Advertisement

2019 ಬಾಲಿವುಡ್‌ಗೆ ಭರ್ಜರಿ ಆದಾಯದ ವರ್ಷ

11:52 AM Oct 05, 2019 | Team Udayavani |

ಹೊಸದಿಲ್ಲಿ: ದೇಶದ ವಿವಿಧ ಉದ್ಯಮರಂಗಗಳು ವಿವಿಧ ಕಾರಣಗಳಿಗೆ ಹಿನ್ನಡೆಯನ್ನು ಅನುಭವಿಸುತ್ತಿದ್ದರೆ, 2019 ಬಾಲಿವುಡ್‌ ಸಿನೆಮಾ ಉದ್ಯಮದ ಪಾಲಿಗೆ ಹರ್ಷದಾಯಕವಾಗಿದೆ.

Advertisement

ಈ ವರ್ಷದ ಮೊದಲ ತ್ತೈಮಾಸಿದಕದಲ್ಲೇ ಉದ್ಯಮ ಒಟ್ಟು 3700-3800 ಕೋಟಿ ರೂ. ಆದಾಯ ಪಡೆದಿದ್ದು ಇದು ಇತಿಹಾಸದಲ್ಲೇ ಅತಿ ಹೆಚ್ಚಾಗಿದೆ.
2018ರಲ್ಲಿ ಇದೇ ಅವಧಿಯಲ್ಲಿ ಉದ್ಯಮ 3000 ಕೋಟಿ ರೂ. ಸಂಪಾದಿಸಿತ್ತು.
ಈ ವರ್ಷ ಒಟ್ಟು 13 ಚಿತ್ರಗಳು 100 ಕೋಟಿ ರೂ. ಗಳಿಗೂ ಹೆಚ್ಚು ಸಂಪಾದನೆ ಮಾಡಿವೆ. ಹಿಂದಿನ ವರ್ಷ 10 ಸಿನೆಮಾಗಳಷ್ಟೇ ಈ ಸಾಧನೆ ಮಾಡಿತ್ತು.
ಈ ಅಂಕಿಂಶಗಳೊಂದಿಗೆ ಹಿಂದಿನ ವರ್ಷಕ್ಕಿಂತ ಉದ್ಯಮದ ಗಳಿಕೆ ಶೇ.20ರಷ್ಟು ಹೆಚ್ಚಾಗಿದೆ.

ದೇಶೀಯವಾಗಿ ಬಾಕ್ಸ್‌ ಆಫೀಸ್‌ ಗಳಿಕೆ 276.34 ಕೋಟಿ ರೂ.ಗಳಾಗಿವೆ. ಕಬೀರ್‌ ಸಿಂಗ್‌ ಸಿನೆಮಾ ಅತಿ ಹೆಚ್ಚು 276.34 ಕೋಟಿ ರೂ. ಸಂಗ್ರಹ ಮಾಡಿದೆ. ಉರಿ ದಿ ಸರ್ಜಿಕಲ್‌ ಸ್ಟ್ರೈಕ್‌ 244 ಕೋಟಿ ರೂ. ಸಂಪಾದನೆ ಮಾಡಿದೆ. ಭಾರತ್‌ ಚಿತ್ರ 197.34 ಕೋಟಿ ರೂ, ಮಿಷನ್‌ ಮಂಗಲ್‌ 192.73 ಕೋಟಿ ರೂ., ಟೋಟಲ್‌ ಧಮಾಲ್‌ 150.07 ಕೋಟಿ ರೂ. ಬಾಚಿಕೊಂಡಿವೆ. ಇದು ಹೊರತಾಗಿ ಗಲ್ಲಿ ಬಾಯ್‌ 134 ಕೋಟಿ ರೂ., ಚಿಚ್ಚೋರೆ 139 ಕೋಟಿ ರೂ., ಡ್ರೀಮ್‌ ಗರ್ಲ್ 123 ಕೋಟಿ ರೂ. ಸಂಪಾದನೆ ಮಾಡಿವೆ.
ಆರ್ಥಿಕ ಹಿಂಜರಿತ ಇದ್ದರೂ ಸಿನೆಮಾ ಉದ್ಯಮಕ್ಕೆ ಅದರಿಂದೇನೂ ಸಮಸ್ಯೆಯಾಗಿಲ್ಲ ಎಂಬುದನ್ನು ಈ ಅಂಕಿ ಅಂಶಗಳು ಹೇಳಿವೆ. ಅಲ್ಲದೇ ದೊಡ್ಡ ಸ್ಟಾರ್‌ಗಳು ಇಲ್ಲದೆಯೂ ಹೊಸಬರೇ ಇರುವ ಚಿತ್ರಗಳು ಉತ್ತಮ ಗಳಿಕೆ ಮಾಡಿವೆ. ಸಣ್ಣ ಬಜೆಟ್‌ ಚಿತ್ರಗಳೂ ಯಶಸ್ಸು ಕಂಡಿರುವುದು ಗಮನಾರ್ಹವಾಗಿದೆ.

ಅತಿ ಹೆಚ್ಚು ಗಳಿಸಿದ ಚಿತ್ರಗಳು
– ಕಬೀರ್‌ ಸಿಂಗ್‌ 276.34 ಕೋಟಿ ರೂ.
– ಉರಿ ದಿ ಸರ್ಜಿಕಲ್‌ ಸ್ಟ್ರೈಕ್‌ 244 ಕೋಟಿ ರೂ.
– ಭಾರತ್‌ 197.34 ಕೋಟಿ ರೂ
– ಮಿಷನ್‌ ಮಂಗಲ್‌ 192.73 ಕೋಟಿ ರೂ.,
– ಟೋಟಲ್‌ ಧಮಾಲ್‌ 150.07 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next