Advertisement
ಭೂಕುಸಿತ: ಕಳೆದ ವರ್ಷ ಸುರಿದ ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ದೋಣಿಗಾಲ್ನಿಂದ ಅಡ್ಡಹೊಳೆಯವರೆಗೆ ಸುಮಾರು 25ಕ್ಕೂ ಹೆಚ್ಚು ಸ್ಥಳಗಳಿಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಆಗಾಗ ಬಂದ್ ಆಗಿತ್ತು. ತಾಲೂಕಿನ ಮಾರನಹಳ್ಳಿ ಸಮೀಪ ಗುಡ್ಡ ಕುಸಿದು ಟ್ಯಾಂಕರ್‌ವೊಂದು ಪ್ರಪಾತಕ್ಕೆ ಉರುಳಿ ಅದರಲ್ಲಿದ್ದ ಚಾಲಕ ಹಾಗೂ ಕ್ಲೀನರ್ ನೀರಿನಲ್ಲಿ ಮೃತಪಟ್ಟಿದ್ದರು. ಚಾಲಕನ ಮೃತದೇಹವನ್ನು ಸತತ ಕಾರ್ಯಾಚರಣೆ ನಡೆಸಿ ತೆಗೆಯಲಾಗಿತ್ತು.
Related Articles
Advertisement
ಏಕಮುಖ ಸಂಚಾರದಿಂದ ಟ್ರಾಫಿಕ್ ಜಾಮ್: ಕೆಲವೆಡೆ ಇನ್ನು ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಇದರಿಂದ ಹಲವು ಸಂದರ್ಭಗಳಲ್ಲಿ ಸರಾಗ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ವಾಹನಗಳ ದಟ್ಟಣಿಯುಂಟಾಗಿ ವಾಹನ ಚಾಲಕರು ತೊಂದರೆ ಅನುಭವಿಸಬೇಕಾಗಿದೆ. ಹೆದ್ದಾರಿಯುದ್ದಕ್ಕೂ ಮತ್ತೆ ಭೂಕುಸಿತ ಸಂಭವಿಸಿದಂತೆ ತಡೆಯುವ ಸಂಬಂಧ ಅಧ್ಯಯನ ನಡೆಸಿ, ವರದಿ ನೀಡಲು ಎರಡು ಸಮಿತಿಗಳನ್ನು ನೇಮಿಸಲಾಗಿತ್ತು. ಬೆಂಗಳೂ ರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಣ್ಣು ಎಂಜಿನಿಯರಿಂಗ್ ವಿಭಾಗದ ಪ್ರೊ.ಬಿ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ನೀಡಿದ್ದ ವರದಿ ಆಧರಿಸಿ, ಶಾಶ್ವತವಾಗಿ ಭೂಕುಸಿತ ತಡೆಗೆ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆದರೆ ಈ ವರದಿಯನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಭರ್ಜರಿ ಮಳೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ.
ಕೊನೆಯ ಹಂತದಲ್ಲಿ ಶಿರಾಡಿ ಘಾಟಿಯಲ್ಲಿ ಭೂಕುಸಿತ ತಡೆ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ತಾಲೂಕಿನಲ್ಲಿದ್ದ ರಾಷ್ಟ್ರೀಯ ಹೆದ್ದಾರಿ 75 ಉಪವಿಭಾಗದ ಕಚೇರಿ ಸ್ಥಳಾಂತರ ವಾಗಿದ್ದು ಈ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿ ಕುರಿತು ಮಾಹಿತಿ ನೀಡುವವರೆ ಇಲ್ಲದಂತಾಗಿದೆ.
ಅಪಾಯಕಾರಿ ಸ್ಥಳದ ದುರಸ್ತಿ: ಹೆಸರು ಹೇಳಲು ಇಚ್ಛಿಸದ ಹೆದ್ದಾರಿ ಎಂಜಿನಿಯರ್ ಒಬ್ಬರು ದೂರ ವಾಣಿಯಲ್ಲಿ ಮಾತನಾಡಿ, ಈಗಾಗಲೇ 3 ಅಪಾ¿ ುಕಾರಿ ಸ್ಥಳಗಳನ್ನು ದುರಸ್ತಿ ಮಾಡಲಾಗಿದ್ದು 4ನೇ ಅಪಾಯಕಾರಿ ಸ್ಥಳವನ್ನು ಇದೀಗ ದುರಸ್ತಿ ಮಾಡಲಾಗುತ್ತಿದೆ. ಕೆಲವೊಂದು ಕಾರಣಗಳಿಂದ ಕಾಮಗಾರಿ ತಡವಾಗಿ ಆಗುತ್ತಿದೆ ಎಂದರು.
● ಸುಧೀರ್ ಎಸ್.ಎಲ್