Advertisement

ಕೃಷಿ ಕಾಯ್ದೆ ಖಂಡಿಸಿ ಇಂದು ರೈತರಿಂದ ಕರ್ನಾಟಕ ಸಹಿತ ದೇಶವ್ಯಾಪಿಯಾಗಿ ಹೆದ್ದಾರಿ ಬಂದ್‌

12:18 AM Feb 06, 2021 | Team Udayavani |

ಬೆಂಗಳೂರು/ಹೊಸದಿಲ್ಲಿ : ಕೃಷಿ ಕಾಯ್ದೆಗಳನ್ನು ಖಂಡಿಸಿ ಶನಿವಾರ ಕರ್ನಾಟಕ ಸಹಿತ ದೇಶವ್ಯಾಪಿಯಾಗಿ ರೈತ ಸಂಘಟನೆಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಬಂದ್‌ ನಡೆಸಲಿವೆ.

Advertisement

ರಾಷ್ಟ್ರ ಮಟ್ಟದಲ್ಲಿ ಕಿಸಾನ್‌ ಮೋರ್ಚಾ ಸೇರಿ ಹಲವು ರೈತ ಸಂಘನೆಗಳು ಹೆದ್ದಾರಿ ಬಂದ್‌ನಲ್ಲಿ ಭಾಗಿ ಆಗಲಿದ್ದು, ರಾಜ್ಯದಲ್ಲಿ ಸಂಯುಕ್ತ ಹೋರಾಟ -ಕರ್ನಾಟಕ ವೇದಿಕೆ ಕಾರ್ಯಕರ್ತರು, ರೈತರ ಜತೆಗೂಡಿ ಹಲವು ಕಡೆ ರಸ್ತೆ ತಡೆ ನಡೆಸಲಿದ್ದಾರೆ. ಹಾಗೆಯೇ ರಸ್ತೆ ಮಧ್ಯೆ ಊಟ ಸಿದ್ಧಪಡಿಸಿ ಸೇವಿಸಲಿದ್ದಾರೆ.

ಎಲ್ಲೆಲ್ಲಿ ಚಕ್ಕಾ ಜ್ಯಾಮ್‌?
ಉತ್ತರ, ಮಧ್ಯ ಕರ್ನಾಟಕ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆದ್ದಾರಿ ತಡೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಮುಖಂಡ ಬಡಗಲಾಪುರ ನಾಗೇಂದ್ರ ಎಚ್ಚರಿಸಿದ್ದಾರೆ. ಆದರೆ ಕರಾ ವಳಿಯಲ್ಲಿ ಬಂದ್‌ ಸಾಧ್ಯತೆ ಕಡಿಮೆ.

ದಿಲ್ಲಿ ಗಡಿಯಲ್ಲಿ ಸರ್ಪಗಾವಲು
ರೈತರು ಶನಿವಾರ ಚಕ್ಕಾ ಜ್ಯಾಮ್‌ ನಡೆಸಲು ನಿರ್ಧರಿಸಿ ರುವ ಹಿನ್ನೆಲೆಯಲ್ಲಿ ದಿಲ್ಲಿಯ ಪ್ರತಿಭಟನ ಸ್ಥಳ ಗಳ ಸಮೀಪ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಜ. 26ರ ಮಾದರಿಯ ಹಿಂಸಾ ಚಾರ ನಡೆಯದಂತೆ ತಡೆಯಲು ಈ ಮಟ್ಟದ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವದಂತಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳುವ ಸಲುವಾಗಿ ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡಲಾಗಿದೆ. ದಿಲ್ಲಿ-ಎನ್‌ಸಿಆರ್‌ ಪ್ರದೇಶ, ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಹೆದ್ದಾರಿ ತಡೆ ನಡೆಸುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

ರೈತ ಒಕ್ಕೂಟಗಳು, ವಿಪಕ್ಷಗಳಿಗೆ ಕೃಷಿ ಕಾಯ್ದೆಗಳ ಯಾವ ನ್ಯೂನತೆ ಯನ್ನೂ ಎತ್ತಿ ತೋರಿಸಲು ಸಾಧ್ಯವಾಗಿಲ್ಲ. ಪ್ರತಿಭಟನೆ ಒಂದು ರಾಜ್ಯಕ್ಕಷ್ಟೇ ಸೀಮಿತ, ಪ್ರಚೋದನೆ ನೀಡಿ ಪ್ರತಿಭಟನೆ ಮಾಡಿಸಲಾಗುತ್ತಿದೆ.
– ನರೇಂದ್ರ ಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next