Advertisement
ಕೈಕಂಬ: ತೆಂಕ ಎಡಪದವು ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತದೆ. ಆದರೆ ಮಳೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ಹೆದ್ದಾರಿಯಲ್ಲಿಯೇ ಮಳೆ ನೀರು ಹರಿದು ಹೋಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.
Related Articles
Advertisement
ಸರಕಾರಿ ಸವಲತ್ತುಗಳು ಕಡಿಮೆ :
ಎಡಪದವು ಪೇಟೆಯಾದರೂ ಹೆಚ್ಚಿನ ಜನಸಂಖ್ಯೆ ಇದ್ದರೂ ಕೂಡ ಇಲ್ಲಿ ಯಾವುದೇ ಸರಕಾರಿ ಸೌಕರ್ಯ ಪಡೆಯಬೇಕಾದರೆ ಬೇರೆ ಗ್ರಾಮವನ್ನು ಆಶ್ರಯಿಸಬೇಕಾಗಿದೆ. ಕುಪ್ಪೆಪದವು, ಕೊಂಪದವು, ಗಂಜಿಮಠಗಳಲ್ಲಿ ಪ್ರಾ.ಆ. ಕೇಂದ್ರ ಇದ್ದು ಅದನ್ನೇ ನಂಬಿ ಇರಬೇಕು. ದಾದಿಯ ಉಪಕೇಂದ್ರ ಮಾತ್ರ ಇದೆ. ಅಲ್ಲಿ ದಾದಿಯರೇ ಇಲ್ಲ. ಪಶು ವೈದ್ಯಕೀಯ ಚಿಕಿತ್ಸೆ ಕೇಂದ್ರ, ಮೊರಾರ್ಜಿ ವಸತಿ ಕೇಂದ್ರ, ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ ಇಲ್ಲದಿರುವ ಕಾರಣ ಪಕ್ಕದ ಗ್ರಾಮಗಳನ್ನು ನಂಬಿಬೇಕಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಕಾಲೇಜು ಇಲ್ಲ ದೇ ಕಾರಣ ಉನ್ನತ ಶಿಕ್ಷಣಕ್ಕೆ ಮೂಡುಬಿದಿರೆ ಅಥವಾ ಮಂಗಳೂರಿಗೆ ತೆರಳಬೇಕಾಗಿದೆ.
ಇತರ ಸಮಸ್ಯೆಗಳೇನು? :
ಜ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾರಣ ಹೇಳಿ ಹಲವು ವರ್ಷಗಳಾಗುತ್ತಾ ಬಂದಿದೆ. ಆದರೆ ಇನ್ನು ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ. ಪೇಟೆಯಲ್ಲಿ ಹೆಚ್ಚು ಖಾಸಗಿ ಸ್ಥಳ ಇರುವುದರಿಂದ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ
- ಬಸ್ ನಿಲ್ದಾಣ ಹಾಗೂ ಪ್ರಯಾಣಿಕರ ತಂಗುದಾಣವೂ ಸಮರ್ಪಕವಾಗಿ ಇಲ್ಲ. ರಸ್ತೆಯಲ್ಲಿಯೇ ಪ್ರಯಾಣಿಕರು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ
- ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.
- ಕೃಷಿ ಮಾರುಕಟ್ಟೆ ಇದ್ದರೂ ಅದು ಉಪಯೋಗಕ್ಕೆ ಇಲ್ಲದಂತಾಗಿದೆ. ಈ ಬಗ್ಗೆ ಗಮನಹರಿಸಿ ರೈತರಿಗೆ ಉಪಯೋಗಕ್ಕೆ ಬರುವಂತೆ ಮಾಡಬೇಕಿದೆ.
- ಎಡಪದವು -ಒಡೂxರು -ಗಂಜಿಮಠ ಸಂಪರ್ಕಿಸುವ ರಸ್ತೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನ ಆಗಬೇಕೆಂಬುದು ಸ್ಥಳೀಯರ ಬೇಡಿಕೆ.
- ಕೋರ್ಡೆಲ್ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದೆ. ಹೊಸ ಕೊಳವೆ ಬಾವಿಯಲ್ಲೂ ನೀರಿಲ್ಲ. ಸುಮಾರು 40 ರಷ್ಟು ಕೊಳವೆ ಬಾವಿ, 6 ಸರಕಾರಿ ಬಾವಿಗಳಿವೆ.
- ಮಾಡಪಾಡಿ-ಕೋರ್ಡೆಲ್‌ಗೆ ಸಂಪರ್ಕಕ್ಕೆ ಬಸ್ ವ್ಯವಸ್ಥೆಯೇ ಇಲ್ಲ. ಕಣ್ಣೋರಿ- ಕೊಂಪದವು ಇಲ್ಲಿಗೆ ಬಸ್‌ನ ವ್ಯವಸ್ಥೆ ಆಗಬೇಕಿದೆ.
- ಪೂಪಾಡಿಕಲ್ಲು ಪ್ರದೇಶಕ್ಕೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದೆ.
- ಮನೆ ನಿವೇಶನಕ್ಕೆ 400 ಅರ್ಜಿಗಳು ಬಂದಿವೆ. ಮಾಡಪಾಡಿಯಲ್ಲಿ 2 ಎಕರೆ ಜಾಗ ಮನೆ ನಿವೇಶನಗಳ ನೀಡಿಕೆಗೆ ಜಾಗ ಕಾದಿರಿಸಲಾಗಿದೆ. ಪದ್ರೆಂಗಿಯಲ್ಲಿ 4 ಎಕರೆ ಜಾಗವನ್ನು ಸರ್ವೆಗೆ ಕಳುಹಿಸಲಾಗಿದೆ. 94ಸಿಸಿಯಲ್ಲಿ 4 ಮನೆೆಗಳಿಗೆ ಹಕ್ಕು ಪತ್ರ ನೀಡಲು ಬಾಕಿ ಇದೆ.
- ತ್ಯಾಜ್ಯ ಘಟಕಕ್ಕೆ ಕಣ್ಣೋರಿಯಲ್ಲಿ 1ಎಕರೆ ಜಾಗದಲ್ಲಿ ತ್ಯಾಜ್ಯ ಘಟಕ ಸಿದ್ಧಗೊಂಡಿದೆ. ವಿಲೇವಾರಿಗೆ ವಾಹನ ತರಲು ಬಾಕಿ ಇದೆ.