Advertisement
ಹೆದ್ದಾರಿ ಸಚಿವಾಲಯವು 2018ರ ಜನವರಿಯಲ್ಲಿ ಎಚ್‌ಎಚ್‌ಎಐ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಹೈವೇ ನೆಸ್ಟ್ ಪ್ರಾರಂಭಿಸುವ ಕುರಿತು ಪ್ರಕಟನೆ ಹೊರಡಿಸಿತ್ತು. ಟೋಲ್ ಪ್ಲಾಜಾದಿಂದ 200-250 ಮೀ. ಅಂತರದಲ್ಲಿ 10 ಮೀ.x20 ಮೀ. ಫ್ಲಾಟ್‌ಫಾರಂ ಮೂಲಕ ಸಣ್ಣ ಅಂಗಡಿ ತೆರೆದು ಕುಡಿಯುವ ನೀರು, ಟೀ/ಕಾಫಿ ಮತ್ತು ಫ್ಯಾಕ್ಡ್ ಫುಡ್ ನೀಡುವ ಕುರಿತು ತಿಳಿಸಿತ್ತು. ಈ ಸಂಬಂಧ 2018ರಲ್ಲೇ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದ ಪಕ್ಕದಲ್ಲಿ ಹೈವೇ ನೆಸ್ಟ್‌ಗೆ ಬೇಕಾದ ಎಲ್ಲ ವ್ಯವಸ್ಥೆಗಳಿರುವ ಅಂಗಡಿ ಅನುಷ್ಠಾನಗೊಳಿಸಲಾಗಿತ್ತು.
ಹೈವೇ ನೆಸ್ಟ್ ಮಿನಿ ಕ್ಯಾಂಟೀನ್‌ನ ರೀತಿಯಲ್ಲಿ ಕಾರ್ಯಾಚರಿಸಲಿದೆ. ಇಲ್ಲಿ ಬಿಸ್ಕೆಟ್ ಸಹಿತ ಇತರ ಸ್ನಾಕ್ಸ್‌ಗಳು (ಪ್ಯಾಕೆಟ್‌ಗಳಲ್ಲಿ), ನೀರಿನ ಬಾಟಲ್‌ಗಳು, ಟೀ/ಕಾಫಿ ಸಿಗಲಿವೆ. ಹೆದ್ದಾರಿ ಪ್ರಯಾಣಿಕರ ಅನುಕೂಲಕ್ಕೆ ಶೌಚಾಲಯ ವ್ಯವಸ್ಥೆಯೂ ಈ ಯೋಜನೆಯ ಮೂಲಕ ಇರುತ್ತದೆ. ಸುಸಜ್ಜಿತ ನೆಸ್ಟ್ ಪಾಳು ಬಿದ್ದಿದೆ !
ಬ್ರಹ್ಮರಕೂಟ್ಲು ಟೋಲ್‌ಪ್ಲಾಜಾದಲ್ಲಿ ಈ ಹೈವೇ ನೆಸ್ಟ್ (ಮಿನಿ) ಅನುಷ್ಠಾನಗೊಳ್ಳುವ ಸಂದರ್ಭ ಸುಸಜ್ಜಿತವಾಗಿ ಆಕರ್ಷಣೀಯವಾಗಿ ಕಾಣುತ್ತಿತ್ತು. ಆಗಲೇ ಅದು ಕಾರ್ಯಾ ರಂಭಗೊಂಡಿದ್ದರೆ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತಿತ್ತು. ಆದರೆ ಈಗ ಅಲ್ಲಿನ ಸ್ಥಿತಿ ಪಾಳು ಬಿದ್ದಂತೆ ಗೋಚರವಾಗುತ್ತಿದ್ದು ಸುತ್ತಲೂ ಪೊದೆ ಬೆಳೆದಿದೆ. ಕೌಂಟರ್, ಕುಳಿತುಕೊಳ್ಳುವ ವ್ಯವಸ್ಥೆ, ಸೋಲಾರ್ ದೀಪಗಳು ಉಪಯೋಗಕ್ಕೆ ಇಲ್ಲದಂತಾಗಿದ್ದು ನೆಸ್ಟ್‌ನ ಕೌಂಟರ್‌ಗೆ ತುಕ್ಕು ಹಿಡಿದಿದೆ. ಇನ್ನು ಅದು ಕಾರ್ಯಾರಂಭಗೊಳ್ಳಬೇಕಾದರೆ ಮತ್ತೆ ನವೀಕರಣ ನಡೆಯಬೇಕಿದೆ.
Related Articles
– ಶಿಶುಮೋಹನ್, ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ, ಮಂಗಳೂರು.
Advertisement
– ಕಿರಣ್ ಸರಪಾಡಿ