್ದಲು, ಅನ್ನು ಶೇ.15ರ ವರೆಗೆ ಬಳಕೆ ಮಾಡುವ ವಿದ್ಯುತ್‌ ಸ್ಥಾವರಗಳ ಸ್ಥಾಪನೆ, ಮೀನುಗಳ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸುವ ಬಂದರುಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next