Advertisement

ರಾ.ಹೆದ್ದಾರಿ ಬದಿ ವಾಹನಗಳ ಪಾರ್ಕಿಂಗ್‌ ಪ್ರವಾಸಿಗರಿಗೆ ಕಿರಿಕಿರಿ

09:28 PM Dec 01, 2019 | Sriram |

ಉಪ್ಪುಂದ: ಪರಶುರಾಮನ ಸೃಷ್ಟಿಯ ಕರಾವಳಿ ತೀರದ ಪ್ರಕೃತಿಯ ವೈಶಿಷ್ಟ್ಯತೆಯನ್ನು ಪುಷ್ಟೀಕರಿಸುವುದು ಮರವಂತೆಯ ಕಡಲ ತೀರ.

Advertisement

ಹಸಿರು ತೋರಣಗಳ ನಡುವೆ ಪೂರ್ವದಲ್ಲಿ ಝಳು ಝುಳು ನಾದಗೈಯುವ ಸೌರ್ಪಣಿಕಾ ನದಿ ತೀರವಿದ್ದರೆ, ಪಶ್ಚಿಮದಲ್ಲಿ ಭೋರ್ಗರೆಯುವ ಸುಂದರ ಕಡಲ ಕಿನಾರೆ.

ಇದರ ನಡುವೆ ರಾ.ಹೆದ್ದಾರಿ 66 ಪ್ರಾಕೃತಿಕ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಿ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ ಸಮುದ್ರ ತೀರಕ್ಕೆ ಅಡ್ಡಲಾಗಿ ನಿಲ್ಲುವ ಸಾಲು-ಸಾಲು ವಾಹನಗಳಿಂದಾಗಿ ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯ ಸವಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.

ಸಮುದ್ರ ತೀರಕ್ಕೆ ಅಡ್ಡ ನಿಲ್ಲುವ ಲಾರಿಗಳು
ರಾ.ಹೆದ್ದಾರಿಯಲ್ಲಿ ಸಾಗುವ ಲಾರಿಗಳು, ಕಂಟೈನರ್‌, ಮೀನಿನ ವಾಹನಗಳು ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಮೀನು ಸಾಗಾಟದ ವಾಹನಗಳು ನಿಲ್ಲುವುದರಿಂದ ಮೀನಿನ ನೀರು ಚೆಲ್ಲಿ ಸುತ್ತಮುತ್ತಲಿನ ಪರಿಸರವೆಲ್ಲ ದುರ್ನಾತ ಬೀರುತ್ತದೆ. ಇದರಿಂದ ಪ್ರಯಾಣಿಕ ಹಾಗೂ ಪ್ರವಾಸಿಗರಿಗೆ ಸಮಸ್ಯೆಯಾಗುವುದರ ಜತೆ ಕಿರಿಕಿರಿ ಉಂಟಾಗುತ್ತದೆ.

ಮರವಂತೆ-ತ್ರಾಸಿ ಬೀಚ್‌ನಲ್ಲಿ ಸದಾ ಕಡಲ್ಕೊರೆತದ ಭೀತಿ‌ ಇರುವುದರಿಂದ. ರಾಷ್ಟ್ರೀಯ ಹೆದ್ದಾರಿಯ ಸುರಕ್ಷತೆಗಾಗಿ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಂಡ ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಈಗ ಮುಕ್ತಾಯದ ಹಂತಕ್ಕೆ ಬಂದಿದೆ.

Advertisement

ವಿಶ್ವವಿಖ್ಯಾತ ತಾಣವಾಗಿರುವ ಮರವಂತೆ ಬೀಚ್‌ನ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗಳ ಜತೆ ಜನಪ್ರತಿನಿಧಿಗಳು ಸುವ್ಯವಸ್ಥೆ ಹೊಂದುವಂತೆ ಮಾಡಲು ಶ್ರಮಿಸಿದರೆ ಮರವಂತೆ ಬೀಚ್‌ ವಿಶ್ವದಲ್ಲಿ ಇನ್ನಷ್ಟು ಕಂಗೊಳಿಸಲು ಸಾಧ್ಯವಾಗುತ್ತದೆ ಎಂಬುದು ಜನತೆಯ ಆಶಯವಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ ಇಲ್ಲ
ಸುಮಾರು ಒಂದೂವರೆ ಕಿ.ಮೀ. ಮರವಂತೆ – ತ್ರಾಸಿ ಬೀಚ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ ಕುರುಡುತನದಿಂದಾಗಿ ಪ್ರವಾಸಿಗರ ವಾಹನಗಳ ನಿಲುಗಡೆಗೆ ಯಾವುದೇ ಪಾರ್ಕಿಂಗ್‌ ವ್ಯವಸ್ಥೆ ಇಲ್ಲವೇ ಇಲ್ಲ, ಪ್ರವಾಸಿಗರು ಸೇರಿದಂತೆ ಇತರೆ ವಾಹನಗಳು ರಾ.ಹೆದ್ದಾರಿ ಬದಿಯಲ್ಲಿ ನಿಲ್ಲಿಸುವುದು ಅನಿವಾರ್ಯವಾಗಿದೆ.

ಪಾರ್ಕಿಂಗ್‌ ವ್ಯವಸ್ಥೆಯಿಂದ ಅನುಕೂಲ
ಬೇರೆ ಬೇರೆ ರಾಜ್ಯಗಳಿಂದ ಸಂಚರಿಸುವ ಲಾರಿಗಳ ಚಾಲಕರು ವಿಶ್ರಾಂತಿ ಪಡೆಯುವ ಸಲುವಾಗಿ ಲಾರಿಗಳನ್ನು ನಿಲ್ಲಿಸುತ್ತಾರೆ. ಇಲ್ಲಿ ಮಾನವೀಯ ದೃಷ್ಟಿಯಿಂದಲೂ ಯೋಚಿಸಬೇಕಾಗುತ್ತದೆ. ಪ್ರವಾಸೋದ್ಯಮ ಪಾರ್ಕಿಂಗ್‌ ವ್ಯವಸ್ಥೆ ಮಾಡಿದಾಗ ಎಲ್ಲ ವಾಹನಗಳ ಸವಾರರಿಗೂ ಅನುಕೂಲವಾಗುತ್ತದೆ. ರಸ್ತೆ ಕಾಮಗಾರಿ ಪೂರ್ಣಗೊಂಡರೆ ಈ ಸಮಸ್ಯೆಗೆ ಮುಕ್ತಿ ದೊರಕುತ್ತದೆ.
-ವಾಸಪ್ಪ ನಾಯ್ಕ, ಗಂಗೊಳ್ಳಿ
ಪೊಲೀಸ್‌ ಠಾಣಾಧಿಕಾರಿ

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next