Advertisement

ಉಡುಪಿ: ಸರಕಾರಿ ಹೈಟೆಕ್‌ ಜಿಮ್‌ಗೆ ಅಂತಿಮ ಸ್ಪರ್ಶ

12:50 AM Jan 22, 2019 | Harsha Rao |

ಉಡುಪಿ: ಜಿಮ್‌ಗಳೆಂದರೆ ಖಾಸಗಿ ವಲಯದ್ದೇ ಕಾರುಬಾರು. ಆದರೆ ಉಡುಪಿಯಲ್ಲಿ ಸರಕಾರದ ಹೈಟೆಕ್‌ ಜಿಮ್‌ ಆರಂಭಗೊಳ್ಳಲು ಸಕಲ ಸಿದ್ಧತೆಗಳೂ ನಡೆದಿವೆ. 

Advertisement

ಪ್ರಮೋದ್‌ ಮಧ್ವರಾಜ್‌ ಅವರು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿದ್ದಾಗ ಮಂಜೂರುಗೊಂಡ ಜಿಮ್‌ನ ಅಂತಿಮ ಕೆಲಸಗಳು ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಆಗ ಬೆಳಗಾವಿ, ಮೈಸೂರು, ಬೆಂಗಳೂರು ಮತ್ತು ಉಡುಪಿಯಲ್ಲಿ ಜಿಮ್‌ ಮಂಜೂರಾಗಿತ್ತು. 

ಸುಮಾರು 3,000 ಚದರಡಿ ವಿಸ್ತೀರ್ಣದ ಕಟ್ಟಡದಲ್ಲಿ ಒಟ್ಟು 2 ಕೋ.ರೂ. ವೆಚ್ಚದಲ್ಲಿ ಜಿಮ್‌ ಸ್ಥಾಪನೆಗೊಳ್ಳುತ್ತಿದೆ. 1.5 ಕೋ.ರೂ. ವೆಚ್ಚದಲ್ಲಿ ಜಾಗರ್‌ ಸಹಿತ ಇತರ ಉಪಕರಣಗಳು ಯುವಜನ ಸಬಲೀಕರಣ ಇಲಾಖೆಯ ಕೇಂದ್ರ ಕಚೇರಿ ಬೆಂಗಳೂರಿನಿಂದ ರವಾನೆಯಾಗಿ ಬಂದಿದೆ. 50 ಲ.ರೂ. ವೆಚ್ಚದಲ್ಲಿ ಏರ್‌ಕಂಡೀಷನರ್‌, ಫ್ಲೋರಿಂಗ್ಸ್‌, ಗ್ಲಾಸ್‌ ವರ್ಕ್‌, ಸ್ನಾನಗೃಹ, ಲೈಟಿಂಗ್‌ ಇತ್ಯಾದಿ ಇಂಟೀರಿಯರ್‌ ಕೆಲಸಗಳು ಕರ್ನಾಟಕ ರೂರಲ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ.ನಿಂದ ನಡೆಯುತ್ತಿದೆ. 

ಇಲ್ಲಿ ಈಗಾಗಲೇ ಸಾಮಾನ್ಯ ಜಿಮ್‌ ಸುಮಾರು ಐದು ವರ್ಷಗಳಿಂದ ನಡೆಯುತ್ತಿದೆ. ಇದರಲ್ಲಿ ಸುಮಾರು 150 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ದೊಡ್ಡವರಿಗೆ 500 ರೂ., ಚಿಕ್ಕವರಿಗೆ 300 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿದೆ. ಆ್ಯತ್ಲೆಟಿಕ್ಸ್‌ನಲ್ಲಿ ಭಾಗವಹಿಸುವ ನಿತ್ಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಈಗ ಹೊಸದಾಗಿ ಆರಂಭವಾಗುತ್ತಿರುವುದು ಹೈಟೆಕ್‌ ಜಿಮ್‌.

ಹೈಟೆಕ್‌ ಜಿಮ್‌ನ ಆಂತರಿಕ ಕೆಲಸಗಳು ನಡೆದ ಕೂಡಲೇ ಜಿಮ್‌ ಉಪಕರಣಗಳನ್ನು ಜೋಡಿಸಲಾಗುತ್ತದೆ. ಒಂದು ವಾರದೊಳಗೆ ಜಿಮ್‌ ಕಾರ್ಯಾರಂಭ ಮಾಡಬಹುದು. 
– ಡಾ|ರೋಶನ್‌ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ. 

Advertisement
Advertisement

Udayavani is now on Telegram. Click here to join our channel and stay updated with the latest news.

Next