Advertisement

ಬಿಸಿಲಿನ ತಾಪ: ತಂಪು ಪಾನೀಯಕ್ಕೆ ಹೆಚ್ಚಿನ ಬೇಡಿಕೆ

10:27 AM Apr 04, 2019 | Naveen |

ಗುರುಮಠಕಲ್‌: ದಿನೇ ದಿನೇ ಬಿಸಲಿನ ತಾಪ ಹೆಚ್ಚಾಗುತ್ತಿದ್ದು, ಬಿಸಲಿನಿಂದ ತಪ್ಪಿಸಿಕೊಳ್ಳಲು ಜನರು ಏನೆಲ್ಲಿ ಸಹಾಸ ಪಡುತ್ತಿದ್ದಾರೆ. ಬಿರು ಬಿಸಲಿನ ತಾಪದಿಂದ ಜನರು ಯಾತನೆ ಅನುಭವಿಸುತ್ತಿದ್ದು, ದಾಹ ತೀರಿಸಿಕೊಳ್ಳುವುದರ ಜತೆಗೆ ದೇಹ ತಂಪು ಮಾಡಿಕೊಳ್ಳಲು ಹಾತೊರೆಯುವಂತೆ ಮಾಡಿದೆ. ಆದರಲ್ಲೂ ವೃದ್ದರು ಪಡುತ್ತಿರುವ ತೊಂದರೆ ಹೇಳತೀರದು. ಇದರಿಂದ ತಂಪು ಪಾನೀಯದ ಜತೆಗೆ ಕಲ್ಲಂಗಡಿ, ದ್ರಾಕ್ಷಿಗಳು ಪಡೆದು ಹೊಟ್ಟೆ ತನ್ನಗಾಗಿಸಿಕೊಂಡು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದು ಸಾಮಾನ್ಯವಾಗಿದೆ.

Advertisement

ವೃದ್ಧರು ಅಂಗಿ ಬಿಚ್ಚಾಕಿ ತಣ್ನನೆ ಗಾಳಿಗೆ ಹಾತೋರಿಯುವಂತೆ ಮಾಡಿದೆ. ತೀವ್ರಗೊಂಡ ಸೆಕೆ, ಬೆವರಿನಿಂದ ತಪ್ಪಿಸಿಕೊಳ್ಳಲು ಫ್ಯಾನ್‌ಗಳಿಗೆ ಮೊರೆ ಹೋಗಿದ್ದಾರೆ. ಮನೆ ಒಳಗಿದ್ದರೆ ಸೆಕೆ, ಹೊರಗೆ ಬಂದರೆ ಬಿಸಿಲು. ಅಲುಗದೆ ನಿಂತಿರುವ ಗಿಡ-ಮರಗಳು, ಯಾವಾಗ ಗಾಳಿ ಬಿಸಿತೋ ಎಂದು ಕಾದು ಕುಳಿತ್ತಿದ್ದಾರೆ. ಮೇಲಿಂದ ಮೇಲೆ ವಿದ್ಯತ್‌ ಕೈಕೊಟ್ಟು ವೃದ್ಧರನ್ನು ನರಳುವಂತೆ ಮಾಡುತ್ತಿದೆ.

ಕಲ್ಲಂಗಡಿಗೆ ಬೇಡಿಕೆ: ಸುಡು ಬಿಸಲಿನ ತಾಪದಿಂದಾಗಿ ಜನರು ತಂಪು ಪಾನೀಯಗಳತ್ತ ಸಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟ ಜೋರಾಗಿದ್ದು, ಬೇಡಿಕೆ ಹೆಚ್ಚಾದಂತೆ ಬೆಲೆಯೂ ಹೆಚ್ಚಾಗತೊಡಗಿದೆ. ಬೋಗಸೆ ಆಕಾರದ ಕಲ್ಲಂಗಡಿಗೆ 15 ರೂ. ಕೆಜಿಯಿಂದ ಆರಂಭವಾಗಿ 30-35ರೂ. ವರೆಗೆ ದರ ಇದೆ. ಪಟ್ಟಣದ ಬಸ್‌ ನಿಲ್ದಾಣ ಸುತ್ತಮುತ್ತ, ವಿವಿಧ ಸ್ಥಳಗಳಲ್ಲಿ ಕಲ್ಲಂಗಡಿ ಮಾರಾಟ ಜೋರಾಗಿದೆ.

