Advertisement

ಮಲೇಷ್ಯಾದಿಂದ ಆಮದಾಗುವ ತಾಳೆ ಎಣ್ಣೆಗೆ ಹೆಚ್ಚಿನ ಸುಂಕ?

10:19 AM Jan 10, 2020 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಲೇಷ್ಯಾ ಸರ್ಕಾರ ಹೊಂದಿರುವ ನಿಲುವು ಭಾರತ ಜತೆಗಿನ ವಾಣಿಜ್ಯಿಕ ಬಾಂಧವ್ಯಗಳಿಗೂ ಅಡ್ಡಿಯಾಗುವ ಸಾಧ್ಯತೆ ಅಧಿಕವಾಗಿದೆ.

Advertisement

ಆ ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ತಾಳೆ ಎಣ್ಣೆ ಮತ್ತು ಇಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಬಗ್ಗೆ ಯೋಚನೆಗಳು ನಡೆದಿವೆ. ಈ ಬಗ್ಗೆ ವಿವಿಧ ಸಚಿವಾಲಯಗಳ ಜತೆಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ತನ್ನ ನಿಲುವುಗಳ ವಿರುದ್ಧ ಅಭಿಪ್ರಾಯ ಹೊಂದಿರುವ ರಾಷ್ಟ್ರಗಳ ಜತೆಗೆ ಕಠಿಣವಾಗಿ ವರ್ತಿಸಲು ಮುಂದಾಗಿದೆ. ವಿವಾದಾತ್ಮಕ ಧಾರ್ಮಿಕ ವಿದ್ವಾಂಸ ಡಾ.ಜಕೀರ್‌ ನಾಯ್ಕ, ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಗ್ಗೆ ಮಲೇಷ್ಯಾ ಪ್ರಧಾನಿ ಡಾ.ಮಹಾತಿರ್‌ ಮೊಹಮ್ಮದ್‌ ಆಡಿದ್ದ ಮಾತುಗಳು ಮೋದಿ ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next