ಬಾದಾಮಿ: ಸರಕಾರಿ ಶಾಲೆಗಳು ಖಾಸಗಿಶಾಲೆಗಳನ್ನು ಮೀರಿಸುವಂತೆ ಅಭಿವೃದ್ಧಿ ಪಡಿಸಿಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ,ಸರಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲುಸರಕಾರ ಅನೇಕ ಯೋಜನೆ ಹಮ್ಮಿಕೊಂಡಿದೆ.
ತಾಲೂಕಿನ ಚಿಕ್ಕಮುಚ್ಚಳಗುಡ್ಡ ಸರಕಾರಿ ಆದರ್ಶವಿದ್ಯಾಲಯ ತಾಲೂಕಿನಲ್ಲಿಯೇ ಉತ್ತಮಕಟ್ಟಡ ಹೊಂದುವುದರೊಂದಿಗೆ ಗುಣಮಟ್ಟದಶಿಕ್ಷಣ ನೀಡುತ್ತಿದೆ. ಉತ್ತಮ ಆಟದ ಮೈದಾನ ಹೊಂದಿರುವ ಈ ಶಾಲೆ ಗ್ರಾಮೀಣ ಪ್ರತಿಭೆಗಳಿಗೆಶಿಕ್ಷಣಹಾಗೂ ಕ್ರೀಡಾಚಟುವಟಿಕೆಗಳಲ್ಲಿ ಪ್ರೋತ್ಸಾಹನೀಡುವ ಯೋಜನೆ ಹಾಕಿಕೊಂಡಿದೆ.
ಶಾಲೆಯನ್ನು ನರೇಗಾ ಯೋಜನೆಯಡಿಅಭಿವೃದ್ಧಿ ಪಡಿಸಿ, ಶಾಲೆ ಕಾಂಪೌಂಡ್, ಡೈನಿಂಗ್‌ಹಾಲ್,ಕಿಚನ್ ಹಾಲ್, ಗಾರ್ಡನ್, ಸಮತೋಲನಬಾಸ್ಕೆಟ್‌ಬಾಲ್ ಕ್ರೀಡಾಂಗಣ, ಮಳೆ ನೀರುಕೋಯ್ಲು ಸೇರಿದಂತೆ ಅನೇಕ ಕಾಮಗಾರಿಕೈಗೊಳ್ಳಲಾಗುತ್ತಿದೆ. ಬಾದಾಮಿ ತಾಲೂಕಿನಲ್ಲಿಯೇಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯಾಗಿಸರಕಾರಿ ಆದರ್ಶ ಶಾಲೆಯನ್ನು ನಿರ್ಮಿಸಲಾಗಿದ್ದು,ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ.
ಕ್ರೀಡಾಂಗಣ ನಿರ್ಮಾಣ: ಇಲ್ಲಿ ಉತ್ತಮಗುಣಮಟ್ಟದ ಕ್ರೀಡಾಂಗಣ ನಿರ್ಮಾಣ, ಕ್ರೀಡಾಪರಿಕರಗಳ ಪೂರೈಕೆ ಸೇರಿದಂತೆ ಅವಶ್ಯವಿರುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಶಾಲೆದತ್ತು ಪಡೆದಿರುವ ಜಿಲ್ಲಾ ಪಂಚಾಯಿತಿ ಶಾಲೆಯಸಮಗ್ರ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಲಿದೆ.
ಶಶಿಧರ ವಸ್ತ್ರದ