Advertisement
ಕಳೆದ ಆಗಸ್ಟ್ನಲ್ಲಿ ಬರೆ ಕುಸಿದ ಪ್ರದೇಶದಲ್ಲಿ ಮರಳಿನ ತಡೆಗೋಡೆ ನಿರ್ಮಿಸಲಾಗಿತ್ತಾದರೂ ಇಂದು ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಸ್ತೆ ಬಿರುಕು ಬಿಟ್ಟಲ್ಲಿ ಬ್ಯಾರಿಕೇಡ್ಗಳ ಇರಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಕಾಟಿಕೇರಿ ಮೂಲಕ ಭಾರೀ ವಾಹನ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಕುಶಾಲನಗರ – ಸೋಮವಾರ ಪೇಟೆ – ಹಾಸನ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.