Advertisement

ಅಲೋವೆರಾ ಕೊಟ್ಟ ಹೈ ವೋಲ್ಟೆಜ್‌ ಬ್ಯೂಟಿ 

11:01 AM May 31, 2017 | Harsha Rao |

ಅಂದಕ್ಕೂ, ಆರೋಗ್ಯಕ್ಕೂ ಮದ್ದಾಗುವ ಕೆಲವೇ ಕೆಲವು ನಿಸರ್ಗದ ಉತ್ಪನ್ನಗಳಲ್ಲಿ ಅಲೋವೆರಾ ಪ್ರಮುಖವಾದದ್ದು. ಹಾಗಿದ್ದರೆ, ಏನಿದರ ಉಪಯೋಗ? ತಿಳಿಯೋಣ ಬನ್ನಿ…

Advertisement

1. ಚಿಟಿಕೆ ಅರಿಶಿನ, ಒಂದು ಚಮಚ ಜೇನುಹನಿ, ಒಂದು ಚಮಚ ಹಾಲು, ರೋಸ್‌ ವಾಟರ್‌ನ ಹನಿಗಳನ್ನು ಅಲೋವೆರಾ ಪೇಸ್ಟ್‌ಗೆ ಬೆರೆಸಿ, ಮೈಗೆ ಹಚ್ಚಿಕೊಂಡರೆ, ಡ್ರೈ ಸ್ಕಿನ್‌ ನಿವಾರಣೆ ಆಗುತ್ತದೆ.

2. ಇದರಲ್ಲಿರುವ ಪ್ರೊಟಿಯೋಲಿಟಿಕ್‌ ಅಂಶವು ಕೂದಲು ಉದುರುವುದನ್ನು ತಡೆಯುತ್ತದೆ. ವಾರಕ್ಕೊಮ್ಮೆ ಕೂದಲಿಗೆ ಅಲೋವೆರಾ ಜೆಲ್‌ ಬಳಸಿದರೆ, ರೇಷ್ಮೆಯಂಥ ಕೂದಲು ನಿಮ್ಮದಾಗುವುದು. ಅಲೋವೆರಾ ಕೇಶಕ್ಕೆ ನುಣುಪು ತಂದುಕೊಡುತ್ತದೆ.

3. ಅಲೋವೆರಾದಲ್ಲಿ ವಿಟಮಿನ್‌ ಮತ್ತು ಮಿನರಲ್ಸ್‌ಗಳು ಅಧಿಕವಿರುತ್ತವೆ. ಇದರ ಲೋಳೆ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

4. ಅಲೋವೆರಾ ಜೆಲ್‌ ಅನ್ನು ಪ್ರತಿನಿತ್ಯ ಒಂದರಿಂದ ಮೂರು ಔನ್ಸ್‌ಗಳಷ್ಟನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಪಚನಶಕ್ತಿಯು ಸುಧಾರಿಸುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ.

Advertisement

5. ದೇಹವು ತಾಜಾತನದಿಂದ ಕೂಡಿರಲು ಆಗಿಂದಾಗ್ಗೆ ಅಲೋವೆರಾವನ್ನು ಬಳಸುತ್ತಿರಬೇಕು.

6. ಮುಖದಲ್ಲಿನ ಮೊಡವೆ ನಿವಾರಣೆಗೆ ಇದರಲ್ಲಿನ ಆಕ್ಸಿನ್‌ ಅಂಶ ನೆರವಾಗುತ್ತದೆ.

7. ದುರ್ಗಂಧ ದೂರ ಮಾಡುವುದರಲ್ಲಿ ಇದರ ಪ್ರಯೋಜನ ಬಹಳ. ರಾಸಾಯನಿಕಯುಕ್ತ ಮೌತ್‌ವಾಶ್‌ಗಳನ್ನು ನಿತ್ಯ ಬಳಸುವುದಕ್ಕಿಂತಲೂ, ನ್ಯಾಚುರಲ್‌ ಆಗಿ ಸಿಗುವಂಥ ಅಲೋವೆರಾ ಜೆಲ್‌ ಅನ್ನು ಬಳಸಿದರೆ, ಒಳ್ಳೆಯ ಫ‌ಲಿತಾಂಶ ಸಿಗುತ್ತದೆ.

8. ಅಲೋವೆರಾ ಜ್ಯೂಸ್‌ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ. ಕರುಳಿನ ಸಮಸ್ಯೆಗಳೂ ಬರುವುದಿಲ್ಲ.

9. ನಿತ್ಯ ಒಂದು ಲೋಟ ಅಲೋವೆರಾ ಜ್ಯೂಸನ್ನು ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಹಸಿವು ಕಡಿಮೆಯಾಗಿ, ಆಹಾರ ನಿಯಂತ್ರಣ ಸಾಧ್ಯವಾಗುತ್ತದೆ.

– ಭಾಗ್ಯ ನಂಜುಂಡಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next