Advertisement

ಗುರುಮಠಕಲ್‌ದಲ್ಲಿ ಬೆಳಗದ ಹೈಮಾಸ್ಟ್‌ ದೀಪಗಳು

04:33 PM Oct 22, 2020 | Suhan S |

ಗುರುಮಠಕಲ್‌: ಪಟ್ಟಣದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಅಳವಡಿಸಿರುವ ಹೈಮಾಸ್ಟ್‌ ಹಾಗೂ ಮಕ್ರ್ಯೂರಿ ದೀಪಗಳು ಬೆಳಕು ನೀಡುತ್ತಿಲ್ಲ!

Advertisement

ಪುರಸಭೆ ಪಟ್ಟಣದ ಸೌಂದರ್ಯವನ್ನು ವಿದ್ಯುತ್‌ ದೀಪಗಳಿಂದ ಹೆಚ್ಚಿಸುವ ಉದ್ದೇಶದಿಂದ ಜಿಪಂ ಮತ್ತು ಲೊಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಪಟ್ಟಣದ ಯಾದಗಿರಿ-ಹೈದರಾಬಾದ ರಸ್ತೆ ಹಾಗೂ ತಹಶೀಲ್‌ ಕಚೇರಿಯಿಂದ ಸರಕಾರಿ ಆಸ್ಪತ್ರೆಯ ರಸ್ತೆಯಲ್ಲಿ ಅಳವಡಿಸಿರುವ ಹೈಮಾಸ್ಟ್‌ ಹಾಗೂ ಮಕ್ರ್ಯೂರಿ ವಿದ್ಯುತ್‌ ದೀಪಗಳು ಕೆಟ್ಟವೆ. ಇದರಿಂದಾಗಿ ರಾತ್ರಿ ವೇಳೆ ಆಸ್ಪತ್ರೆಗೆ ಹೋಗುವ ಜನರಿಗೆ ಬೆಳಕಿಲ್ಲದೇ ಕಗ್ಗತ್ತಲಲ್ಲಿ ಮುಳುಗಿದೆ.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್‌ ವಿದ್ಯುತ್‌ ದೀಪ ಅಳವಡಿಸಿ ಪಟ್ಟಣಕ್ಕೆ ಹೂಸ ಮೆರುಗನ್ನು ನೀಡುತ್ತದೆ ಎಂದು ಜನರು ಸಹ ಖುಷಿಯಲ್ಲಿದ್ದರು. ಕೇವಲ ತೋರಿಕೆಗೆ ಎಂಬಂತೆ ಲಕ್ಷಾಂತರ ವೆಚ್ಚದಲ್ಲಿ ಈ ದೀಪಗಳ ಸೂಕ್ತ ನಿರ್ವಹಣೆ ಮಾಡದಿರುವುದರಿಂದ ರಾತ್ರಿಹೊತ್ತು ಅಸ್ಥಿ ಪಂಜರದಂತೆ ಕಾಣುತ್ತಿವೆ. ಪಟ್ಟಣದ ಪ್ರವಾಸಿ ಮಂದಿರ ಎದುರಿನ ರಸ್ತೆ ಮಧ್ಯೆಯ ಕಂಬದಲ್ಲಿ ಸಪ್ಪಳ ಬರುತ್ತಿದ್ದು, ಕೆಲವು ದಿನಗಳ ಹಿಂದೆ ಹೈವೋಲ್ಟೋಜಿನಿಂದ ಕಂಬಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಕೆಲವು ಕಂಬಗಳದೀಪಗಳು ಬಲ್ಬ್ ಇಲ್ಲದೆ ಹಾಳಾಗಿವೆ. ಕೆಲವು ರಸ್ತೆ ಅಪಘಾತಗಳಿಂದ ಹಾಳಾಗಿವೆ. ಇನ್ನೂ ಕೆಲವು ಕಂಬಗಳಿಗೆ ವಿದ್ಯುತ್‌ ಟರ್ಮಿನಲ್‌ ಪೆಟ್ಟಿಗೆಯ ಸಂಪರ್ಕ ಇಲ್ಲದೆ ಹಾಳಾಗುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಮಾತ್ರ ಜಾಣಮೌನ ಪ್ರದರ್ಶಿಸುತ್ತಿದ್ದಾರೆ.

ಪಟ್ಟಣ ಈಗ ತಾಲೂಕು ಕೇಂದ್ರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸೂಕ್ತ ಸೌಕರ್ಯ ಒದಗಿಸಲು ಪುರಸಭೆ ಕಾರ್ಯ ನಿರ್ವಹಿಸಬೇಕಿದೆ.ಲಕ್ಷಾಂತರ ರೂ. ವೆಚ್ಚದ ಈ ದೀಪಗಳು ರಾತ್ರಿ ಹೊತ್ತು ಬೆಳಕು ನೀಡುವ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸಿ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬುದೇ ಸ್ಥಳೀಯರ ಆಶಯವಾಗಿದೆ.

ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ವಿದ್ಯುತ್‌ ದೀಪಗಳು ಬೆಳಗುತ್ತಿಲ್ಲ. ಪುರಸಭೆ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಬೇಕು. ಶೀಘ್ರ ವಿದ್ಯುತ್‌ ದೀಪಗಳನ್ನು ದುರಸ್ತಿ ಮಾಡಬೇಕು. -ವಿಶ್ವನಾಥ ಗೊಲ್ಲ, ಸ್ಥಳೀಯರು.

Advertisement

ರಾತ್ರಿ ವೇಳೆ ಗುರುಮಠಕಲ್‌ ಸರಕಾರಿ ಆಸ್ಪತ್ರೆಗೆ ನಜರಾಪುರದಿಂದ ಬಂದಿನಿ. ಆ ರಸ್ತೆಯಲ್ಲಿ ದೀಪಗಳು ಬೆಳಗುತ್ತಿಲ್ಲ. ಸಂಬಂಧಿತ ಅಧಿಕಾರಿಗಳು ದುರಸ್ತಿ ಮಾಡಬೇಕು. – ಬಾಬು ನಜರಪೂರ,ಕರ್ನಾಟಕ ಜನಸೇನಾ ಸಂಘಟನೆ, ಜಿಲ್ಲಾ ಸಂಚಾಲಕರು.

ಸಮಸ್ಯೆ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿಯೇ ವಿದ್ಯುತ್‌ ದೀಪಗಳ ದುರಸ್ತಿಗೆ ಕ್ರಮ ವಹಿಸಲಾಗುವುದು. – ಶರಣಪ್ಪ ಮಾಡಿವಾಳ, ಪುರಸಭೆ ಮುಖ್ಯಾಧಿಕಾರಿ.

 

ಚನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next