Advertisement

ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿ

01:40 PM Jun 21, 2019 | Suhan S |

ಮಳವಳ್ಳಿ: ತಾಲೂಕಿನ ಖಾಸಗಿ ಶಾಲೆಗಳು ಪೋಷಕರಿಂದ ಅಧಿಕ ಶುಲ್ಕ ವಸೂಲಿ ಮಾಡಿ ಅದಕ್ಕೆ ಯಾವುದೇ ರಶೀದಿ ನೀಡದೆ ವಂಚಿಸುತ್ತಿರುವುದರಿಂದ ಎಲ್ಲಾ ಖಾಸಗಿ ಶಾಲೆಗಳು ನಿಗದಿತ ಶುಲ್ಕವನ್ನು ಸೂಚನಾ ಫ‌ಲಕಗಳನ್ನು ಕಡ್ಡಾಯವಾಗಿ ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಸಮನ್ವಯ ಅಧಿಕಾರಿ ಯೋಗೇಶ್‌ ಅವರಿಗೆ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.

Advertisement

ಕರ್ನಾಟಕ ಜನಪರ ವೇದಿಕೆಯ ಯುವ ಘಟಕ ರಾಜ್ಯಾಧ್ಯಕ್ಷ ಶ್ರೀನಿವಾಸ್‌ ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ಪೋಷಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಾ ಸುಲಿಗೆ ಮಾಡುತ್ತಿವೆ. ಸರ್ಕಾರದಿಂದ ನಿಗದಿಪಡಿಸಿರುವ ಶುಲ್ಕದ ಮಾಹಿತಿಯನ್ನು ಪ್ರಕಟಣಾ ಫ‌ಲಕದಲ್ಲಿ ಪ್ರದರ್ಶಿಸುವಂತೆ ಸೂಚಿಸಿದ್ದರೂ ಕೇವಲ ಸರ್ಕಾರಕ್ಕೆ ಮಾಹಿತಿ ನೀಡುವುದಕ್ಕೆ ಮಾತ್ರ ಫೋಟೋ ಹೊಡೆದು ಕಳುಹಿಸಿ ನಂತರ ತೆರವುಗೊಳಿಸಿವೆ. ಪೋಷಕರಿಗೂ ಸರ್ಕಾರದ ನಿಖರ ಶುಲ್ಕ ಮಾಹಿತಿ ತಿಳಿಯುವಂತೆ ಪ್ರದರ್ಶಿಸಬೇಕೆಂದು ತಾಕೀತು ಮಾಡಿದರು.

ಶಾಲೆಗಳ ನವೀಕರಣ ರದ್ದುಪಡಿಸಿ: ಆರ್‌ಟಿಇ ವಿದ್ಯಾರ್ಥಿಗಳಿಂದಲೂ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ತಾಲೂಕಿನ ಹಲವಾರು ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದಿದ್ದರೂ ಮಾನ್ಯತೆ ನೀಡಲಾಗಿದೆ. ಪ್ರತಿವರ್ಷವೂ ಕೂಡ ನವೀಕರಣ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಶಾಲೆಯ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡುತ್ತಿಲ್ಲ. ಮೂಲ ಸೌಕರ್ಯವಿಲ್ಲದ ಶಾಲೆಗಳ ನವೀಕರಣವನ್ನು ತಕ್ಷಣದಿಂದಲೇ ರದ್ದುಪಡಿಸುವಂತೆ ಆಗ್ರಹಿಸಿದರು.

ಅರ್ಹ ಶಿಕ್ಷಕರನ್ನು ನೇಮಿಸಿ:

ಖಾಸಗಿ ಶಾಲೆಗಳಲ್ಲಿ ಅರ್ಹತೆ ಇಲ್ಲದವರೂ ಕೂಡ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹೆಚ್ಚು ಹಣ ವಸೂಲಿ ಮಾಡಿಕೊಂಡು ಪಿಯುಸಿಯಲ್ಲಿಯೂ ಫೇಲಾಗಿರುವವನ್ನು ಶಿಕ್ಷಕರಾಗಿ ನೇಮಕ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಅರ್ಹ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅದೇಶ ಹೊರಡಿಸಬೇಕೆಂದು ಒತ್ತಾಯಿಸಿದ ಅವರು, ತಾವು ಸಲ್ಲಿಸಿರುವ ಮನವಿಗೆ ಸ್ಪಂದಿಸಿ ಆಗತ್ಯ ಕ್ರಮ ಕೈಗೊಳ್ಳದಿದ್ದರೆ ಜೂ 25ರಂದು ಆಮರಣಾಂತ ಉಪವಾಸವನ್ನು ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

Advertisement

ಈ ವೇಳೆ ಕರ್ನಾಟಕ ಜನಪರ ವೇದಿಕೆಯ ಸುರೇಶ, ಮಹದೇವು, ವೀರಸ್ವಾಮಿ, ಶಿವಮೂರ್ತಿ, ರಮೇಶ್‌, ನಾಗರಾಜು, ಮಲ್ಲಿಕಾರ್ಜುನಸ್ವಾಮಿ, ವೇದಾವತಿ, ತಮ್ಮಯ್ಯ, ಕೃಷ ಚಂದ್ರಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next