Advertisement
ನೋಡೆಲ್ ಅಧಿಕಾರಿಯಾಗಿ ಮಂಗಳೂರು ಉತ್ತರದ ಕ್ಷೇತ್ರ ಶಿಕ್ಷಣಾಧಿಕಾರಿ ಉಸ್ಮಾನ್ ಅವರು ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಮಸ್ಥರು ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ಸಂಗ್ರಹಕರು ಪ್ರತಿ ತಿಂಗಳ 10ನೇ ತಾರೀಕಿನಂದು ಗ್ರಾ.ಪಂ. ಗೆ ಬಂದು ಬಿಲ್ ಮೊತ್ತ ಸಂಗ್ರಹಿಸಿದರೂ ಕೂಡ ಅನಂತರದ ಬಿಲ್ಲಿನಲ್ಲಿ ಪಾವತಿಸಿದ ಮೊತ್ತ ಬಾಕಿಯಾಗಿ ಬರುತ್ತಿರುವ ಬಗ್ಗೆ ಮತ್ತು ಮೀಟರ್ ಗಣಾಂಕವನ್ನು ನೋಡದೆ ಮೀಟರ್ ರೀಡರ್ ಬೇಕಾಬಿಟ್ಟಿ ವಿದ್ಯುತ್ ಬಿಲ್ ನೀಡುವ ಬಗ್ಗೆ ಮತ್ತು ಕೆ.ಪಿ.ಟಿ.ಸಿ.ಎಲ್‌ರವರು ಶಾಲೆಯ ಬಳಿ ಇರುವ ಹೈಟೆನ್ಶನ್ ವಿದ್ಯುತ್ ಟವರ್ ಬದಲಾಯಿಸಿ ಅದೇ ಜಾಗದಲ್ಲಿ ಅಳವಡಿಸುವ ಬಗ್ಗೆ ತೀವ್ರವಾಗಿ ಆಕ್ಷೇಪಿಸಿದರು.
62ನೇ ತೋಕೂರು ಗ್ರಾಮದ ವ್ಯಾಪ್ತಿಯು ಮಾಡಿಲ ಸೇತುವೆಯ ಬಳಿಯಲ್ಲಿ ಪ್ರಾರಂಭವಾಗುವ ಪ್ರವೇಶ ದ್ವಾರದಲ್ಲಿ ಗ್ರಾಮಕರಣಿಕರು ಗಡಿ ಗುರುತಿಸಿ ಕೊಟ್ಟರೆ ಅಲ್ಲಿ ಗ್ರಾ.ಪಂ.ಗೆ ಸಂಬಂ ಧಿಸಿದ ಒಂದು ಸ್ವಾಗತ ನಾಮಫಲಕವನ್ನು ಅಳವಡಿಸಿ ನಾಮಫಲಕದಿಂದ ಈಚೆಗೆ ಹೊರಗಿನವರು ಯಾರೂ ತ್ಯಾಜ್ಯ ಹಾಕಬಾರದೆಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂದು ಗ್ರಾಮಸ್ಥರು ಸಲಹೆ ನೀಡಿದರು. ವಿವಿಧ ಇಲಾಖೆಗಳಾದ ಕೃಷಿ, ಮೆಸ್ಕಾಂ, ಕಂದಾಯ, ಆಯುಷ್, ಪಶುಸಂಗೋಪನೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇವೇ ಮುಂತಾದ ಇಲಾಖಾಧಿ ಕಾರಿಗಳು ತಮ್ಮ ಇಲಾಖೆಗಳಿಂದ ಗ್ರಾಮಸ್ಥರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
Related Articles
ಮೈಂದಗುರಿಯ ಡಿ.ಸಿ. ಮನ್ನಾ ಜಾಗವನ್ನು ನಿವೇಶನ ರಹಿತರಿಗೆ ಮಾತ್ರ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮಸ್ಥರು ಗ್ರಾಮಕರಣಿಕರನ್ನು ಒತ್ತಾಯಿಸಿದರು. ಸರಕಾರದಿಂದ ಸಿಗುವ ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ವೇತನಗಳು ಮಂಜೂರಾಗಿದ್ದರೂ ಕೂಡ ಫಲಾನುಭವಿಯ ಕೈಗೆ ಸಿಗದೆ ವಿಳಂಬವಾಗುತ್ತಿರುವ ಬಗ್ಗೆ ಬೈಕಂಪಾಡಿ ಅಂಚೆ ಕಚೇರಿಯಲ್ಲಿ ವಿಚಾರಿಸಿದರೆ ಸಾಫ್ಟ್‌ವೇರ್ ತೊಂದರೆ ಇದೆ ಎಂದು ಅಲ್ಲಿಯ ಅಂಚೆಪಾಲಕರು 2 ತಿಂಗಳಿನಿಂದ ಹಾರಿಕೆಯ ಉತ್ತರ ನೀಡುತ್ತಾರೆ ಎಂದು ಈ ಬಗ್ಗೆ ಪಾಂಡೇಶ್ವರದ ಪ್ರಧಾನ ಅಂಚೆ ಕಚೇಯ ಸೀನಿಯರ್ ಪೋಸ್ಟ್ ಮಾಸ್ಟರ್‌ರಿಗೆ ದೂರು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
Advertisement