Advertisement

ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರ ಬಳಸಿದರೆ ಹೆಚ್ಚು ಇಳುವರಿ

09:12 PM Jun 19, 2019 | Lakshmi GovindaRaj |

ಚಿಕ್ಕಬಳ್ಳಾಪುರ: ರೈತರು ಯಾವುದೇ ಬೆಳೆ ತೆಗೆಯಬೇಕಾದರೂ ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಸಮತೋಲನ ಬಳಕೆಯಿಂದ ಮಣ್ಣಿನ ಆರೋಗ್ಯ ಕಾಪಾಡಲು ಸಾಧ್ಯ. ಇದರಿಂದ ರೈತರಿಗೆ ಬೇಸಾಯದ ಖರ್ಚು ಕಡಿಮೆಯಾಗುವುದಲ್ಲದೇ ಗುಣಮಟ್ಟದ ಇಳುವರಿಯಿಂದ ಅಧಿಕ ಲಾಭ ಪಡೆಯಬಹುದು ಎಂದು ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಬಿ.ಗಾಯತ್ರಿ ತಿಳಿಸಿದರು.

Advertisement

ಜಿಲ್ಲೆಯ ಕುರುಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಜಿಲ್ಲೆಯ ರೈತರಿಗೆ ಪ್ರಮುಖ ಬೆಳೆಗಳಲ್ಲಿ ರಸಗೊಬ್ಬರ ಅಸಮತೋಲನ ಬಳಕೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಸಗೊಬ್ಬರಗಳ ಬಳಕೆಯಿಂದ ಭೂಮಿಯ ಫ‌ಲವತ್ತತೆ ಕ್ಷಿಣಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ರೈತರು ರಸಗೊಬ್ಬರಗಳ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ಎಂದರು.

ಒಮ್ಮೆ ಮಣ್ಣಿನ ಫ‌ಲವತತ್ತೆ ಕುಸಿದರೆ ಅದರ ಪುನಶ್ಚೇತನ ಬಹಳ ಕಷ್ಟ. ರೈತರು ಡಿಎಪಿ ರಸಗೊಬ್ಬರವನ್ನು ಹೆಚ್ಚಾಗಿ ಬಳಸುವುದು ಸೂಕ್ತವಲ್ಲ ಹಾಗೂ ಪೊಟ್ಯಾಷ್‌ನ ಬಳಕೆಗೆ ಒತ್ತು ನೀಡಬೇಕು. ರೈತರಿಗೆ ಯಾವ ಬೆಳೆಗೆ ಯಾವ ಗೊಬ್ಬರ ಬಳಸಬೇಕು, ರಾಸಾಯನಿಕ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ.ಆರ್‌.ಮಂಜುನಾಥ, ಬೇಸಾಯಶಾಸ್ತ್ರದ ವಿಜ್ಞಾನಿಗಳಾದ ವಿಶ್ವನಾಥ್‌ ಕೊಟ್ಟಿಗೆ ಗೊಬ್ಬರವನ್ನು ಟ್ರೆçಕೋಡರ್ಮದೊಂದಿಗೆ ಉಪಚರಿಸಿ ಮಣ್ಣಿಗೆ ಸೇರಿಸುವ ತಂತ್ರಜ್ಞಾನದ ಬಗ್ಗೆ ತಿಳಿಸಿ ಮಣ್ಣಿನಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕಿ ಅರುಣಾ, ಸಿಬ್ಬಂದಿ ವರ್ಗದವರು ಹಾಗೂ ಜಿಲ್ಲೆಯ 30 ರೈತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next