Advertisement

ಕರ್ಕಿ ಗ್ರಾಮಸ್ಥರಿಂದ ಹೆದ್ದಾರಿ ಬಂದ್‌

06:11 PM Dec 24, 2019 | Team Udayavani |

ಹೊನ್ನಾವರ: ಕರ್ಕಿ ಗ್ರಾಮದವರ ದಶಕಗಳ ಸಮಸ್ಯೆ ಕಡಲ್ಕೊರೆತ ಹಾಗೂ ಸಮುದ್ರದ ಉಪ್ಪು ನೀರು ಮುಂತಾದ ಸಮಸ್ಯೆಗಳನ್ನು ಎಲ್ಲಾ ಸರ್ಕಾರಗಳು ನಿರ್ಲಕ್ಷಿಸಿದೆ. ಸಮಸ್ಯೆಯನ್ನು ಬಗೆಹರಿಸುವತ್ತ ಗಮನಹರಿಸಬೇಕು ಎಂದು ಕರ್ಕಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಬಂದ್‌ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಕರ್ಕಿ ಗ್ರಾಪಂ ಮುಂಭಾಗದಿಂದ ಪೊಲೀಸ್‌ ಬಂದೋಬಸ್ತ್ಮ ಧ್ಯೆ ಸಾಗಿ ಬಂದ ಗ್ರಾಮಸ್ಥರು ಜ್ಞಾನೇಶ್ವರಿ ಮಠದ ಬಳಿ ಬಂದು ಹೆದ್ದಾರಿಯಲ್ಲಿ ಧರಣಿ ಕುಳಿತರು. ಪೊಲೀಸ್‌ ಅಧಿಕಾರಿಗಳು ಶಾಂತಿಯುತ ಪ್ರತಿಭಟನೆಗೆ ಮನವಿ ನಡೆಸಿ, ಹೆದ್ದಾರಿ ತಡೆ ನಡೆಸದಂತೆ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡುವ ಒಳಗೆ ಯಾವುದೇ ರೀತಿಯ ಪ್ರತಿಭಟನೆ ವಾಪಸ್‌ ಪಡೆಯುವುದಿಲ್ಲ ಎಂದರು.

ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ತಹಶೀಲ್ದಾರ್‌ ವಿವೇಕ ಶೇಣಿ ಮಾತನಾಡಿ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇನೆ. ತಡೆಗೋಡೆ ನಿರ್ಮಾಣಕ್ಕೆ ಸುಮಾರು 8 ಕೋಟಿ ವೆಚ್ಚದ ಯೋಜನೆ ಮಂಜೂರಿ ಹಂತದಲ್ಲಿದೆ ಎನ್ನುವ ಮಾಹಿತಿ ನೀಡಿದರು. ಜಿಪಂ ಸದಸ್ಯ ಶಿವಾನಂದ ಹೆಗಡೆ ಮಾತನಾಡಿ ಇಂದು ಸಾಂಕೇತಿಕವಾಗಿ ಹೋರಾಟ ಆರಂಭವಾಗಿದೆ. ಇದು ಕೇವಲ ಮನವಿ ಕೊಡುವುದಕ್ಕೆ ಸೀಮಿತವಾದ ಪ್ರತಿಭಟನೆಯಲ್ಲ. ಈಗಲೇ ಸರ್ಕಾರ ಎಚ್ಚೆತ್ತುಕೊಂಡು ಆದಷ್ಟು ಬೇಗ ಸಂಬಂಧಪಟ್ಟ ಕಾಮಗಾರಿಗೆ ಅನುದಾನ ಮಂಜೂರಿ ಮಾಡಲು ಮುಂದಾಗಬೆಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಹೆಬ್ಟಾರ, ತಾಪಂ ಸದಸ್ಯ ತುಕಾರಾಮ ನಾಯ್ಕ ಮೊದಲಾದವರು ಬೇಡಿಕೆ ಈಡೇರಿಸಲು ಆಗ್ರಹಿಸಿದರು. ನಂತರ ಧರಣಿ ಹಿಂತೆಗೆದುಕೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next