Advertisement

ಭಾಲ್ಕಿ ಹೆಚ್ಚು-ಬೀದರನಲ್ಲಿ ಕಡಿಮೆ ಮತದಾನ

03:59 PM May 14, 2018 | Team Udayavani |

ಬೀದರ: ವಿಧಾನಸಭೆ ಚುನಾವಣೆಗೆ ಶನಿವಾರ ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೆ ನಡೆದಿದ್ದು, ಒಟ್ಟಾರೆ ಶೇ.67.66ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಭಾಲ್ಕಿ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.73.66ರಷ್ಟು ಮತದಾನ
ನಡೆದಿದ್ದರೆ ಬೀದರ ಉತ್ತರ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.63.51ರಷ್ಟು ಮತದಾನ ದಾಖಲಾಗಿದೆ. ಇನ್ನುಳಿದಂತೆ
ಬಸವಕಲ್ಯಾಣ ಕ್ಷೇತ್ರದಲ್ಲಿ ಶೇ. 64.56, ಹುಮನಾಬಾದ ಕ್ಷೇತ್ರದಲ್ಲಿ ಶೇ. 66.42, ಬೀದರ ದಕ್ಷಿಣ ಕ್ಷೇತ್ರದಲ್ಲಿ ಶೇ. 69.55 ಮತ್ತು ಔರಾದ ಕ್ಷೇತ್ರದಲ್ಲಿ ಶೇ. 68.28ರಷ್ಟು ಮತದಾನ ಆಗಿದೆ ಎಂದು ಜಿಲ್ಲಾ ಚುನಾವಣಾಧಿ ಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಜಿಲ್ಲೆಯಲ್ಲಿ 6,86,890 ಪುರುಷರು ಮತ್ತು 6,31,620 ಮಹಿಳೆಯರು ಸೇರಿ ಒಟ್ಟಾರೆ 13,18,578 ಮತದಾರರು ಇದ್ದಾರೆ. ಈ ಪೈಕಿ 8,91,833 (ಶೇ.67.66) ಜನರು ಮತದಾನ ಮಾಡಿದ್ದು ಅದರಲ್ಲಿ 4,64,324 (ಶೇ.67.65)
ಪುರುಷರು ಹಾಗೂ4,27,509 (ಶೇ.67.70) ಮಹಿಳೆಯರು ಸೇರಿದ್ದಾರೆ.

ಬಸವಕಲ್ಯಾಣ ಕ್ಷೇತ್ರ: ಈ ಕ್ಷೇತ್ರದಲ್ಲಿ 1,18,401 ಪುರುಷರು, 1,05,901 ಮಹಿಳೆಯರು ಸೇರಿ 2,24,317 ಮತರಾರಿದ್ದಾರೆ. ಈ ಪೈಕಿ 1,44,824 ಜನ ಮತದಾನ ಮಾಡಿದ್ದು, ಅದರಲ್ಲಿ 75,341 (ಶೇ.63.63)ಪುರುಷರು, 69,483 (65.61) ಮಹಿಳೆಯರು ಸೇರಿದ್ದಾರೆ.

ಹುಮನಾಬಾದ ಕ್ಷೇತ್ರ: ಈ ಕ್ಷೇತ್ರದಲ್ಲಿ 1,24,402 ಪುರುಷರು, 1,14,213 ಮಹಿಳೆಯರು ಸೇರಿ 2,38,628
ಮತದಾರರಿದ್ದಾರೆ. ಈ ಪೈಕಿ 1,58,496 ಜನ ಮತದಾನದ ಹಕ್ಕು ಚಲಾಯಿಸಿದ್ದು, ಅದರಲ್ಲಿ 81,088 (ಶೇ.65.18)ಪುರುಷರು, 77,408 (67.78) ಮಹಿಳೆಯರು ಸೇರಿದ್ದಾರೆ.

ಬೀದರ ದಕ್ಷಿಣ ಕ್ಷೇತ್ರ: ಈ ಕ್ಷೇತ್ರದಲ್ಲಿ 1,03,539 ಪುರುಷರು, 96,068 ಮಹಿಳೆಯರು ಸೇರಿ 1,99,611 ಮತದಾರರಿದ್ದಾರೆ. ಈ ಪೈಕಿ 1,38,828 ಜನ ಮತದಾನ ಮಾಡಿದ್ದು, ಅದರಲ್ಲಿ 72,332 (ಶೇ. 69.86) ಪುರುಷರು, 66,496 (69.22) ಮಹಿಳೆಯರು ಸೇರಿದ್ದಾರೆ.

Advertisement

ಬೀದರ ಕ್ಷೇತ್ರ: ಈ ಕ್ಷೇತ್ರದಲ್ಲಿ 1,10,990 ಪುರುಷರು, 1,05,836 ಮಹಿಳೆಯರು ಸೇರಿ 2,16,853 ಮತದಾರರಿದ್ದಾರೆ. ಈ ಪೈಕಿ 1,37,722 ಜನ ಮತದಾನದ ಹಕ್ಕು ಚಲಾಯಿಸಿದ್ದು, ಅದರಲ್ಲಿ 72,217 (ಶೇ.65.07) ಪುರುಷರು, 65,505 (61.89) ಮಹಿಳೆಯರು ಸೇರಿದ್ದಾರೆ.

ಭಾಲ್ಕಿ ಕ್ಷೇತ್ರ: ಈ ಕ್ಷೇತ್ರದಲ್ಲಿ 1,17,884 ಪುರುಷರು, 1,06,815 ಮಹಿಳೆಯರು ಸೇರಿ 2,24,708 ಮತದಾರರಿದ್ದಾರೆ. ಈ ಪೈಕಿ 1,65,520 ಜನ ಮತದಾನ ಮಾಡಿದ್ದು, ಅದರಲ್ಲಿ 86,552 (ಶೇ. 73.42)ಪುರುಷರು,
78,968 (ಶೇ. 73.93) ಮಹಿಳೆಯರು ಸೇರಿದ್ದಾರೆ. 

ಔರಾದ ಕ್ಷೇತ್ರ: ಈ ಕ್ಷೇತ್ರದಲ್ಲಿ 1,11,674 ಪುರುಷರು, 1,02,787 ಮಹಿಳೆಯರು ಸೇರಿ 2,14,461 ಮತದಾರರಿದ್ದಾರೆ. ಈ ಪೈಕಿ 1,46,443 ಜನ ಮತದಾನದ ಹಕ್ಕು ಚಲಾಯಿಸಿದ್ದು, ಅದರಲ್ಲಿ 76,794 (ಶೇ. 68.77) ಪುರುಷರು, 69,649 (ಶೇ.67.76) ಮಹಿಳೆಯರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next