Advertisement

ಸಾಲಮನ್ನಾಕ್ಕಾಗಿ ಹೆದ್ದಾರಿ ಬಂದ್‌

10:07 AM Sep 24, 2019 | Suhan S |

ಜೇವರ್ಗಿ: ರೈತರ ಸಾಲಮನ್ನಾ ಮಾಡಬೇಕು, ಸೊನ್ನ ಕ್ರಾಸ್‌ ದಿಂದ ಹೆಗ್ಗಿನಾಳ, ಹಂಚಿನಾಳ ಕ್ರಾಸ್‌ವರೆಗೆ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ತಾಲೂಕಿನ ಸೊನ್ನ ಕ್ರಾಸ್‌ ಹತ್ತಿರ ಪ್ರತಿಭಟನೆ ನಡೆಸಲಾಯಿತು.

Advertisement

ಹುಮನಾಬಾದ-ವಿಜಯಪುರ ರಾಷ್ಟ್ರೀಯ ಹೆದ್ದಾರಿ-50ರ ಮೇಲೆ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ನೂರಾರು ಜನ ರೈತರು ಜಮಾಯಿಸಿ ಹೆದ್ದಾರಿ ಬಂದ್‌ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಮಾನ್ಪಡೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ರೈತರ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರಗಳು ಕುಂಭಕರ್ಣ ನಿದ್ರೆಯಲ್ಲಿವೆ. ಕಳೆದ ಕುಮಾರಸ್ವಾಮಿ ಘೋಷಣೆ ಮಾಡಿದ ರೈತರ ಸಾಲಮನ್ನಾ ಕಾಗದಲ್ಲಿಯೇ ಉಳಿದಿದೆ. ಕೂಡಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಹೊಸ ಸಾಲ ನೀಡಬೇಕು.

ಕಳೆದ ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಸೊನ್ನ-ಹೆಗ್ಗಿನಾಳ, ಸೊನ್ನ-ಹಂಚಿನಾಳ ವರೆಗೆ ರಸ್ತೆ ಡಾಂಬರೀಕರಣವಾಗಬೇಕು, ನೀರಲಕೋಡದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು, ತಾಲೂಕಿನ ರೈತರಿಗೆ ಸತತ 10 ಗಂಟೆ ವಿದ್ಯುತ್‌ ನೀಡಬೇಕು, ವಿಧವೆಯರಿಗೆ, ವೃದ್ಧರಿಗೆ ಮಾಸಾಶನ ನಿಂತು ಹೋಗಿದ್ದು ಕೂಡಲೇ ಬಿಡುಗಡೆ ಮಾಡಬೇಕು, ತಕ್ಷಣವೇ ಹೆಸರು, ಉದ್ದು ಖರೀದಿ ಕೇಂದ್ರ ಪ್ರಾರಂಭಿಸಬೇಕು, ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಹಣ

ಬಿಡುಗಡೆ ಮಾಡಬೇಕು, ಹರವಾಳ ಸುತ್ತಲಿನ ಗ್ರಾಮಗಳಿಗೆ ನೀರಿನ ಸಮಸ್ಯೆ ಬಗೆಹರಿಸಲು ಬ್ಯಾರೇಜ್‌ ನಿರ್ಮಿಸಬೇಕು, ಹೆಗ್ಗಿನಾಳ ಗ್ರಾಮದಲ್ಲಿ ಹೊಸ ಕೊಳವೆ ಬಾವಿ ಕೊರೆಸಬೇಕು, ಮಾವನೂರ-ಹೆಗ್ಗಿನಾಳ, ಇಜೇರಿ-ನೀರಲಕೋಡ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಗ್ರೇಡ್‌-2 ತಹಶೀಲ್ದಾರ್‌ ರಮೇಶಬಾಬು ಅವರು ತಮ್ಮ ವಿವಿಧ ಬೇಡಿಕೆ ಕುರಿತು ಸಂಬಂಧಪಟ್ಟ ಅ ಧಿಕಾರಿಗಳ ಹಾಗೂ ಶಾಸಕರ ಜೊತೆ ಚರ್ಚಿಸಿ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ, ರೈತ ಮುಖಂಡ ವೆಂಕೋಬರಾವ ವಾಗಣಗೇರಾ, ಸಿದ್ದರಾಮ ಹರವಾಳ, ಪರಶುರಾಮ ಬಡಿಗೇರ, ಮಲ್ಕಪ್ಪ ಹರವಾಳ, ಪೀರಪ್ಪ ಯಾತನೂರ, ನಿಂಗಪ್ಪ ಹೆಗ್ಗಿನಾಳ, ಲಕ್ಷ್ಮಣ ಹಂಚಿನಾಳ, ಸಿದ್ದಣ್ಣ ನೀರಲಕೋಡ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next