Advertisement
ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆ ಹಾಗೂ ಏತಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಅಗಲ್ಪಾಡಿ ಹೆ„ಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದು, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದರು. ಅಧ್ಯಾಪನ ವೃತ್ತಿಯತ್ತ ಆಕರ್ಷಿತರಾದ ಅವರು ಕಲ್ಲಿಕೋಟೆ ವಿಶ್ವವಿದ್ಯಾಲಯದ ಶಿಕ್ಷಕ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿ ಕುಂಡಂಕುಳಿ ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕರಾಗಿ ತಮ್ಮ ಔದ್ಯೋಗಿಕ ಜೀವನಕ್ಕೆ ಕಾಲಿರಿಸಿದರು. ಮುಂದೆ ಪಾಂಡಿ, ಅಡೂರು, ಅಂಗಡಿಮೊಗರು ಶಾಲೆಗಳಲ್ಲಿ ತಾತ್ಕಾಲಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ 1998ರಲ್ಲಿ ಪಡ್ರೆ ಹೆ„ಸ್ಕೂಲಲ್ಲಿ ಶಿಕ್ಷಕರಾಗಿ ಸರಕಾರಿ ಸೇವೆಗೆ ಪಾದಾರ್ಪಣೆ ಮಾಡಿದರು. 2006ರಲ್ಲಿ ಅದೇ ಶಾಲೆಯಲ್ಲಿ ಇಲಾಖಾ ವರ್ಗಾವಣೆಯ ಮುಖಾಂತರ ಹೈಯರ್ ಸೆಕೆಂಡರಿ ವಿಭಾಗದ ಉಪನ್ಯಾಸಕರಾಗಿ ಭಡ್ತಿ ಹೊಂದಿ 2013ರಲ್ಲಿ ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ವರ್ಗಾವಣೆಗೊಂಡರು. ಓದು ಮತ್ತು ಯಕ್ಷಗಾನದಲ್ಲಿ ವಿಶೇಷ ಒಲವು ಹೊಂದಿರುವ ನಾರಾಯಣ ರಾವ್ ಡಿ.ಪಿ.ಇ.ಪಿ.ಯಿಂದ ತೊಡಗಿ ಎಸ್.ಎಸ್.ಎ. ವರೆಗೆ ಕನ್ನಡ ಪಠ್ಯಪುಸ್ತಕ ಸಮಿತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಪೂರ್ವ ಸೇವೆ ಸಲ್ಲಿಸಿದರು. ಪಡ್ರೆ ಶಾಲೆಯಲ್ಲಿ ಸುಮಾರು 5 ವರ್ಷಗಳ ಕಾಲ ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹೀಂ ಪಾವಲುಕೋಡಿ, ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಪಿ. ಅಬ್ದುಲ್ಲ ಹಾಜಿ, ನಿವೃತ್ತ ಶಿಕ್ಷಣ ಉಪನಿರ್ದೇಶಕರಾದ ಶ್ರೀನಿವಾಸ ಕೆ., ನಿವೃತ್ತ ಶಿಕ್ಷಕ ರತ್ನಕುಮಾರ್, ಮಾಜಿ ಪಿಟಿಎ ಅಧ್ಯಕ್ಷ ಲಾರೆನ್ಸ್ ಡಿ’ಸೋಜ ಶುಭಾಶಂಸನೆಗೈದರು. ಪಿಟಿಎ ಉಪಾಧ್ಯಕ್ಷರಾದ ರಮೇಶ್ ಪೈವಳಿಕೆ, ಕ್ರೆಸೆಂಟ್ ನ್ಪೋರ್ಟ್ಸ್ ಕ್ಲಬ್‌ನ ಅಬ್ದುಲ್ ರಹಿಮಾನ್, ವೆಂಕಟರಮಣ ನಾಯಕ್, ಕುಞಿಕೃಷ್ಣನ್ ಉಪಸ್ಥಿತರಿದ್ದರು. ಶ್ರದ್ಧಾ ಎನ್. ಭಟ್ ಪ್ರಾರ್ಥನೆ ಹಾಡಿದರು. ಹೈಯರ್ ಸೆಕೆಂಡರಿ ವಿಭಾಗದ ವಿಶ್ವನಾಥ ಕುಂಬಳೆ ಸ್ವಾಗತಿಸಿದರು, ಎಸ್‌ಆರ್‌ಜಿ ಸಂಚಾಲಕ ರವೀಂದ್ರನಾಥ್ ಕೆ.ಆರ್. ವಂದಿಸಿದರು. ಶಾಲಾ ನೌಕರರ ಸಂಘದ ಕಷ್ಣಮೂರ್ತಿ ಎಂ.ಎಸ್.
ಕಾರ್ಯಕ್ರಮ ನಿರೂಪಿಸಿದರು.