Advertisement

ಹೆದ್ದಾರಿ –ಜನತೆಯ ಬೇಡಿಕೆ  ಈಡೇರಿಕೆಗೆ ಒತ್ತು: ಜಿಲ್ಲಾಧಿಕಾರಿ

10:47 AM Oct 26, 2017 | Team Udayavani |

ಪಡುಬಿದ್ರಿ: ಚತುಷ್ಪಥ ಹೆದ್ದಾರಿ ಹಾದು ಹೋಗುವ ಗ್ರಾಮಗಳ ಜನತೆಯ ಬೇಡಿಕೆ ಈಡೇರಿಕೆಗೆ ಜಿಲ್ಲಾಡಳಿತವೂ ಹೆಚ್ಚಿನ ಒತ್ತು ನೀಡಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹೇಳಿದರು. 

Advertisement

ಅವರು ಬುಧವಾರದಂದು ಬಡಾ ಗ್ರಾಮ ಉಚ್ಚಿಲದಲ್ಲಿ ಉಂಟಾದ ನ್ಯೂನತೆಗಳ ಬಗೆಗೆ ಪರಿಶೀಲನೆ ನಡೆಸಲು ಆಗಮಿಸಿದ್ದಾಗ ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉಚ್ಚಿಲದಲ್ಲೂ ಫೂಟ್‌ ಓವರ್‌ ಬ್ರಿಜ್‌ ರಚನೆಯನ್ನು ಅತಿ ಶೀಘ್ರವಾಗಿ ಕೈಗೊಳ್ಳಲಾಗುವುದು. ಸರ್ವಿಸ್‌ ರಸ್ತೆ ನಿರ್ಮಾಣಕ್ಕಾಗಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು ವಿತ್ತ ಸಚಿವಾಲಯದ ಒಪ್ಪಿಗೆಗಾಗಿ ಎನ್‌ಎಚ್‌ಎಐ ಕಾಯುತ್ತಿದೆ. ಹಾಗಾಗಿ ಈ ನಿಟ್ಟಿನಲ್ಲಿ ಸ್ವಲ್ಪ ವಿಳಂಬ ಸಾಧ್ಯತೆಯಿದೆ ಎಂದೂ  ಜಿಲ್ಲಾಧಿಕಾರಿ ಹೇಳಿದರು.

ರಸ್ತೆ ವಿಭಾಜಕ ಎಲ್ಲಿ ಅವಶ್ಯವಿದೆ ಎಂಬ ಕುರಿತ ಸವಿವರ ವರದಿಯನ್ನು ರಾ.ಹೆ. ಪ್ರಾಧಿಕಾರ ಒಂದೆರಡು ದಿನಗಳಲ್ಲಿ ನೀಡಲಿದೆ. ಕಾಮಗಾರಿ ಕುರಿತ ನಿರ್ಧಾರಗಳನ್ನು ಹೆದ್ದಾರಿ ಪ್ರಾಧಿಕಾರವೇ ನಿರ್ಧರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next