ಕೋಟ: ರಾಷ್ಟ್ರೀಯ ಹೆದ್ದಾರಿಯ 66ರ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೇ ಆದರೂ ಅಪಘಾತವಾಗಿ ಜೀವಹಾನಿ ಸಂಭವಿ ಸಿದರೆ ರಸ್ತೆ ನಿರ್ಮಿಸಿರುವ ನವಯುಗ ಕಂಪೆನಿಯನ್ನೇ ಹೊಣೆ ಮಾಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚಿಂದ್ರ ಎಚ್ಚರಿಸಿದ್ದಾರೆ.
ಅವರು ಗುರುವಾರ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ಅಪಾಯಕಾರಿ ವಲಯ ಎಂದು ಗುರುತಿಸಲ್ಪಟ್ಟಿರುವ ಕೋಟದ ಅಮೃತೇಶ್ವರೀ ಜಂಕ್ಷನ್‌ಗೆ ಜಿಲ್ಲಾಧಿಕಾರಿ ಜತೆಗೆ ಭೇಟಿ ನೀಡಿ ಸಮಸ್ಯೆ ಪರಿಹಾರದ ಕುರಿತು ಜಂಟಿ ಸಭೆ ನಡೆಸಿದರು.
ಅಸಮರ್ಪಕ ಜಂಕ್ಷನ್ ಇದಾಗಿ ರುವುದು, ರಾತ್ರಿಯಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇಲ್ಲದಿರುವುದು, ಅಗಲವಾದ ಯೂ ಟರ್ನ್ ಮುಂತಾದ ಕಾರಣದಿಂದ ಅಪಘಾತ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ನವಯುಗಕ್ಕೆ ತರಾಟೆ: ಹೆದ್ದಾರಿಯ ಅಸಮರ್ಪಕ ನಿರ್ವಹಣೆ, ಸಾರ್ವಜನಿಕರ ದೂರು ಗಳಿಗೆ ಪ್ರತಿಕ್ರಿಯೆ ನೀಡದಿರುವುದು ಹಾಗೂ ಅಪಘಾತ ಗಳ ಸಂಖ್ಯೆ ಹೆಚ್ಚುತ್ತಿದ್ದರೂ ನಿರ್ಲಕ್ಷé ತೋರುತ್ತಿರುವ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ನವಯುಗ ಅಧಿಕಾರಿ ಗಳನ್ನು ತರಾಟೆಗೆ ತೆಗೆದು ಕೊಂಡರು. ಮುಂದೆ ಒಂದೇ ಒಂದು ಅಪಘಾತ ಸಂಭವಿಸಿದರೂ ಅವರನ್ನೇ ಹೊಣೆ ಮಾಡಿ ಪ್ರಕರಣ ದಾಖಲಿಸಿ, ಪರಿಹಾರ ಕೋರಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಾರಿ ದೀಪಗಳ ಅಳವಡಿಕೆ, ಸರ್ವೀಸ್ ರಸ್ತೆಗೆ ಹಂಪ್, ಹೆಚ್ಚಿನ ಕ್ಷಮತೆಯ ಬ್ಯಾರಿಕೇಡ್‌ಗಳ ಅಳವಡಿಕೆ, ಜಂಕ್ಷನ್ ಅಗಲವನ್ನು ಕಿರಿದು ಗೊಳಿಸಲು ನವಯುಗ ಎಂಜಿನಿಯರ್‌ಗೆ ಸೂಚಿಸಿದರು.
ತಹಶೀಲ್ದಾರ್ ರಾಜಶೇಖರ ಮೂರ್ತಿ, ನವಯುಗ ಎಂಜಿನಿಯರ್ ಕಿರಣ್, ಟೋಲ್ ಮ್ಯಾನೇಜರ್ ಬಶೀರ್, ಪಿಆರ್‌ಒ ಯೋಗೀಶ್, ಬ್ರಹ್ಮಾವರ ವೃತ್ತನಿರೀಕ್ಷಕ ಆನಂತ ಪದ್ಮನಾಭ, ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ ಇದ್ದರು.
ಉದಯವಾಣಿ ವರದಿ
ಕೋಟದ ಅಪಾಯಕಾರಿ ಜಂಕ್ಷನ್ ಹಾಗೂ ಅಲ್ಲಿ ಅಪಘಾತ ಹೆಚ್ಚುತ್ತಿರುವ ಕುರಿತು ಉದಯವಾಣಿ ಸುದಿನದಲ್ಲಿ ವರದಿಯ ಮೂಲಕ ಬೆಳಕು ಚೆಲ್ಲಿತ್ತು.