Advertisement

Bhadra ಕಾಲುವೆಗೆ ನೀರು ಹರಿಸುವ ಸಂಬಂಧ ಹೈವೋಲ್ಟೇಜ್ ಸಭೆ

04:04 PM Sep 06, 2023 | Team Udayavani |

ಶಿವಮೊಗ್ಗ: ಭದ್ರಾ ಜಲಾಶಯದಿಂದ ಎಡನಾಲೆಗೆ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಲಾಗುವುದು. ಸೆ.11ರಂದು ಪರಿಸ್ಥಿತಿ ಅವಲೋಕಿಸಿ ಭದ್ರಾ ಎಡದಂತೆ, ಬಲದಂಡೆ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ತೀರ್ಮಾನ ಹೊರಬೀಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಭದ್ರಾ ಕಾಡಾ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಕೃತಿಯ ಸಮಸ್ಯೆಯಿಂದಾಗಿ ಮಳೆ ಅಭಾವ ಎದುರಾಗಿದೆ. ರೈತರ ಸಮಸ್ಯೆಗಳು ಆಕಡೆ ಭಾಗ ಈಕಡೆ ಭಾಗ ಎಂದು ಎರಡು ಕಡೆ ಕಂಡರೂ ಅವರ ಸಮಸ್ಯೆಯನ್ನು ನಿಭಾಯಿಸಬೇಕಿದೆ. ಕಾಡಾ ಅಧ್ಯಕ್ಷನಾಗಿ ಮೊದಲ ಸಭೆ ಇದಾಗಿದೆ. ನಾನು ಅಧ್ಯಕ್ಷ ಆಗುವ ಮೊದಲೇ ಅಧಿಕಾರಿಗಳು ತೀರ್ಮಾನ ಮಾಡಿ ಮೂರು ದಿವಸ ನೀರು ಬಿಟ್ಟಿದ್ದಾರೆ.ಆದರೆ ಇಂದು ತೆಗೆದುಕೊಂಡ ತಾತ್ಕಾಲಿಕ ತೀರ್ಮಾನದಲ್ಲಿ ನಾಲ್ಕೈದು ದಿನ ಸಮಯಾವಕಾಶ ಪಡೆದುಕೊಂಡಿದ್ದನೆ. ನಾಲ್ಕೈದು ದಿನಗಳಲ್ಲಿ ದುರಂತ ಆಗುವಂತ ಸಂದರ್ಭಗಳು ಎದುರಾಗೋದಿಲ್ಲ. ಆದರೆ ಅಷ್ಟರೊಳಗೆ ಎಡದಂಡೆ ನಾಲೆ ಭಾಗದ ನೀರನ್ನು ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದೆಡೆ ಕುಡಿಯುವ ನೀರಿನ ಸಮಸ್ಯೆ ಹಾಗು ಬೇಸಿಗೆಯಲ್ಲಿ ನೀರಿನ ನಿರ್ವಹಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಮೂರ್ನಾಲ್ಕು ದಿನಗಳಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಎರಡು ನಾಲೆಗಳಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದರು.

ಇಂದಿನ ತೀರ್ಮಾನವನ್ನು ನೀರಾವರಿ ಸಚಿವರ ಗಮನಕ್ಕೂ ತರಲಾಗುವುದು. ಹನ್ನೊಂದನೇ ತಾರೀಖು ಒಂದು ಫೈನಲ್ ನಿರ್ಧಾರ ಮಾಡಬೇಕಾಗುತ್ತದೆ. ಇದು ದುರಂತಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ. ಆಗಸ್ಟ್ ತಿಂಗಳಲ್ಲಿ ಕೇವಲ ಏಳು ಪರ್ಸೆಂಟ್ ಮಳೆಯಾಗಿರುವುದು ಹಿಸ್ಟರಿ. ಅಧಿಕಾರಿಗಳು ಮಳೆ ಬರುವ ಆಶಾವಾದದಲ್ಲಿ ನೂರು ದಿನ ನೀರು ಹರಿಸಲು ಮುಂದಾಗಿದ್ದಾರೆ. ಈ ಬಾರಿ ವಾಡಿಕೆಯಂತೆ ಮಳೆಯಾಗಿದ್ದರೆ ಯಾವ ತೊಂದರೆಯೂ ಆಗುತ್ತಿರಲಿಲ್ಲ,. ಒಳಹರಿವು ಬಹುತೇಕ ನಿಂತು ಹೋಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next