Advertisement

ಹೆದ್ದಾರಿ ಅವ್ಯವಸ್ಥೆ : ಪಾದಯಾತ್ರೆ ಮೂಲಕ ಜನಜಾಗೃತಿಗೆ ನಿರ್ಧಾರ

09:47 PM Oct 06, 2019 | Team Udayavani |

ಪಡುಬಿದ್ರಿ: ಹೆದ್ದಾರಿ ಕಾಮಗಾರಿಗಳ ಅಸಮರ್ಪಕ, ಅವೈಜ್ಞಾನಿಕ ನಿರ್ವಹಣೆಯನ್ನು ಖಂಡಿಸಿ ಚುರುಕುಗೊಳಿಸುವಂತೆ ಆಗ್ರಹಿಸಿ ಶೀಘ್ರವೇ ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯೇತರವಾಗಿ ಉಚ್ಚಿಲದಿಂದ ಹೆಜಮಾಡಿ ವರೆಗೆ ಪಾದಯಾತ್ರೆಯ ನಡೆಸಲಾಗುವುದು ಎಂದು ಪಂಚಾಯತ್‌ ಅಧ್ಯಕ್ಷರ ರಾಜ್ಯ ಒಕ್ಕೂಟದ ಉಪಾಧ್ಯಕ್ಷ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Advertisement

ಈ ಹಿಂದೆಯೂ ಹೆದ್ದಾರಿ ನಿರ್ವಹಣೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಮುಗಿಸುವ ಕುರಿತಾದ ಮಾತುಕತೆಗಳಉ ಹಿಂದಿನ ಜಿಲ್ಲಾಧಿಕಾರಿ, ಕುಂದಾಪುರ ಸಹಾಯಕ ಕಮಿಷನರ್‌, ಎಸ್‌ಪಿ ಸಹಿತ ಜನಪ್ರತಿನಿಧಿಗಳನ್ನೊಳಗೊಂಡಂತೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿತ್ತು. ಇದೀಗ ಆ ಮಾತುಕತೆಯೂ ಮುರಿದುಬಿದ್ದಿದೆ. ಹೆದ್ದಾರಿ ಚತುಃಷ್ಪಥ ಕಾಮಗಾರಿಯಷ್ಟನ್ನೇ ಮಾಡಿ ಕೈತೊಳೆದುಕೊಂಡಿರುವ ನವಯುಗ ಕಂಪೆನಿಯು ಹೆದ್ದಾರಿಯಲ್ಲಿನ ಗುಂಡಿಗಳನ್ನೂ ಮುಚ್ಚದೇ ಕಣ್ಮುಚ್ಚಿ ಕುಳಿತಿದೆ.

ಆರ್ಥಿಕ ಸಂಕಷ್ಟದ ನೆಪವೊಡ್ಡಿ ಕಾಮಗಾರಿಗಳಾವುದನ್ನೂ ನಿರ್ವಹಿಸದೇ ಕಾಲಹರಣಗೈಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ವಿಸ್‌ ರಸ್ತೆ, ಟೋಲ್‌ಪ್ಲಾಜಾದ ಬಳಿ ಸ್ಥಳೀಯರಿಗೆ ಅನುಕೂಲ ವಾಗುವಂತೆ ಸ್ಕೈವಾಕ್‌ನಿರ್ಮಾಣ ಮತ್ತಿತರ ಪೂರಕ ಕಾಮಗಾರಿಗಳನ್ನು ನಿರ್ವಹಿಸಲು ನವಯುಗ ನಿರ್ಮಾಣ ಕಂಪೆನಿಗೆ 10 ದಿನಗಳ ಕಾಲಾವಕಾಶ ನೀಡಲಿದ್ದೇವೆ. ನಿರ್ಲಕ್ಷ é ಮುಂದುವರಿದರೆ ಜನರ ಆಕ್ರೋಶ ಎದುರಿಸಬೇಕಾದೀತು ಎಂದು ಪತ್ರಿಕಾಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next