ತಂಪು ಪಾನಿಯಕ್ಕೆ ಬೇಡಿಕೆ: ಸೂರ್ಯ ಮೇಲೇಳುತ್ತಿದ್ದಂತೆ ಚುರುಚುರು ಬಿಸಿಲಿನ ತಾಪ ಏರತೊಡಗಿದಂತೆ ನೆರಳು ಹುಡುಕಿ ಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸುಡು ಬಿಸಲಿನಿಂದ ತಪ್ಪಿಸಿಕೊಂಡು ದೇಹ ತಂಪಾಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಪಟ್ಟಣದ ಬಹುತೇಕ ತಂಪು ಪಾನೀಯ ಅಂಗಡಿಯಲ್ಲಿ ಸೋಡಾ, ಶರಬತ್‌, ಮಜ್ಜಿಗೆ ಮುಂತಾದ ತಂಪು ಪಾನೀಯಗಳಿಗೆ ಜನ
ಮುಗಿ ಬೀಳುತ್ತಿದ್ದಾರೆ.

ಬಿಸಲಿನ ಪ್ರತಾಪ ಯಾವ ಮಟ್ಟಕ್ಕೆ ಏರಿದೆ ಎಂದರೆ ಕಾಂಕ್ರಿಟ್‌ ಕಟ್ಟಡ ಬಿಟ್ಟು ಮಣ್ಣಿನ ಮನೆಯತ್ತ ಓಡುವ ಸ್ಥಿತಿ ನಿರ್ಮಾಣವಾಗದೆ. ಕಾಂಕ್ರಿಟ್‌ ಕಟ್ಟಡ ಜತೆಗೆ ಸಿಂಟೆಕ್ಸ್‌ನಲ್ಲಿ ಭರಿಸಲಾದ ನೀರು ಸುಡುತ್ತಿದೆ. ಇಡೀ ಕಟ್ಟಡ ಕಾಯ್ದು ಕಂಡದಂತಾಗಿ ಫ್ಯಾನ್‌ನಿಂದ ಬರುವ ಬಿಸಿಗಾಳಿಯಿಂದ, ಬೆವರಿನ ವಾಸನೆಯಿಂದ ಮತ್ತೇ ಮತ್ತೆ ಸ್ನಾನ ಮಾಡಿ ತಂಪಾಗುವಂತೆ ಬಿಸಲಿನ ತಾಪ ಏರತೊಡಗಿದೆ. ರಾತ್ರಿ ಹಗಲೆನ್ನದೆ ಇಡೀ ದಿವಸ ಫ್ಯಾನ್‌ಗಳು ತಿರುಗುತ್ತಿದ್ದು, ಇದರಿಂದ ವಿದ್ಯುತ್‌ ಬಳಕೆ ಹೆಚ್ಚಲು ಕಾರಣವಾಗಿದೆ.

Advertisement

ಗಿಡ-ಮರಗಳಡಿ ಇರುವ ಕಟ್ಟಡಗಳು, ಗುಡಿ ಗುಂಡರಾಗಳಲ್ಲಿ ಜನರು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ. ಕಾಂಕ್ರಿಟ್‌ ಮನೆಗಳು ಮತ್ತು ಸಿಂಟೆಕ್ಸ್‌ ನೀರು ಬಿಸಿಯಾಗದಂತೆ ಬಿಳಿ ಬಣ್ಣ ಬಡಿಯಲು ಮುಂದಾಗುತ್ತಿರುವುದು ಕಂಡು ಬಂದಿದೆ. ಹೀಗೆ ಬಿರು ಬಿಸಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದೆ.

ಚನ್ನಕೇಶವುಲು ಗೌಡ

Advertisement

Udayavani is now on Telegram. Click here to join our channel and stay updated with the latest news.

Next