Advertisement
ತಾಲ್ಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೂಸ ಅನುದಾನಿತ ವಿವಿಗಳ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಾವು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಹವಣಿಕೆ ಹೊಂದಿದ್ದೇವೆ.
Related Articles
Advertisement
ಭಾರತದ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಸಡ್ಡೆ ಮಾತುಗಳನ್ನಾಡುತ್ತಿದ್ದರು. ಆದರೆ ಇಂದು ಇಸ್ರೋ ಚಂದ್ರಯಾನ ಮತ್ತು ಮಂಗಳಯಾನ ಯಶಸ್ವಿಗೊಳಿಸಿದೆ. ಒಂದೇ ಬಾರಿ ನೂರನಾಲ್ಕು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ಅಭಿವೃದ್ಧಿ ಹೊಂದಿದ ದೇಶಗಳು ಹುಬ್ಬೇರಿಸುವಂತೆ ಮಾಡಿದೆ.
ಇತರೆ ರಾಷ್ಟ್ರಗಳು ಇಂದು ತಮ್ಮ ಉಪಗ್ರಹಗಳ ಉಡಾವಣೆಗೆ ಭಾರತದ ಸಹಕಾರ ಕೋರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಬಿ.ಬಿ ಕಲಿವಾಳ ಮಾತನಾಡಿ, ಭಾರತದಲ್ಲಿಯೇ ರೂಸಾದಿಂದ ಅನುದಾನ ಪಡೆದ ಕಿರಿಯ ವಿಶ್ವವಿದ್ಯಾನಿಲಯ ನಮ್ಮದಾಗಿದೆ.
ಈ ಅನುದಾನ ಬಳಕೆ ಮಾಡಿಕೊಂಡು ಅನೇಕ ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ಅನುಕೂಲವಾಗಲಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂದು ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ. ಅದನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಾರ್ಯಕಾರಿ ನಿರ್ದೇಶಕ ಡಾ| ಎಸ್.ಎ. ಕೋರಿ, ತುಮಕೂರು ವಿವಿ ಕುಲಪತಿ ಪ್ರೊ| ಎ.ಎಚ್. ರಾಜಾಸಾಬ್, ಮಂಗಳೂರು ವಿವಿ ಕುಲಪತಿ ಪ್ರೊ| ಕೆ. ಭೈರಪ್ಪ, ದಾವಿವಿ ಕುಲಸಚಿವ ಪ್ರೊ| ಎಸ್.ವಿ ಹಲಸೆ, ಪರೀûಾಂಗ ಕುಲಸಚಿವ ಪ್ರೊ| ಗಂಗಾನಾಯ್ಕ ವೇದಿಕೆಯಲ್ಲಿದ್ದರು.