Advertisement

ಮೂಲೆ ಸೇರಿದ ಬೆಳ್ಮಣ್‌ ಪೇಟೆಯ ಹೈಮಾಸ್ಟ್‌ ದೀಪ

10:34 PM Jul 24, 2019 | Sriram |

ಬೆಳ್ಮಣ್‌: ಇಲ್ಲಿನ ಪೇಟೆಯಲ್ಲಿದ್ದ ಹೈಮಾಸ್ಟ್‌ ದೀಪವನ್ನು ಪಡುಬಿದ್ರಿ-ಕಾರ್ಕಳ ಹೆದ್ದಾರಿ ಅಗಲೀಕರಣದ ಸಂದರ್ಭ ತೆರವು ಮಾಡಲಾಗಿದ್ದು ರಸ್ತೆ ನಿರ್ಮಾಣ ಕಾರ್ಯ ಮುಗಿದು 2 ವರ್ಷ ಕಳೆದರೂ ಇನ್ನೂ ಅಳವಡಿಸಿಲ್ಲ.

Advertisement

ಹತ್ತು ವರ್ಷಗಳ ಹಿಂದೆ ಶಾಸಕರು ಬೆಳ್ಮಣ್‌ ಪಂಚಾಯತ್‌ಗೆ ಕೊಡುಗೆಯಾಗಿ ನೀಡಿದ್ದರು. ಹೆದ್ದಾರಿ ವಿಸ್ತರಣೆ ಸಂದರ್ಭ ಆ ದೀಪ ಕಿತ್ತು ಹಾಕಲಾಗಿತ್ತು. ಕಾಮಗಾರಿ ಮುಗಿದ ನಂತರ ಪಂಚಾಯತ್‌ ಆಡಳಿತ ಮರುಸ್ಥಾಪನೆಗೆ ಮುಂದಾಗಿಲ್ಲ. ಈಗ ದೀಪಸ್ತಂಭ ಪಂಚಾಯತ್‌ ಎದುರಿನ ಬಸ್ಸು ತಂಗುದಾಣದ ಹಿಂಭಾಗ ಅನಾಥವಾಗಿ ಬಿದ್ದಿದ್ದು ಗುಜರಿ ಸೇರುವ ಹಂತದಲ್ಲಿದೆ.

ನಿರ್ವಹಣೆ ಬಗ್ಗೆ ಅಸಮಾಧಾನ
ಬೆಳ್ಮಣ್‌ ಪಂಚಾಯತ್‌ ಆದಾಯದಲ್ಲಿ ಮುಂದಿ ದ್ದರೂ ದಾರಿದೀಪ ಸಹಿತ ವಿವಿಧ ವಿಷಯಗಳಲ್ಲಿ ಜನರಿಗೆ ಸೂಕ್ತ ಸೇವೆ ನೀಡುವಲ್ಲಿ ವಿಫಲವಾಗಿದೆ ಎಂದು ಸದಸ್ಯರೊಬ್ಬರು ದೂರಿದ್ದಾರೆ. ಹಿಂದೆ ಆಡಳಿತಕ್ಕೆ ಸಂಬಂಧಿಸಿದವರೇ ದಾರಿದೀಪ ನಿರ್ವಹಣೆ ಮಾಡುತ್ತಿದ್ದು ಅದು ಸರಿ ಇಲ್ಲವೆಂಬ ದೂರುಗಳು ಬಂದ ಹಿನ್ನೆಲೆೆಯಲ್ಲಿ ಪಂಚಾಯತ್‌ ಸದಸ್ಯರೇ ಇತ್ತೀಚೆಗೆ ಸಮಿತಿಯೊಂದನ್ನು ರಚಿಸಿದ್ದಾರೆಂದು ಪಂಚಾಯತ್‌ನ ಮಾಜಿ ಆಧ್ಯಕ್ಷೆ ಮಲ್ಲಿಕಾ ಜಿ.ರಾವ್‌ ತಿಳಿಸಿದ್ದಾರೆ.

ರಸ್ತೆ ವಿಸ್ತರಣೆ ಸಂದರ್ಭ ತೆರವಾಗಿದ್ದ ದೀಪ
ಹಿಂದಿನ ಶಾಸಕ ಎಚ್‌. ಗೋಪಾಲ ಭಂಡಾರಿಯವರು ತಮ್ಮ ಅನುದಾನದಲ್ಲಿ ನೀಡಿದ್ದ ಇಲ್ಲಿನ ಹೈಮಾಸ್ಟ್‌ ದೀಪವನ್ನು ಹೆದ್ದಾರಿ ವಿಸ್ತರಣೆ ಸಂದರ್ಭ ತೆರವುಗೊಳಿಸಲಾಗಿದ್ದು ವರುಷ ಎರಡು ಕಳೆದರೂ ಅಳವಡಿಸಿಲ್ಲ.
-ಸತೀಶ್‌ ಬೆಳ್ಮಣ್‌,ಗ್ರಾಮಸ್ಥ

ಬೀದಿ ದೀಪ ಸರಿಪಡಿಸಲು ಕೂಡಲೇ ಕ್ರಮ
ಬೀದಿ ದೀಪ ಸರಿಪಡಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
-ವಾರಿಜಾ,
ಬೆಳ್ಮಣ್‌ ಗ್ರಾ.ಪಂ.ಅಧ್ಯಕ್ಷೆ

Advertisement
Advertisement

Udayavani is now on Telegram. Click here to join our channel and stay updated with the latest news.

Next