Advertisement
ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ (ಐಎಆರ್‌ಸಿ) ತಜ್ಞರು ಹಾಗೂ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿರುವ ಸಂಶೋಧನಾ ವರದಿಯಲ್ಲಿ ಈ ವಿಚಾರ ಉಲ್ಲೇಖೀಸಲಾಗಿದೆ. ಇವರ ಈ ಸಂಶೋಧನೆ “ನೇಚರ್ ಫುಡ್’ ಎಂಬ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ಪ್ರಕಟಿಸುವ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿವೆ.
ಭಾರತದಲ್ಲಿ ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಗೋಧಿ ಬಿತ್ತನೆ ಮಾಡಲಾಗುತ್ತದೆ. ಈ ಅವಧಿಯಲ್ಲಿ ಗೋಧಿ ಬಿತ್ತಿದರೆ ಗೋಧಿ ಪೈರು ಕಾಳು ಕಟ್ಟುವ ಹೊತ್ತಿಗೆ ವಾತಾವರಣದಲ್ಲಿ ಬಿಸಿ ಏರಿಕೆಯಾಗಿ ಅವುಗಳಲ್ಲಿ ಹಲವು ಕಾಳುಗಳು ಜೊಳ್ಳಾಗುವ ಸಾಧ್ಯತೆಯಿರುತ್ತದೆ. ಆದರೆ, ಅವಧಿಗೂ ಮೊದಲೇ ಬಿತ್ತನೆ ಮಾಡಿದಾಗ ವಾತಾವರಣದಲ್ಲಿ ಬಿಸಿ ಏರುವ ಹೊತ್ತಿಗೆ ಅವು ಗಟ್ಟಿ ಕಾಳು ಕಟ್ಟಿರುತ್ತವೆ. ಇದರಿಂದ, ಅವು ಬಿಸಿಲಬೇಗೆಯನ್ನು ಸಹಿಸಿ ಬೆಳೆಯಲು ಸಾಧ್ಯವಾಗುತ್ತದೆ. ಅದರಿಂದ, ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಅಕ್ಕಿ ಇಳುವರಿ ಹೆಚ್ಚಿಸಲೂ ಈ ಪ್ರಯೋಗ ಅಳವಡಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.