Advertisement
ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಕಳೆದ ಪಂಚಾಯತ್ ಆಡಳಿತಕ್ಕೆ ಜಿ.ಪಂ. ತ್ಯಾಜ್ಯ ನಿರ್ವಹಣೆ ಸಮಿತಿಯು ಸ್ಪಚ್ಛತೆ ಕಾಪಾಡಬೇಕೆಂಬ ನಿಟ್ಟಿನಲ್ಲಿ ನೋಟಿಸ್ ನೀಡಿದ್ದನ್ನು ಸ್ಮರಿಸಬಹುದು.
ಹೆದ್ದಾರಿ ಬದಿಯಲ್ಲಿ ಪಂ.ನಿಂದ ಇಲ್ಲಿ ತ್ಯಾಜ್ಯ ಹಾಕಬಾರದು ಎಂಬ ಸೂಚನಾ ಫಲಕ ಹಾಕಲಾಗಿದೆ. ಆದರೆ ತ್ಯಾಜ್ಯ ಇರುವಲ್ಲಿ ಫಲಕ ಹಾಕಿದ್ದಾರೊ ಅಥವಾ ಫಲಕ ಇರುವಲ್ಲಿ ತ್ಯಾಜ್ಯ ಹಾಕುತ್ತಾರೋ ಎಂಬುದು ಗೊತ್ತಾಗದಷ್ಟು ಫಲಕದ ಕೆಳಗೆ ತ್ಯಾಜ್ಯ ರಾಶಿ ಇದೆ. ಈ ಪ್ರದೇಶದಲ್ಲಿ ಸಿಸಿ ಕೆಮರಾ ಆಳವಡಿಸಿದರೆ ತ್ಯಾಜ್ಯ ಹಾಕುವವರ ಮೇಲೆ ಕ್ರಮ ಜರಗಿಸಿ ಸಮಸ್ಯಗೆ ಪರಿಹಾರ ಕಂಡುಕೊಳ್ಳಬಹುದು. ಮಾದರಿ ಕ್ರಮ
ಬಹುತೇಕ ಮಂದಿ ಬೆಳಗ್ಗಿನ ಹೊತ್ತು ಅಥವಾ ರಾತ್ರಿ ತ್ಯಾಜ್ಯ ಎಸೆದು ಹೋಗುತ್ತಾರೆ. ಇದನ್ನು ಬಂಟ್ವಾಳ ಪುರಸಭೆಯ ಹಾಲಿ ಮುಖ್ಯಾಧಿಕಾರಿ ಪತ್ತೆ ಮಾಡಿ ಎಂಟು ಮಂದಿಯ ಫೋಟೋ ತೆಗೆದುಕೊಳ್ಳುವ ಮೂಲಕ ನಗರ ಕೇಂದ್ರ ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಕಸ ಹಾಕದಂತೆ ಕಠಿನ ಕ್ರಮ ಕೈಗೊಂಡಿದ್ದರು.
Related Articles
ಸಾಂಕ್ರಾಮಿಕ ರೋಗಗಳಿಗೆ ಆಮಂತ್ರಣ ನೀಡುವಂತೆ ಈ ತ್ಯಾಜ್ಯಗಳ ರಾಶಿ ಇದೆ. ಇದನ್ನು ಆದಷ್ಟು ಬೇಗ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಪಂ. ಪ್ರಯತ್ನಿಸಬೇಕು. ಸಿಸಿ ಕೆಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ಮೇಲೆ ಕ್ರಮ ಜರಗಿಸಬೇಕು. ತ್ಯಾಜ್ಯ ಹಾಕುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಸರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ರಮ ಜರಗಿಸಬೇಕು.
Advertisement
ರಾ.ಹೆ. ರಸ್ತೆ ಬದಿ ಇದ್ದಂತಹ ತ್ಯಾಜ್ಯವನ್ನು ವಿಲೇವಾರಿ ಮಾಡಲು ಅಡ್ಯಾರ್ ಮತ್ತು ತುಂಬೆ ಗ್ರಾ.ಪಂ. ಹಾಲಿ ಆಡಳಿತನಡೆಸಿರುವ ಮಾದರಿ ಕಾರ್ಯಕ್ರವನ್ನು ಸ್ಮರಿಸಬೇಕು. ಹೆದ್ದಾರಿಯಲ್ಲಿ ಇದ್ದಂತಹ ತ್ಯಾಜ್ಯ ರಾಶಿಯನ್ನು ತೆಗೆದು ಬಳಿಕ
ಅಲ್ಲಿ ಯಾರೂ ತ್ಯಾಜ್ಯ ಎಸೆಯದಂತೆ ಮಾಡಿದ ಪ್ರಯತ್ನ ಇಂದು ಸದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆದ್ದಾರಿ ಸ್ವಚ್ಛವಾಗಿರುವುದಕ್ಕೆ ಕಾರಣವಾಗಿದೆ. ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ
ಹೆದ್ದಾರಿಯ ಬದಿಯಲ್ಲಿ ತ್ಯಾಜ್ಯ ನಿರ್ಮೂಲನೆ ಮಾಡಲು ಬಹಳಷ್ಟು ಪ್ರಯತ್ನ ಪಡುತ್ತಿದ್ದೇವೆ. ಜನರಿಗೆ ಹೆದ್ದಾರಿ ಶುಚಿತ್ವದ ಬಗ್ಗೆ ಗಮನ ಇಲ್ಲ. ಫ್ಲ್ಯಾಟ್‌ಗಳಲ್ಲಿ ವಾಸ್ತವ್ಯ ಇರುವವರನ್ನು ಕರೆದು ಎಚ್ಚರಿಕೆ ಕೊಟ್ಟಿದ್ದೇವೆ. ಪಂ. ವತಿಯಿಂದ ಪ್ರತೀ 2 ದಿಗಳಿಗೊಮ್ಮ ಗುತ್ತಿಗೆದಾರರ ಮುಖಾಂತರ ವಾಹನದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿಸಲಾಗುತ್ತಿದೆ. ಪುದು ಗ್ರಾ.ಪಂ. ನೂತನ ಆಡಳಿತ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಸಭೆ ಕರೆದು ತ್ಯಾಜ್ಯ ನಿರ್ಮೂಲನೆ ಪರಿಹಾರ ಕಂಡುಕೊಳ್ಳಲಾಗುವುದು.
-ಪ್ರೇಮಾ, ಪಿಡಿಒ, ಪುದು ಗ್ರಾ.ಪಂ., ಫರಂಗಿಪೇಟೆ